ಪೇಟಿಎಂ ಆ್ಯಪ್ಅನ್ನು ಪ್ಲೇ ಸ್ಟೋರ್‌ನಿಂದ ತೆಗೆದ ಗೂಗಲ್; ನಿಯಮ ಉಲ್ಲಂಘನೆ ಆರೋಪ!
ಭಾರತದಲ್ಲಿ ಆನ್‌ಲೈನ್ ಹಣಕಾಸು ವ್ಯವಹಾರಕ್ಕೆ ಬಳಕೆಯಾಗುತ್ತಿದ್ದ Paytm ಆ್ಯಪ್‌ಅನ್ನು ಗೋಗಲ್ ಪ್ಲೇ ಸ್ಟೋರ್ನಿಂದ ತೆಗೆದು ಹಾಕಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಗೂಗಲ್, ಪೇಟಿಎಂ ಆ್ಯಪ್ ಗೂಗಲ್‌ನ ಪಾಲಿಸಿಗಳಿಗೆ ವಿರುದ್ಧವಾಗಿದೆ. ಹಾಗಾಗಿ ಆ್ಯಪ್ಅನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ ಎಂದು ಹೇಳಿದೆ.
“ಪೇಟಿಎಂ ತನ್ನ ಆ್ಯಪ್ನಲ್ಲಿ ಮನಿ ಗ್ಯಾಬ್ಲಿಂಗ್ ಅಥವಾ ಆನ್‌ಲೈನ್ ಕ್ಯಾಸಿನೋಗಳಿಗೆ ಅವಕಾಶ ನೀಡಿದೆ” ಎಂದು ಗೂಗಲ್ ಆರೋಪಿಸಿದೆ.
‘ನಾವು ಆನ್‌ಲೈನ್ ಕ್ಯಾಸಿನೊಗಳನ್ನು ಅನುಮತಿಸುವುದಿಲ್ಲ ಅಥವಾ ಕ್ರೀಡಾ ಬೆಟ್ಟಿಂಗ್‌ಗೆ ಅನುಕೂಲವಾಗುವ ಯಾವುದೇ ಅನಿಯಂತ್ರಿತ ಜೂಜಿನ ಅಪ್ಲಿಕೇಶನ್‌ಗಳನ್ನು ಬೆಂಬಲಿಸುವುದಿಲ್ಲ. ಹಣ ಅಥವಾ ನಗದು ಬಹುಮಾನಗಳನ್ನು ಗೆಲ್ಲಲು ಪಂದ್ಯಾವಳಿಗಳಲ್ಲಿ ಭಾಗವಹಿಸಲು ಗ್ರಾಹಕರನ್ನು ಬೇರೊಂದು ವೆಬ್‌ಸೈಟ್‌ಗೆ ಕರೆದೊಯ್ಯುತ್ತಿದ್ದರೆ. ಅಂತಹ ಆ್ಯಪ್‌ಗಳು ನಮ್ಮ ನೀತಿಗಳಿಗೆ ವಿರುದ್ಧವಾಗಿರುವತ್ತವೆ. ಅಂತಹ ಆ್ಯಪ್‌ಗಳನ್ನು ಪ್ರೋತ್ಸಾಹಿಸುವುದಿಲ್ಲ’ ಎಂದು ಗೂಗಲ್ ಹೇಳಿದೆ.
ಅಲ್ಲದೆ, ಸ್ಪೋರ್ಟ್ಸ್ ಬೆಟ್ಟಿಂಗ್‌ಗೆ ಅನುಕೂಲವಾಗುವಂತಹ ಅಪ್ಲಿಕೇಶನ್‌ಗಳನ್ನು ಅನುಮತಿಸುವುದಿಲ್ಲ ಮತ್ತು ಅಂತಹ ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್ನಿಂದ ತೆಗೆದು ಹಾಕಲಾಗುವುದು ಎಂದು ಈ ಹಿಂದೆ ಗೂಗಲ್ ಹೇಳಿತ್ತು.
ಪೇಟಿಎಂ ಸಹ ಈ ಬಗ್ಗೆ ಟ್ವೀಟ್ ಮಾಡಿ ತನ್ನ ಗ್ರಾಹಕರಿಗೆ ಮಾಹಿತಿ ನೀಡಿದೆ.
Dear Paytm'ers,
Paytm Android app is temporarily unavailable on Google's Play Store for new downloads or updates. It will be back very soon.
All your money is completely safe, and you can continue to enjoy your Paytm app as normal.
— Paytm (@Paytm) September 18, 2020
ಇದನ್ನೂ ಓದಿ: ಕವನ: ಉಮರನ ಒಸಗೆ – ದ್ವೇಶದ ಕೋಟೆಯಲ್ಲಿ ಪ್ರೀತಿಯ ಸ್ಪೋಟಕ

