ಕುತ್ತಿಗೆಗೆ ಗುಂಡು ಹಾರಿಸಿಕೊಂಡ ಹಿರಿಯ ಐಪಿಎಸ್​ ಅಧಿಕಾರಿ : ಆರ್​​​.ಪಿ ಶರ್ಮಾ ಸ್ಥಿತಿ ಗಂಭೀರ!

ತಮ್ಮ ಸರ್ವೀಸ್​​ ರಿವಾಲ್ವರ್​​ನಿಂದಲೇ ಹಿರಿಯ ಐಪಿಎಸ್​ ಅಧಿಕಾರಿ ಆರ್​​​.ಪಿ ಶರ್ಮಾ ಕುತ್ತಿಗೆಗೆ ಗುಂಡು ಹಾರಿಸಿಕೊಂಡಿದ್ದು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.

ಇತ್ತೀಚೆಗೆ ತೀವ್ರ ಕ್ಯಾನ್ಸರ್​ ರೋಗದಿಂದ ಬಳಲುತ್ತಿದ್ದ ಹಿರಿಯ ಐಪಿಎಸ್​ ಅಧಿಕಾರಿ ಆರ್​​​.ಪಿ ಶರ್ಮಾ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ವೈದ್ಯಕೀಯ ಮೂಲಗಳು ತಿಳಿಸಿವೆ.

ಹಿರಿಯ ಐಪಿಎಸ್​ ಅಧಿಕಾರಿ ಇಂದು ಮಿಸ್​​ ಫೈರ್​​ ಮಾಡಿಕೊಂಡಿದ್ದರು ಎನ್ನಲಾಗಿದೆ. ತಮ್ಮ ಸರ್ವೀಸ್​​ ರಿವಾಲ್ವರ್​​ನಿಂದಲೇ ಕುತ್ತಿಗೆಗೆ ಮಿಸ್​​ ಫೈರ್​​ ಮಾಡಿಕೊಂಡಿದ್ದ ಇವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಲ್ಲಿನ ವೈದ್ಯರ ತಂಡ ಆರ್​​.ಪಿ ಶರ್ಮಾರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು, ಆರ್​​.ಪಿ ಶರ್ಮಾ ಕೌಟುಂಬಿಕ ಸಮಸ್ಯೆಯಿಂದ ತಾವೇ ಫೈರಿಂಗ್​​ ಮಾಡಿಕೊಳ್ಳುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ರಾ? ಎಂಬ ಚರ್ಚೆಯೂ ನಡೆಯುತ್ತಿದೆ. ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸದ್ಯ ವೈದ್ಯರು ಆರ್​​.ಪಿ ಶರ್ಮಾರ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಏನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಮಧ್ಯೆಯೇ ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್, ಆರ್​​​.ಪಿ ಶರ್ಮಾ ಆಕಸ್ಮಿಕವಾಗಿ ಫೈರ್​​ ಮಾಡಿಕೊಂಡಿದ್ಧಾರೆ ಎಂದು ಮಾಹಿತಿ ನೀಡಿದ್ಧಾರೆ.

Spread the love

Leave a Reply

Your email address will not be published. Required fields are marked *