ದೇಶದ ಪ್ರಜಾಪ್ರಭುತ್ವಕ್ಕಾಗಿ ಎಷ್ಟು ಕಾಂಗ್ರೆಸ್‌ ನಾಯಕರು ಪ್ರಶ್ನೆ ಮಾಡಿದ್ದಾರೆ: ಸೌಮ್ಯ ರೆಡ್ಡಿ

ಕಾಂಗ್ರೆಸ್‌ ನಾಯಕತ್ವದಲ್ಲಿ ಭಿನ್ನಮತ ತಲೆದೂರಿದ್ದು, ಪಕ್ಷದ ರಾಷ್ಟ್ರೀಯ ನಾಯಕತ್ವದಲ್ಲಿ ಯಾವ ರೀತಿಯ ಬೆಳವಣಿಗೆಗಳು ನಡೆಯಲಿವೆ ಎಂಬ ಕುತೂಹಲ ಹೆಚ್ಚಾಗಿದೆ. ಈ ಮಧ್ಯೆ, ಪಕ್ಷದ ಚಟುವಟಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ 21ಕ್ಕೂ ಹೆಚ್ಚು ನಾಯಕರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದು, ಆ ಬಗ್ಗೆ ಚರ್ಚೆ ನಡೆಯುತ್ತಿದೆ. ಪಕ್ಷದ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕಿ ಸೌಮ್ಯಾ ರೆಡ್ಡಿ, ಪತ್ರ ಬರೆದ ನಾಯಕರ ಬಗ್ಗೆ ಬೇಸರ ವ್ಯಕ್ತಪಡಿದ್ದಾರೆ.

ಕಾಂಗ್ರೆಸ್‌ ನಾಯಕತ್ವ ಸೇರಿಂತೆ ಇನ್ನಿತರ ವಿಚಾರವಾಗಿ ಕಾಂಗ್ರೆಸ್‌ ಪಕ್ಷದ ಕಾರ್ಯಕಾರಿಣಿ ಸಭೆ ಚರ್ಚೆ ನಡೆಸುತ್ತಿದೆ. ಈ ಹೋತ್ತಿನಲ್ಲೇ  ‘ಪಕ್ಷದ ರಾಷ್ಟ್ರ ನಾಯಕತ್ವದ ವಿಚಾರವಾಗಿ ಪತ್ರ ಬರೆದಿದ್ದ ಹಿರಿಯ ನಾಯಕರಯ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಇದಾದ ನಂತರ,  ರಾಹುಲ್ ಗಾಂಧಿ ಅಂತಹ ಹೇಳಿಕೆ ನೀಡಲೇ ಇಲ್ಲ ಎಂದು ಕಾಂಗ್ರೆಸ್‌ ಸ್ಪಷ್ಟೀಕರಣ ನೀಡಿದ್ದು, ರಾಹುಲ್‌ ಗಾಂಧಿ ಮೇಲೆ ಸಿಟ್ಟಾಗಿದ್ದ ಕಪಿಲ್‌ ಸಿಬಲ್ ತಮ್ಮ ಟ್ವೀಟ್‌ ಡಿಲೀಟ್ ಮಾಡಿದ್ದಾರೆ.

ಈ ಮಧ್ಯೆ, ರಾಷ್ಟ್ರ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿರುವ ಶಾಸಕಿ ಸೌಮ್ಯ ರೆಡ್ಡಿ, ‘ಖಾಸಗಿತನ ಅನ್ನೋದು ಈಗ ಇಲ್ಲವೇ ಇಲ್ವಾ? ಝೂಮ್ ಮೀಟಿಂಗ್‌ನಲ್ಲಿ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿರೋ ಸಭೆಯ ಕ್ಷಣ ಕ್ಷಣದ ಮಾಹಿತಿಯನ್ನು ಸೋರಿಕೆ ಮಾಡಿದ್ದು ಯಾರು? ಇದು ತುಂಬಾ ಬೇಸರದ ವಿಷಯ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಕಳೆದ ಆರು ವರ್ಷಗಳಿಂದ ಪ್ರಜಾಪ್ರಭುತ್ವದ ಶಕ್ತಿ ಕ್ಷೀಣವಾಗುತ್ತಿರುವ ಬಗ್ಗೆ ಎಷ್ಟು ಮಂದಿ ಪ್ರಶ್ನೆ ಮಾಡಿದ್ದಾರೆ ಎಂದು ಹೈಕಮಾಂಡ್ ನಾಯಕತ್ವದ ಬಗ್ಗೆ ಪ್ರಶ್ನೆ ಎತ್ತಿರುವ ಸ್ವತಃ ಕಾಂಗ್ರೆಸ್‌ ನಾಯಕರ ವಿರುದ್ಧವೇ ಕಿಡಿಕಾರಿದ್ದಾರೆ.


ಇದನ್ನೂ ಓದಿ:  ಬಿಜೆಪಿಯಿಂದ ಅಸ್ಸಾಂ ಮುಖ್ಯಮಂತ್ರಿ ಅರ್ಭರ್ಥಿಯಾಗಿ ಸ್ಪರ್ಧಿಸುವುದಿಲ್ಲ: ಮಾಜಿ ಸಿಜೆಐ ರಂಜನ್ ಗೊಗೊಯ್

Spread the love

Leave a Reply

Your email address will not be published. Required fields are marked *