IPL 2020 : ಸತತ ನಾಲ್ಕನೇ ಬಾರಿ ಸೋಲು ಕಂಡ ಕಿಂಗ್ಸ್ XI ತಂಡ…!

ಐಪಿಎಲ್ ಹಂಗಾಮದಲ್ಲಿ ಕರ್ನಾಟಕದ ಆಟಗಾರರನ್ನು ಹೊಂದಿರುವ ಕಿಂಗ್ಸ್ ಇಲೆವೆನ್ ತಂಡ ಸತತ ನಾಲ್ಕನೇ ಸೋಲು ಕಂಡಿದೆ..  ಸನ್ ರೈಸರ್ಸ್ ಹೈದ್ರಬಾದ್ ತಂಡ ಗೆಲುವಿನ ನಗೆ ಬೀರಿದೆ. ದುಬೈ ನಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡ 69 ರನ್ ಗಳಿಂದ ಕಿಂಗ್ಸ್ ಇಲೆವೆನ್ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ಸನ್ ರೈಸರ್ಸ್ ಹೈದ್ರಬಾದ್ ತಂಡ ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿದ್ರೆ,

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ ರೈಸರ್ಸ್ ಹೈದ್ರಬಾದ್ ತಂಡಕ್ಕೆ  ಡೇವಿಡ್ ವಾರ್ನರ್ ಮತ್ತು ಜೋನಿ ಬೇಸ್ಟೋ ಭದ್ರ ಅಡಿಪಾಯ ಹಾಕಿಕೊಟ್ಟರು. ಅಲ್ಲದೆ 15 ಓವರ್ ಗಳಲ್ಲಿ 160 ರನ್ ಗಳ ಜೊತೆಯಾಟದ ಕೊಡುಗೆ ನೀಡಿದರು. ಈ ಹಂತದಲ್ಲಿ 40 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್‍ನೊಂದಿಗೆ 52 ರನ್ ಗಳಿಸಿದ್ದ ಡೇವಿಡ್ ವಾರ್ನರ್ ರವಿ ಬಿಸ್ನೋಯ್ ಅವರಿಗೆ ವಿಕೆಟ್ ಒಪ್ಪಿಸಿದ್ರು.

ಮತ್ತೊಂದೆಡೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಜೋನಿ ಬೇಸ್ಟೋ ಕೇವಲ ಮೂರು ರನ್ ಗಳ ಅಂತರದಿಂದ ಶತಕ ವಂಚಿತರಾದ್ರು. ಕಿಂಗ್ಸ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ್ದ ಜೋನಿ ಬೇರ್ ಸ್ಟೋ 55 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಆರು ಸಿಕ್ಸರ್ ಗಳ ಸಹಾಯದಿಂದ ಆಕರ್ಷಕ 97 ರನ್ ಗಳಿಸಿದ್ದರು.

ಆದ್ರೆ ಸನ್ ರೈಸರ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ಮತ್ತೊಮ್ಮೆ ವಿಫಲರಾದ್ರು. ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದ ಅಬ್ದುಲ್ ಸಮಾದ್ ಎಂಟು ರನ್, ಮನಿಷ್ ಪಾಂಡೆ 1 ರನ್, ಪ್ರಿಯಮ್ ಗರ್ಗ್ ಶೂನ್ಯ ಸುತ್ತಿದ್ರೆ, ಅಭಿಷೇಕ್ ಶರ್ಮಾ 12 ರನ್ ಗಳಿಸಿದ್ರು.

ಉಳಿದಂತೆ ಕೇನ್ ವಿಲಿಯಮ್ಸ್ ಅವರು 20 ಅಜೇಯ 20 ರನ್ ಗಳಿಸಿದ್ರು. ಅಂತಿಮವಾಗಿ ಸನ್ ರೈಸರ್ಸ್ ಹೈದ್ರಬಾದ್ ತಂಡ ನಿಗದಿತ ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿತು.

ಗೆಲ್ಲಲು ಕಠಿಣ ಸವಾಲನ್ನು ಬೆನ್ನಟ್ಟಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಹೊಂದಾಣಿಕೆಯ ಕೊರತೆಯಿಂದ ಮಯಾಂಕ್ ಅಗರ್ ವಾಲ್ 9 ರನ್ ಗಳಿಸಿ ರನೌಟಾದ್ರು. ಹಾಗೇ, ಸಿಮ್ರಾನ್ ಸಿಂಗ್ 11 ರನ್ ಗೆ ಸೀಮಿತವಾದ್ರೆ, ಕೆ.ಎಲ್. ರಾಹುಲ್ ಹೋರಾಟ 11 ರನ್ ಗೆ ಅಂತ್ಯಗೊಂಡಿತು.

ಇನ್ನೊಂದೆಡೆ ನಿಕೊಲಾಸ್ ಪೂರನ್ ಏಕಾಂಗಿ ಹೋರಾಟ ನಡೆಸಿದ್ರು. ಆದ್ರೆ ಗ್ಲೇನ್ ಮ್ಯಾಕ್ಸ್ ವೆಲ್ ಮಿಂಚು ಹರಿಸಲು ಮತ್ತೆ ವಿಫಲರಾದ್ರು. ಗ್ಲೇನ್ ಮ್ಯಾಕ್ಸ್ ವೆಲ್ 7 ರನ್ ಹಾಗೂ ಮನದೀಪ್ ಸಿಂಗ್ 6 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.

ಇನ್ನುಳಿದಂತೆ ಮುಜೀಬ್ ಉರ್ ರಹಮಾನ್ 1, ಮಹಮ್ಮದ್ ಶಮಿ, ಶೆಲ್ಡನ್ ಕಾಟ್ರೆಲ್, ಆರ್ಶ್‍ದೀಪ್ ಸಿಂಗ್ ಅವರು ಶೂನ್ಯ ಸುತ್ತಿದ್ರು. ನಿಕೊಲಾಸ್ ಪೂರನ್ ಅವರು 37 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಏಳು ಸಿಕ್ಸರ್ ಗಳ ನೆರವಿನಿಂದ 77 ರನ್ ಸಿಡಿಸಿದ್ರು. ರವಿ ಬಿಸ್ನೋಯ್ ಅವರು ಅಜೇಯ 6 ರನ್ ಗಳಿಸಿದ್ರು.

ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಜೋನಿ ಬೇರ್ ಸ್ಟೋ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು. ರಶೀದ್ ಖಾನ್ ಮೂರು ವಿಕೆಟ್ ಪಡೆದ್ರೆ, ಖಲಿಲ್ ಅಹಮ್ಮದ್, ನಟರಾಜನ್ ಅವರು ತಲಾ ಎರಡು ವಿಕೆಟ್ ಉರುಳಿಸಿದ್ರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights