ಒಂದು ರೂ ದಂಡ: ಫೈನ್‌ ಕಟ್ಟುವರೇ ಅಥವಾ ಜೈಲು ಶಿಕ್ಷೆಗೆ ಒಳಗಾಗುವವರೇ ಪ್ರಶಾಂತ್ ಭೂಷಣ್!

ಹಿರಿಯ ವಕೀಯ ಪ್ರಶಾಂತ್‌ ಭೂಷಣ್‌ ಅವರಿಗೆ, ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದು, ಒಂದು ರೂಗಳ ದಂಡ ವಿಧಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಶಾಂತ್‌ ಭೂಷಣ್‌, “ದೇಶದ ದನಿಯನ್ನು ಸುಪ್ರೀಂಕೋರ್ಟು ಕೇಳಲಿ ಎಂದು ನಾನು ಕೋರಿದ್ದೆ. ಈಗ ನಾನು ದೇಶದ ಪ್ರತಿಯೊಬ್ಬ ನಾಗರಿಕರು ಒಂದು ರೂಪಾಯಿಯನ್ನು ಸುಪ್ರೀಂಕೋರ್ಟಿಗೆ ಕಳಿಸಲಿ ಎಂದು ಕೋರುತ್ತೇನೆ” ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನ ಕಾರ್ಯವೈಖರಿ ಮತ್ತು ಹಿರಿಯ ಮುಖ್ಯ ನ್ಯಾರ್ಯಮೂರ್ತಿಗಳನ್ನು ಟೀಕಿಸಿ ಟ್ವೀಟ್‌ ಮಾಡಿದ್ದ ಪ್ರಶಾಂತ್ ಭೂಷಣ್‌ ಅವರ ವಿರುದ್ಧ ಸುಪ್ರೀಂ ಕೋರ್ಟ್‌ ನ್ಯಾಯಾಂಗ ನಿಂಧನೆ ಪ್ರಕರಣ ದಾಖಲಿಸಿಕೊಂಡಿತ್ತು. ಇಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಯ ತೀರ್ಪು ನೀಡಿರುವ ಸುಪ್ರೀಂ,  ಒಂದು ರೂ ದಂಡ ವಿಧಿಸಿದ್ದು, ಸೆಪ್ಟೆಂಬರ್ 15 ರೊಳಗೆ ದಂಡವನ್ನು ಕಟ್ಟಬೇಕು. ಇಲ್ಲವಾದಲ್ಲಿ ಮೂರು ತಿಂಗಳ ಜೈಲು ಹಾಗೂ ಮೂರು ವರ್ಷಗಳ ಕಾಲ ವಕೀಲ ವೃತ್ತಿಯನ್ನು ನಿಷೇಧಿಸುವುದಾಗಿ‌ ಹೇಳಿದೆ.

“1 ರೂ ರಾಷ್ಟ್ರೀಯ ಚಳವಳಿಯಾಗಲಿ” ಎಂದು ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷರು ಮತ್ತು ಪ್ರಶಾಂತ್ ಭೂಷಣ್‌ರವರ ಆತ್ಮೀಯ ಒಡನಾಡಿ ಯೋಗೇಂದ್ರ ಯಾದವ್ ಘೋಷಿಸಿದ್ದಾರೆ.

1 ರೂ ದಂಡ ಅಥವಾ ಮೂರು ತಿಂಗಳ ಜೈಲು ಹಾಗೂ ವಕೀಲಿ ವೃತ್ತಿ ನಿ‍ಷೇಧದ ತೀರ್ಪಿನಲ್ಲಿ ಪ್ರಶಾಂತ್ ಭೂಷಣ್ ಯಾವುದು ಆಯ್ದುಕೊಳ್ಳಲಿದ್ದಾರೆ ಎಂಬುದನ್ನು ಇನ್ನೂ ಹೇಳಿಲ್ಲ. ಈ ಮಧ್ಯೆ, ಜೈಲು ಶಿಕ್ಷೆಯನ್ನು ಆಯ್ದುಕೊಂಡು ದೇಶಕ್ಕೆ, ಹೊರಾಟಕ್ಕೆ, ಸತ್ಯಕ್ಕೆ ಮಾದರಿಯಾಗಿ ನಿಲ್ಲುತ್ತಾರೆ ಎಂದು ಅವರ ಒಡನಾಡಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಕ್ಷೆಯ ಆಯ್ಕೆ ಬಗ್ಗೆ ಮಾಹಿತಿ ನೀಡಲು ಸಂಜೆ ಪತ್ರಿಕಾಗೋಷ್ಠಿ ನಡೆಸುವುದಾಗಿ ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ.


Read Alsoಆರ್ಥಿಕ ನಷ್ಟ ದೇವರ ಆಟವಲ್ಲ; GST ಪರಿಹಾರವನ್ನು ಕೇಂದ್ರ ಸರ್ಕಾರವೇ ಭರಸಬೇಕು: ದೇವೇಗೌಡ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights