ಸಂತನ ಆಡಳಿತದಲ್ಲಿ ಸಾಧುಗಳಿಗೂ ರಕ್ಷಣೆಯಿಲ್ಲ: ಯೋಗಿ ವಿರುದ್ಧ ಮಾಯಾವತಿ ಆಕ್ರೋಶ

ಉತ್ತರ ಪ್ರದೇಶದ ಗೊಂಡಾದಲ್ಲಿ ಭೂವಿವಾದಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಅರ್ಚಕರೊಬ್ಬರ ಕೆಲವು ದುಷ್ಕರ್ಮಿಗಳು ಮೇಲಿನ ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆ ಕುರಿತು ಸರ್ಕಾರವನ್ನು ಟೀಕಿಸಿರುವ ಬಿಎಸ್‌ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ, ಸಂತನ ಆಡಳಿತದಲ್ಲಿ ಸಾಧುಗಳಿಗೂ ರಕ್ಷಣೆಯಿಲ್ಲ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಗೊಂಡಾದ ದೇವಾಲಯದ ಭೂಮಿಯನ್ನು ಭೂಮಾಫಿಯಾಕ್ಕೆ  ಕಬಳಿಸುವ ಉದ್ದೇಶದಿಂದ ಅಲ್ಲಿನ ದೇವಾಲಯದ ಆರ್ಚಕರೊಬ್ಬರನ್ನು ಕೊಲೆ ಮಾಡುವ ಪ್ರಯತ್ನ ನಡೆದಿತ್ತು. ದುಷ್ಕರ್ಮಿಗಳು ಅರ್ಚಕರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಗುಂಡಿನ ದಾಳಿಗೆ ಒಳಗಾಗಿರುವ ಎಥಿಯಾಟಿಕ್ ಕೊತ್ವಾಲಿ ಪ್ರದೇಶದ ರಾಮಜಾನಕಿ ದೇವಾಲಯದ ಆರ್ಚಕ ಸಮರ್ಥ ದಾಸ್ ಅವರಿಗೆ ಲಕ್ನೋದ ಟ್ರಾಮಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಯಾವತಿ, ಸನ್ಯಾಸಿಯ ಸರ್ಕಾರದಲ್ಲಿ ಸಾಧು ಸಂತರೂ ಸುರಕ್ಷಿತವಾಗಿಲ್ಲ ಎಂಬುದು ಅತ್ಯಂತ ನಾಚಿಗೇಡು, ರಾಜ್ಯದಲ್ಲಿ  ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ದ ಎಲ್ಲ ರೀತಿಯಲ್ಲೂ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಭೂ ಮಾಫಿಯಾಗಳಿಗೆ ಸಂಬಂಧಿಸಿದ ಎಲ್ಲ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಸಾಧುಗಳು ಸಂತರು ಹಾಗೂ ಮಠಾಧೀಶರಿಗೆ ಕಲ್ಪಿಸಿರುವ ಭದ್ರತೆಯನ್ನು ಹೆಚ್ಚಿಸಬೇಕು ಎಂದು ಮಾಯಾವತಿ ಟ್ವೀಟ್  ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಮತ್ತಿಬ್ಬರಿಗಾಗಿ ಶೋಧನೆ ನಡೆಸುತ್ತಿದ್ದಾರೆ.


ಇದನ್ನೂ ಓದಿ: ಬಿಹಾರ, ಉತ್ತರ ಪ್ರದೇಶದಂತೆ ಪ.ಬಂಗಾಳವೂ ಮಾಫಿಯಾ ರಾಜ್‌ ಆಗುತ್ತಿದೆ: ಬಿಜೆಪಿ ರಾಜ್ಯಾಧ್ಯಕ್ಷ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights