ಕೃಷಿ ಮಸೂದೆಗಳ ವಿರುದ್ಧ ರೈತರ ಪ್ರತಿಭಟನೆ : ಟ್ರಾಕ್ಟರ್‌ಗೆ ಬೆಂಕಿ ಹಚ್ಚಿ ‘ಕೈ’ ಕಾರ್ಯಕರ್ತರಿಂದ ಆಕ್ರೋಶ!

ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ ಮೂರು ಕೃಷಿ ಮಸೂದೆಗಳಿಗೆ ರಾಷ್ಟ್ರಪತಿಗಳು ಸಹಿ ಹಾಕಿದ್ದಾರೆ. ಮತ್ತೊಂದೆಡೆ ಈ ಕಾನೂನಿನ ವಿರುದ್ಧ ದೇಶದ ಅನೇಕ ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಶುಕ್ರವಾರದಿಂದಲೇ ಕೃಷಿ ಮಸೂದೆಗಳ ವಿರುದ್ಧ ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಇದು ಸೋಮವಾರವೂ ಮುಂದುವರೆದಿದೆ. ಪಂಜಾಬ್ ನಲ್ಲಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಇಂದು ಧರಣಿ ನಡೆಸುತ್ತಿದ್ದರೆ, ಇಂದು ಕರ್ನಾಟಕದಲ್ಲಿ ರೈತರು ರಾಜ್ಯ ಸ್ಥಗಿತಗೊಳಿಸುವ ಘೋಷಣೆ ಮಾಡಿದ್ದಾರೆ.

ಪಂಜಾಬ್ ಯುವ ಕಾಂಗ್ರೆಸ್ ಕಾರ್ಯಕರ್ತರು ದೆಹಲಿಯ ಇಂಡಿಯಾ ಗೇಟ್ ಬಳಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಿ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಮಾತನಾಡಿದ ನವದೆಹಲಿ ಡಿಸಿಪಿ, “ಸುಮಾರು 15-20 ಜನರು ಇಲ್ಲಿ ಜಮಾಯಿಸಿ ಟ್ರ್ಯಾಕ್ಟರ್ ಅನ್ನು ಸ್ಫೋಟಿಸಿದರು. ಬೆಂಕಿಯನ್ನು ನಿಯಂತ್ರಿಸಲಾಗಿದೆ ಮತ್ತು ಟ್ರಾಕ್ಟರ್ ಅನ್ನು ಸ್ಥಳದಿಂದ ತೆಗೆದುಹಾಕಲಾಗಿದೆ. ಇದರಲ್ಲಿ ಭಾಗಿಯಾಗಿರುವ ಜನರನ್ನು ಗುರುತಿಸಲಾಗುತ್ತಿದೆ. ಈ ವಿಷಯದ ತನಿಖೆ ನಡೆಯುತ್ತಿದೆ ” ಎಂದಿದ್ದಾರೆ.

ಕರ್ನಾಟಕದ ರೈತ ಸಂಘ ಹುಬ್ಬಳ್ಳಿಯ ಅಂಗಡಿಯವರಿಗೆ ಹೂವುಗಳನ್ನು ಒದಗಿಸಿ, ಇಂದಿನ ರಾಜ್ಯವ್ಯಾಪಿ ಬಂದ್‌ಗೆ ಬೆಂಬಲ ನೀಡುವಂತೆ ಒತ್ತಾಯಿಸಿತು. ಕೃಷಿ ಕಾನೂನುಗಳು, ಭೂ ಸುಧಾರಣಾ ಸುಗ್ರೀವಾಜ್ಞೆ, ಎಪಿಎಂಸಿ ಮತ್ತು ಕಾರ್ಮಿಕ ಕಾನೂನುಗಳಲ್ಲಿನ ಬದಲಾವಣೆಗಳ ವಿರುದ್ಧ ರೈತ ಸಂಘಟನೆಗಳು ಇಂದು ರಾಜ್ಯವ್ಯಾಪಿ ಬಂದ್ ಘೋಷಿಸಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights