ಕ್ರಿಕೆಟ್‌ ಪ್ರೇಮಿಗಳಿಗೆ ನಿರಾಶೆ: ಏಷ್ಯಾಕಪ್‌ 2020 ರದ್ದು ಮಾಡಿರುವುದಾಗಿ ಬಿಸಿಸಿಐ ಸ್ಪಷ್ಟನೆ!

ಏಷ್ಯಾಕಪ್ 2020 ಕ್ರಿಕೆಟ್‌ ಟೂರ್ನಿಯನ್ನು ರದ್ದು ಮಾಡಲಾಗಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರು ಪ್ರಕಟಿಸಿದ್ದಾರೆ.

ಇಂದು (ಜುಲೈ 9) ನಡೆಯಲಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸಭೆಗೂ ಮುನ್ನವೇ ಗಂಗೂಲಿಯವರು ಕ್ರಿಕೆಟ್‌ ರದ್ದತಿಯ ಬಗ್ಗೆ ಘೋಷಣೆ ಮಾಡಿದ್ದಾರೆ. ಆದರೆ, ಎಸಿಸಿ ಈ ನಿರ್ಧಾರವನ್ನು ಪರಸ್ಕರಿಸುವುದೇ ಇಲ್ಲವೇ ಇಂದು ಅವರು ತಿಳಿಸಿಲ್ಲದ ಕಾರಣ ಕಾದು ನೋಡಬೇಕಿದೆ.

ಏಷ್ಯಾಕಪ್ 2020 ಕುರಿತು ಎಸಿಸಿ ಅಧ್ಯಕ್ಷ ನಜ್ಮುಲ್ ಹಸನ್ ಅವರು ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಬಿಸಿಸಿಐ ಅಧ್ಯಕ್ಷ ಗಂಗೂಲಿಯವರು ಸ್ಪೋರ್ಟ್ಸ್ ತಕ್ ಸುದ್ದುವಾಹಿನಿಯೊಂದಿಗೆ ಮಾಡನಾಡುತ್ತಾ ಈ ಕ್ರಿಕೆಟ್‌ ರದ್ದುಮಾಡಿರುವುದಾಗಿ ಖಚಿತಪಡಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಆತಿಥ್ಯದಲ್ಲಿ ಇದೇ ಸೆಪ್ಟೆಂಬರ್ ನಲ್ಲಿ ಯುಎಇಯಲ್ಲಿ ಏಷ್ಯಾಕಪ್ ಟೂರ್ನಿ ನಿಗದಿಯಾಗಿತ್ತು. ಆದರೆ, ವಿಶ್ವದಾದ್ಯಂತ ಕೊರೊನಾ ವೈರಸ್‌ ವ್ಯಾಪಕವಾಗಿ ಹರಡುತ್ತಿರುವ  ಹಿನ್ನೆಲೆಯಲ್ಲಿ ಏಷ್ಯಾಕಪ್ 2020 ಟೂರ್ನಿಯನ್ನು ರದ್ದು ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights