10 ದಿನಗಳಲ್ಲಿ 2ನೇ ಪ್ರಕರಣ : ಯುಪಿಯಲ್ಲಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ…

ಉತ್ತರಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಹತ್ತು ದಿನಗಳಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ನಡೆದಿದೆ.

ಉತ್ತರಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಹಳ್ಳಿಯೊಂದರ ಬಳಿ ವಿಕಲಚೇತನ ಶವ ಪತ್ತೆಯಾಗಿದೆ. ಪತ್ತೆಯಾದ 17 ವರ್ಷದ ಬಾಲಕಿಯ ಮೇಲೂ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ಮಂಗಳವಾರ ರಾತ್ರಿ ಖಚಿತಪಡಿಸಿದ್ದಾರೆ.

ಬಾಲಕಿ ತೀಕ್ಷ್ಣವಾದ ಆಯುಧದಿಂದ ಕೊಲ್ಲಲ್ಪಟ್ಟಿದ್ದು ಆಕೆಯ ಕುತ್ತಿಗೆಗೆ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಆಕೆಯ ಹಳ್ಳಿಯಿಂದ 200 ಮೀಟರ್ ದೂರದಲ್ಲಿರುವ ಒಣಗಿದ ಕೊಳದ ಬಳಿ ಆಕೆಯ ಶವ ಪತ್ತೆಯಾಗಿದೆ.

“ಹೌದು, ಮರಣೋತ್ತರ ವರದಿಯು ಅತ್ಯಾಚಾರವನ್ನು ದೃಢಪಡಿಸಿದೆ. ಆರೋಪಿಗಳನ್ನು ಗುರುತಿಸಲು ಮತ್ತು ಬಂಧಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಶೀಘ್ರದಲ್ಲೇ ಪ್ರಗತಿ ಸಾಧಿಸುತ್ತೇವೆ ಎಂದು ನಾವು ಭಾವಿಸುತ್ತೇವೆ” ಎಂದು ಖೇರಿಯ ಪೊಲೀಸ್ ಮುಖ್ಯಸ್ಥ ಸತೇಂದರ್ ಕುಮಾರ್ ಹೇಳಿದ್ದಾರೆ.

ಬಾಲಕಿಯ ಸಂಬಂಧಿಕರ ಪ್ರಕಾರ, ಬಾಲಕಿ ವಿದ್ಯಾರ್ಥಿವೇತನ ನಮೂನೆಯನ್ನು ಭರ್ತಿ ಮಾಡಲು ಪಕ್ಕದ ಪಟ್ಟಣಕ್ಕೆ ಭೇಟಿ ನೀಡಲು ಸೋಮವಾರ ಮನೆಯಿಂದ ಹೊರಟಿದ್ದಾಳೆ. ಬಳಿಕ ಅವಳು ಹಿಂತಿರುಗದಿದ್ದಾಗ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

“ಏನು ಹೇಳಬೇಕೆಂದು ಅಥವಾ ಯಾರನ್ನು ಅನುಮಾನಿಸಬೇಕೆಂದು ನನಗೆ ನಿಜವಾಗಿಯೂ ತಿಳಿದಿಲ್ಲ. ಅವಳು ಸೋಮವಾರ ಬೆಳಿಗ್ಗೆ 8.30 ರ ಸುಮಾರಿಗೆ ಹೊರಟಳು. ನಾವು ಯಾರನ್ನೂ ಅನುಮಾನಿಸುವುದಿಲ್ಲ” ಎಂದು ಅವರ ಚಿಕ್ಕಪ್ಪ ಮಾಧ್ಯಮಕ್ಕೆ ತಿಳಿಸಿದರು.

ಕಳೆದ 10 ದಿನಗಳಲ್ಲಿ ಈ ಜಿಲ್ಲೆಯ ಹದಿಹರೆಯದ ಬಾಲಕಿಯ ಮೇಲೆ ನಡೆದ ಎರಡನೇ ಅತ್ಯಾಚಾರ ಮತ್ತು ಕೊಲೆ ಇದಾಗಿದೆ.

ಈ ಹಿಂದೆ ಆಗಸ್ಟ್ 15 ರಂದು 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲ್ಲಲಾಗಿತ್ತು. ಆಕೆಯ ಶವ ಆರೋಪಿಗಳಲ್ಲಿ ಒಬ್ಬನಿಗೆ ಸೇರಿದ ಕಬ್ಬಿನ ಹೊಲದಲ್ಲಿ ಪತ್ತೆಯಾಗಿದೆ. ಆಕೆಯ ಗ್ರಾಮದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಆಕೆಯ ತಂದೆ ಸತೇಂದ್ರ ಕುಮಾರ್ ಆರೋಪಿಗಳು ತನ್ನ ಮಗಳನ್ನು ಕತ್ತು ಹಿಸುಕಿ, ಮತ್ತು ಅವಳ ಕಣ್ಣುಗಳನ್ನು ಹೊರತೆಗೆದು ಅವಳ ನಾಲಿಗೆಯನ್ನು ಕತ್ತರಿಸಿದ್ದಾರೆಎಂದು ಆರೋಪಿಸಿದರು.

ಒಂದು ದಿನದ ನಂತರ ಬಿಡುಗಡೆಯಾದ ಮರಣೋತ್ತರ ವರದಿಯಲ್ಲಿ ಆಕೆಯ ಕಣ್ಣುಗಳು ಮುಚ್ಚಿಹೋಗಿವೆ. ವರದಿಯಲ್ಲಿ ಅವಳ ನಾಲಿಗೆ ಕತ್ತರಿಸಲ್ಪಟ್ಟಿದೆ ಎಂದು ತೋರಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶವಪರೀಕ್ಷೆಯಲ್ಲಿ ಅತ್ಯಾಚಾರ ಮತ್ತು ಕತ್ತು ಹಿಸುಕುವ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 14 ರ ಮಧ್ಯಾಹ್ನ ಬಾಲಕಿ ನಾಪತ್ತೆಯಾಗಿದ್ದಳು. ಈ ಘಟನೆ ಲಕ್ನೋದಿಂದ 130 ಕಿಲೋಮೀಟರ್ ದೂರದಲ್ಲಿ ನೇಪಾಳ ಗಡಿಯ ಸಮೀಪವಿರುವ ಹಳ್ಳಿಯಲ್ಲಿ ನಡೆದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights