ದ್ವೇಷದ ವಿಷ ಹರಡುವ ಚಾನೆಲ್‌ಗಳಿಗೆ ಜಾಹೀರಾತು ನೀಡುವುದಿಲ್ಲ: ಉದ್ಯಮಿ ರಾಜೀವ್‌ ಬಜಾಜ್

“ನಮ್ಮ ಕಂಪನಿಯು ರಿಪಬ್ಲಿಕ್‌ ಟಿವಿ ಸೇರಿದಂತೆ ಮೂರು ಚಾನೆಲ್‌ಗಳನ್ನು ಕಪ್ಪು ಪಟ್ಟಿಗೆ ಸೇರಿಸಿ, ಜಾಹೀರಾತು ನಿಷೇಧಿಸಿದ್ದೇವೆ. ವಿಷಕಾರುವ, ದ್ವೇಷ ಹರಡುವ ಮೂಲಗಳೆನ್ನುವ ಯಾವುದರೊಂದಿಗೂ ನಾವು ಸಂಬಂಧ ಹೊಂದುವುದಿಲ್ಲ..” ಎಂದು ಉದ್ಯಮಿ ರಾಜೀವ್‌ ಬಜಾಜ್  ತಿಳಿಸಿದ್ದಾರೆ.

TRP ತಿರುಚಿದ ಆರೋಪದಲ್ಲಿ ರಿಪಬ್ಲಿಕ್ ಟಿವಿ ಸೇರಿದಂತೆ ಮೂರು ಚಾನೆಲ್‌ಗಳ ಮೇಲೆ ತನಿಖೆ ನಡೆಸುವುದಾಗಿ ಮುಂಬೈ ಪೊಲೀಸರು ಘೋಷಿಸಿದ್ದು, ಈ ಬೆನ್ನಲ್ಲೇ ಸಿಎನ್‌ಬಿಸಿ ಟಿವಿ18 ಜೊತೆ ಸಂಭಾಷಣೆ ನಡೆಸಿದರುವ ರಾಜೀವ್‌ ಬಜಾಜ್‌ ಅವರು ವಿಷಕಾರುವ ಮತ್ತು ದ್ವೇಷ ಹರಡುವ ಚಾನೆಲ್‌ಗಳಿಗೆ ಜಾಹೀರಾತು ನೀಡುವುದಿಲ್ಲ ಎಂದು ಹೇಳಿದ್ದಾರೆ.

ಬೃಹತ್ ವ್ಯವಹಾರ ನಡೆಸಬೇಕಾದರೆ ಬಲಾಢ್ಯ ಬ್ರ್ಯಾಂಡ್ ಅಗತ್ಯ. ಅದೇ ಸಮಯದಲ್ಲಿ ಬೃಹತ್ ವ್ಯವಹಾರವು ಸಮಾಜಕ್ಕೆ ಕೊಡುಗೆ ನೀಡಬೇಕು. ಹಾಗಾಗಿ ಸಮಾಜದಲ್ಲಿ ವಿಷ ಹರಡುವ ಮತ್ತು ದ್ವೇಷ ಬಿತ್ತುವ ಯಾವುದರೊಂದಿಗೂ ನಮ್ಮ ಬ್ರ್ಯಾಂಡ್‌ ಸಹಭಾಗಿಗಳಾಗುವುದಿಲ್ಲ ಎಂದು ಚಾನೆಲ್‌ಗಳ ಹೆಸರು ಹೇಳದೇ ರಾಹುಲ್ ಮಾತನಾಡಿದ್ದಾರೆ.

ನಿನ್ನೆ ಮುಂಬೈ ಪೊಲೀಸರು ಟಿಆರ್‌ಪಿ ತಿರುಚಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಮೂರು ಚಾನೆಲ್‌ಗಳ ಮೇಲೆ ತನಿಖೆ ಆರಂಭಿಸಿದ್ದಾರೆ. “ಜಾಹಿರಾತುದಾರರಿಂದ ಚಾನೆಲ್‌ಗಳು ಪಡೆಯುವ ಹಣ ಅಪರಾಧದ ಹಿನ್ನೆಲೆಯಿಂದ ಬಂದಿದೆಯೆ ಎಂಬ ಬಗ್ಗೆ ಕೂಡಾ ತನಿಖೆ ನಡೆಯಲಿದ್ದು, ಚಾನೆಲ್‌ಗಳ ಬ್ಯಾಂಕ್ ಖಾತೆಗಳ ಬಗ್ಗೆ ಕೂಡಾ ತನಿಖೆ ನಡೆಸಲಾಗುವುದು” ಎಂದು ಮುಂಬೈ ಪೊಲೀಸ್ ಮುಖ್ಯಸ್ಥ ಪರಮ್‌ವೀರ್ ಸಿಂಗ್ ಹೇಳಿದ್ದಾರೆ.

“ಹಿಂದಿನ ಮನಮೋಹನ್‌ ಸಿಂಗ್‌ ಸರ್ಕಾರದ ಅವಧಿಯಲ್ಲಿ ಯಾರನ್ನು ಬೇಕಾದರೂ ಟೀಕಿಸುವ ಸ್ವಾತಂತ್ಯ್ರವಿತ್ತು. ಆದರೆ ಈಗಿನ ಸಂದರ್ಭದಲ್ಲಿ ಬಹಿರಂಗವಾಗಿ ಮೋದಿ ಸರ್ಕಾರವನ್ನು ಟೀಕಿಸುವ ಪರಿಸ್ಥಿತಿಯಿಲ್ಲ” ಎಂದು ಕಳೆದ ಡಿಸೆಂಬರ್‌ನಲ್ಲಿ ಆರ್ಥಿಕ ಕುಸಿತದ ಬಗ್ಗೆ ರಾಹುಲ್ ಬಜಾಜ್ ಮಾತನಾಡಿ ಗಮನ ಸೆಳೆದಿದ್ದರು.


ಇದನ್ನೂ ಓದಿ: ಟಿಆರ್‌ಪಿ ಹಗರಣ: ಗೋಸ್ವಾಮಿಗೆ ಒಂದೆಡೆ ಪೊಲೀಸ್‌, ಮೊತ್ತೊಂದೆಡೆ ಇಂಡಿಯಾ ಟುಡೆ ಚಾರ್ಜ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights