ದೇಶದ ಸಶಸ್ತ್ರ ಪಡೆಗಳಲ್ಲಿನ ಕೊರೊನಾ ಸೋಂಕಿನ ಅಂಕಿಅಂಶಗಳು ಬಹಿರಂಗ!

ಕೋವಿಡ್ -19 ಪ್ರಕರಣ ದೇಶದಲ್ಲಿ 50 ಲಕ್ಷ ಗಡಿ ದಾಟಿದ ಬಳಿಕ, ಸಶಸ್ತ್ರ ಪಡೆಗಳಲ್ಲಿನ ಕೊರೊನಾವೈರಸ್ ಸೋಂಕಿನ ಇತ್ತೀಚಿನ ಅಂಕಿಅಂಶಗಳನ್ನು ಸರ್ಕಾರ ಬುಧವಾರ ಬಹಿರಂಗಪಡಿಸಿದೆ.

ಸಶಸ್ತ್ರ ಪಡೆಗಳಲ್ಲಿ 19,839 ಕೊರೋನವೈರಸ್ ಪ್ರಕರಣಗಳು ದಾಖಲಾಗಿವೆ. ಈವರೆಗೆ ಒಟ್ಟು 35 ಸಾವುನೋವುಗಳು ದಾಖಲಾಗಿವೆ ಎಂದು ಸಚಿವ ಶ್ರೀಪಾದ್ ನಾಯಕ್ ಅವರು ಲಿಖಿತ ಉತ್ತರದಲ್ಲಿ ಲೋಕಸಭೆಗೆ ಮಾಹಿತಿ ನೀಡಿದರು.

ಭಾರತೀಯ ಸೈನ್ಯ ಗರಿಷ್ಠ 16,758 ಕರೋನವೈರಸ್ ಪ್ರಕರಣಗಳನ್ನು ಮತ್ತು ಸಶಸ್ತ್ರ ಪಡೆಗಳಲ್ಲಿ 32 ಸಾವುಗಳನ್ನು ದಾಖಲಿಸಿದೆ ಎಂದು ಸಚಿವರು ಸಂಸತ್ತಿಗೆ ಮಾಹಿತಿ ನೀಡಿದರು.

ಮತ್ತೊಂದೆಡೆ, ಭಾರತೀಯ ವಾಯುಪಡೆಯು ತನ್ನ ಸಿಬ್ಬಂದಿಗಳಲ್ಲಿ 1,716 ಕೋವಿಡ್-19 ಪ್ರಕರಣಗಳನ್ನು ದೃಢ ಪಡಿಸಿದೆ ಮತ್ತು ಮೂರು ಸಾವುಗಳು ಸಂಭವಿಸಿವೆ ಎಂದು ಮಾಹಿತಿ ನೀಡಿದೆ. ಈ ಮಧ್ಯೆ ನೌಕಾಪಡೆಯು 1,365 ಸೋಂಕಿನ ಪ್ರಕರಣಗಳನ್ನು ದೃಢ ಪಡಿಸಿದೆ. ಕೊರೋನವೈರಸ್ ಕಾರಣದಿಂದಾಗಿ ನೌಕಾಪಡೆಯ ಯಾವುದೇ ಸಿಬ್ಬಂದಿ ಸಾವನ್ನಪ್ಪಿಲ್ಲ ಎಂದು ತಿಳಿಸಿದೆ.

ದೇಶದ ಒಟ್ಟು ಕೊರೋನವೈರಸ್ ಪ್ರಕರಣಗಳು 50,20,359 ರಷ್ಟಿದ್ದು, ಸಾವಿನ ಸಂಖ್ಯೆ 82,066 ಆಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಒಟ್ಟು 39,42,360 ರಷ್ಟು ಪ್ರಕರಣಗಳು ‌ಗುಣಮುಖರಾಗಿದ್ದರೆ, 9,95,933 ಸಕ್ರಿಯ ಪ್ರಕರಣಗಳಿವೆ.

ಕೋವಿಡ್-19 ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.63 ರಷ್ಟಿದೆ. ದೇಶದಲ್ಲಿ ಈವರೆಗೆ ಒಟ್ಟು 5,94,29,115 ಕೋವಿಡ್ -19 ಪರೀಕ್ಷೆಗಳನ್ನು ನಡೆಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights