Iron Lady: ಇಂದಿರಾ ಗಾಂಧಿಯವರ ದೃಢತೆ, ಅದಮ್ಯ ಧೈರ್ಯವೇ ನಮಗೆ ಸ್ಪೂರ್ತಿ: ಮಹಿಳಾ ಕಾಂಗ್ರೆಸ್
ಇಂದು (ನ.19) ಭಾರತ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನ. ಅವರ 103ನೇ ಜನ್ಮ ವಾರ್ಷಿಕೋತ್ಸವವನ್ನು ಕಾಂಗ್ರೆಸ್ ಇಂದು ದೇಶಾದ್ಯಂತ ಆಚರಿಸುತ್ತಿದೆ. ಇಂಧಿರಾ ಗಾಂಧಿಯವರನ್ನು ಸ್ಮರಿಸಿರುವ ಕಾಂಗ್ರೆಸ್, ಅವರ ಪ್ರಭಾವಶಾಲಿ ನಾಯಕತ್ವಕ್ಕೆ ಇಡೀ ದೇಶವೇ ಉದಾಹರಣೆಯಾಗಿದೆ ಎಂದು ಹೇಳಿದೆ.
ಯುವ ಕಾಂಗ್ರೆಸ್‌ನ ಕಾರ್ಯಕರ್ತರು ದೆಹಲಿಯ ಬಡ ಮತ್ತು ನಿರ್ಗತಿಕರಿಗೆ ಜನರಿಗೆ ಕಂಬಳಿ ವಿತರಿಸುವ ಮೂಲಕ ಅವರ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ.
ಇಂದು ರಾಹುಲ್‌ಗಾಂಧಿ ನವದೆಹಲಿಯ ‘ಶಕ್ತಿ ಸ್ಥಳ್’ನಲ್ಲಿರುವ ಇಂಧಿರಾಗಾಂಧಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ಇಂದಿರಾಗಾಂಧಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು.
1917 ರ ನವೆಂಬರ್ 19 ರಂದು ಜನಿಸಿದ ಇಂದಿರಾ ಗಾಂಧಿ ಪ್ರಧಾನಮಂತ್ರಿಯಾಗಿ 1966 ರಿಂದ 1977 ರವರೆಗೆ ಮತ್ತು 1980 ರಿಂದ 1984 ರಲ್ಲಿ ಅವರ ಹತ್ಯೆಯವರೆಗೂ ಸೇವೆ ಸಲ್ಲಿಸಿದರು.
“ಇಡೀ ದೇಶವು ಅವರ ಪ್ರಭಾವಶಾಲಿ ನಾಯಕತ್ವದ ಉದಾಹರಣೆಯನ್ನು ನೀಡುತ್ತದೆ. ಆದರೆ ನಾನು ಅವರನ್ನು ನನ್ನ ಪ್ರೀತಿಯ ಅಜ್ಜಿ ಎಂದು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ಅವರ ಬೋಧನೆಗಳು ನನಗೆ ನಿರಂತರವಾಗಿ ಸ್ಫೂರ್ತಿ ನೀಡುತ್ತವೆ” ಎಂದು ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಟ್ವೀಟ್ ಮಾಡಿದ್ದಾರೆ.
एक कार्यकुशल प्रधानमंत्री और शक्ति स्वरूप श्रीमती इंदिरा गांधी जी की जयंती पर श्रद्धांजलि।
पूरा देश उनके प्रभावशाली नेतृत्व की आज भी मिसाल देता है लेकिन मैं उन्हें हमेशा अपनी प्यारी दादी के रूप में याद करता हूँ। उनकी सिखायी हुई बातें मुझे निरंतर प्रेरित करती हैं। pic.twitter.com/9RHDnAClOJ
— Rahul Gandhi (@RahulGandhi) November 19, 2020
“ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಶಕ್ತಿಯ ಸಾಕಾರಕ್ಕೆ ನಾವು ಗೌರವವನ್ನು ಸಲ್ಲಿಸುತ್ತೇವೆ. ರಾಷ್ಟ್ರದ ಪ್ರಗತಿಯ ಬಗೆಗಿನ ಅವರ ಒಲವು ಮತ್ತು ದೃಢತೆ, ಅತ್ಯಂತ ಕಷ್ಟಕರ ಸಂದರ್ಭಗಳನ್ನು ನಿವಾರಿಸುವ ಅವರ ಅದಮ್ಯ ಧೈರ್ಯವು ನಮಗೆ ಸ್ಫೂರ್ತಿಯಾಗಿದೆ” ಎಂದು ಮಹಿಳಾ ಕಾಂಗ್ರೆಸ್ ಹೇಳಿದೆ.
“ಅವರ ದೂರದೃಷ್ಟಿ, ನಿಜವಾದ ನಾಯಕತ್ವ ಮತ್ತು ಶ್ರೇಷ್ಟ ಆಡಳಿತದಿಂದಾಗಿ ನಮ್ಮ ತಾಯಿನಾಡಿನ ದೊಡ್ಡ ಮಗಳಾಗಿದ್ದ ಇಂದಿರಾ ಗಾಂಧಿ ದೇಶದ ಜನರಿಗೆ ಪ್ರಧಾನ ಮಂತ್ರಿಗಿಂತ ಗೆಚ್ಚಾಗಿದ್ದರು. ಅಭಿವೃದ್ಧಿ ಮತ್ತು ಸಮೃದ್ಧಿಯ ಅನ್ವೇಷಣೆ, ದೇಶವನ್ನು ಪುನರುಜ್ಜೀವನಗೊಳಿಸುವ ಶಕ್ತಿ ಹೊಂದಿದ್ದ ಭಾರತದ ಇಂದಿರಾಗೆ ಹೆಮ್ಮೆಯ ಗೌರವ ಸಲ್ಲಿಸುತ್ತೇವೆ” ಎಂದು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದೆ.
“ದೃಢ ನಿಶ್ಚಯ, ಧೈರ್ಯ ಮತ್ತು ಅದ್ಭುತ ಸಾಮರ್ಥ್ಯದಿಂದ ಪ್ರಪಂಚದಾದ್ಯಂತದ ಐರನ್ ಲೇಡಿ (ಉಕ್ಕಿನ ಮಹಿಳೆ) ಎಂದು ಕರೆಸಿಕೊಂಡಿರುವ ಭಾರತದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ. ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ನನ್ನ ಗೌರವ” ಎಂದು ಸುರ್ಜೇವಾಲ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಚುನಾವಣೆಗಳ ಫಲಿತಾಂಶಗಳು ಕಾಂಗ್ರೆಸ್ ತಳಮಟ್ಟದಲ್ಲಿ ದುರ್ಬಲವಾಗಿದೆ ಎಂಬುದನ್ನು ತೋರಿಸಿವೆ: ಪಿ.ಚಿದಂಬರಂ