ನಟ ಸುಶಾಂತ ಗಳಿಸಿದ 70 ಕೋಟಿಯಲ್ಲಿ ರಿಯಾಗೆ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ..?

ನಟ ಸುಶಾಂತ್ ಸಾವಿನ ಪ್ರಕರಣ ಸದ್ಯ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ಸುಶಾಂತ್ 5 ವರ್ಷದಲ್ಲಿ ಗಳಿಸಿದ ಹಣದಲ್ಲಿ ರಿಯಾಗೆ ಖರ್ಚು ಮಾಡಿದ ಹಣದ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ.

ಹೌದು.. ನಟ ಸುಶಾಂತ್ ಸಾವಿನ ಪ್ರಕರಣದ ತನಿಖೆಯಲ್ಲಿ ನಟನದ್ದು ಆತ್ಮಹತ್ಯೆ ಎಂದು ಏಮ್ಸ್ ವರದಿ ನೀಡಿದೆ. ನಿನ್ನೆಯಷ್ಟೇ ನಟನ ಸಾವಿಗೆ ಕಾರಣಳು ಮತ್ತು ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿದ್ದಾಳೆ ಎಂದು ಆರೋಪಿಸಲಾಗಿದ್ದ ನಟಿ ರಿಯಾ ಚಕ್ರವರ್ತಿಗೆ ಬೇಲ್ ಕೂಡ ಸಿಕ್ಕಿದೆ. ಈ ಮಧ್ಯೆ ನಟ ತಾನು 5 ವರ್ಷದಲ್ಲಿ ಗಳಿಸಿದ 70 ಕೋಟಿಯಲ್ಲಿ ರಿಯಾ ಚಕ್ರವರ್ತಿಗೆ ಖರ್ಚು ಮಾಡಿದ ಹಣವನ್ನು ಕೇಳಿ ಜನ ಆಶ್ಚರ್ಯಗೊಂಡಿದ್ದಾರೆ.

ನಟ 5 ವರ್ಷಗಳಲ್ಲಿ 70 ಕೋಟಿ ಗಳಿಸಿದ್ದು, ಅದರಲ್ಲಿ 55 ಲಕ್ಷ ರೂ. ನಟಿಗಾಗಿ ಖರ್ಚು ಮಾಡಿದ್ದಾನೆ ಎನ್ನಲಾಗುತ್ತಿದೆ. ಅವರ ಬ್ಯಾಂಕ್ ಖಾತೆಯ ವಿಧಿವಿಜ್ಞಾನ ಲೆಕ್ಕಪರಿಶೋಧನಾ ವರದಿಯಲ್ಲಿ ಅನುಮಾನಾಸ್ಪದ ಏನೂ ಕಂಡುಬಂದಿಲ್ಲ ಎನ್ನಲಾಗುತ್ತಿದೆ. ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ, ಕಳೆದ 5 ವರ್ಷಗಳಲ್ಲಿ ಸುಶಾಂತ್ ಅವರ 70 ಕೋಟಿಗಳಿಸಿದ್ದು, ಇದರಲ್ಲಿ 55 ಲಕ್ಷ ರೂಪಾಯಿಗಳು ಮಾತ್ರ ರಿಯಾ ಚಕ್ರವರ್ತಿಗಾಗಿ ಖರ್ಚು ಮಾಡಿದ್ದರು ಎನ್ನಲಾಗುತ್ತಿದೆ. ಈ ಖರ್ಚಿನಲ್ಲಿ ಹೆಚ್ಚಿನವು ಪ್ರಯಾಣ, ಸ್ಪಾಗಳು ಮತ್ತು ಉಡುಗೊರೆಗಳನ್ನು ಖರೀದಿಸಲು ಖರ್ಚು ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights