FACT CHECK | ವಿನೇಶ್ ಪೋಗಟ್ ಅನರ್ಹತೆಗೆ ಕಾರಣವಾಗಿದ್ದು 52.1 ಕೆ.ಜಿ ತೂಕವೋ? ಅಥವಾ 50.1 ಕೆ.ಜಿ ತೂಕವೋ?

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಉತ್ತಮ ಆರಂಭ ಪಡೆದಿದ್ದರು. ಅವರು ಅದ್ಭುತ ಪ್ರದರ್ಶನ ನೀಡುವ ಮೂಲಕ ಫೈನಲ್‌ಗೆ ತಲುಪಿದರು, ಆದರೆ ಪ್ರಶಸ್ತಿ ಪಂದ್ಯದ ಮೊದಲು, ಅಧಿಕ ತೂಕದ ಕಾರಣದಿಂದ ಅನರ್ಹಗೊಳಿಸಲಾಯಿತು.

ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ವಿನೇಶ್ ಅವರು ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಅವರನ್ನು ಎದುರಿಸಿದರು. ಈ ಪಂದ್ಯದಲ್ಲಿ ವಿನೇಶ್ 5-0 ಗೋಲುಗಳಿಂದ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿದರು. ಈ ಪಂದ್ಯಕ್ಕೂ ಮುನ್ನ ವಿನೇಶ್ ಮಹಿಳೆಯರ 50 ಕೆಜಿ ಕುಸ್ತಿಯ ಕೊನೆಯ 16 ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಒಲಿಂಪಿಕ್ ಚಾಂಪಿಯನ್ ಯುಯಿ ಸುಸಾಕಿ ಅವರನ್ನು ಸೋಲಿಸುವ ಮೂಲಕ ದೊಡ್ಡ ಸಾಧನೆ ಮಾಡಿದ್ದರು. ಇದರ ನಂತರ, ಅವರು ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಉಕ್ರೇನಿಯನ್ ಕುಸ್ತಿಪಟುವನ್ನು ಸೋಲಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದರು.

ಈಗ ಸಾಮಾಜಿಕ ಮಧ್ಯಮಗಳಲ್ಲಿ ವಿನೇಶ್ ಫೋಗಟ್ ತೂಕದ ವಿಚಾರವಾಗಿ ಭಾರೀ ಚರ್ಚೆಯಾಗುತ್ತಿದ್ದು, ಕೆಲವರು ವಿನೇಶ್ ಪೋಗಟ್ ಅನರ್ಹತೆಗೆ 52.1 ಕೆಜಿ ಕಾರಣ ಎಂದು ಇನ್ನೂ ಕೆಲವರು 50.1 ಕೆಜಿ ತೂಕ ಹೊಂದಿದ್ದರಿಂದ ವಿನೇಶ್‌ ಪೋಗಟ್‌ಅನ್ನು ಅನರ್ಹಗೊಳಿಸಲಾಗಿದೆ ಎಂದು ವಾದ ಮಂಡಿಸುತ್ತಿದ್ದಾರೆ.

ರಿಷಿ ಬಾರ್ಗಿ ಎಂಬ ಬಲಪಂಥೀಯ ಪ್ರತಿಪಾದಕ ಕೂಡ ಇದೇ ವಾದವನ್ನು ಮಂಡಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಇದು ಒಲಿಂಪಿಕ್ಸ್‌ಇತಿಹಾಸದಲ್ಲಿ ಭಾರತಕ್ಕೆ ಎದುರಾದ ಬಹುದೊಡ್ಡ ಹಿನ್ನಡೆ ಎಂದೇ ಸೋಷಿಯಲ್‌ಮೀಡಿಯಾಗಳಲ್ಲಿ ಈಗ ಕರೆಯಲಾಗುತ್ತಿದೆ. ಹಾಗಿದ್ದರೆ ವಿನೇಶ್ ಪೋಗಟ್‌ ಅನರ್ಹತೆಗೆ ನಿಖರವಾದ ಕಾರಣ ಏನು ಎಂದು ಈ ಸ್ಟೋರಿ ಮೂಲಕ ತಿಳಿದುಕೊಳ್ಳೋಣ.

ವಿನೇಶ್ ಅನರ್ಹತೆಗೆ ನಿಖರವಾದ ಕಾರಣ ?

ಹೇಳಿಕೆ ಬಿಡುಗಡೆ ಮಾಡಿದ ಇಂಡಿಯನ್ ಒಲಿಂಪಿಕ್ಸ್‌ಸಂಸ್ಥೆ

“ಮಹಿಳೆಯರ 50 ಕೆ.ಜಿ ಫ್ರೀಸ್ಟೈಲ್‌ಕುಸ್ತಿಯಿಂದ ವಿನೇಶ್‌ಫೋಗಾಟ್‌ಅನರ್ಹರಾಗಿದ್ದಾರೆ ಎಂಬುದನ್ನು ತಿಳಿಸಲು ವಿಶಾದವಾಗುತ್ತಿದೆ. ಭಾರತ ತಂಡ ನಡೆಸಿದ ಎಲ್ಲ ಪ್ರಯತ್ನಗಳ ಹೊರತಾಗಿಯೂ ವಿನೇಶ್‌ಫೋಗಾಟ್‌ಅವರ ದೇಹದ ತೂಕ ಕೆಲವೇ ಗ್ರಾಮ್‌ಗಳಷ್ಟು ಹೆಚ್ಚಿದೆ. ಹೀಗಾಗಿ ಅವರು ಬುಧವಾರ ಬೆಳಗ್ಗೆ ನಿಗದಿತ 50 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಲು ಅನರ್ಹರಾದರು. ಈ ಸಂದರ್ಭದಲ್ಲಿ ವಿನೇಶ್‌ಫೋಗಾಟ್‌ಅವರ ಖಾಸಗಿ ಸಮಯಕ್ಕೆ ಗೌರವ ನೀಡಿ ಎಂದು ಮನವಿ ಮಾಡುತ್ತೇವೆ. ಇದರಿಂದ ಕೂಟದಲ್ಲಿ ಭಾರತದ ಉಳಿದ ಅಥ್ಲೀಟ್‌ಗಳು ಏಕಾಗ್ರತೆ ವಹಿಸಲು ಸಾಧ್ಯವಾಗುತ್ತದೆ,” ಎಂದು ಐಒಎ ಹೇಳಿಕೆ ಬಿಡುಗಡೆ ಮಾಡಿದೆ.

ಕುಸ್ತಿಯಲ್ಲಿ ಐತಿಹಾಸಿಕ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ವಿನೇಶ್‌ಫೋಗಟ್‌ಗೆ ಭಾರಿ ಆಘಾತ ಎದುರಾಗಿದೆ. ಪ್ಯಾರಿಸ್‌ಒಲಿಂಪಿಕ್ಸ್‌ನ ಮಹಿಳೆಯರ 50 ಕೆ.ಜಿ ಫ್ರೀಸ್ಟೈಲ್‌ಕುಸ್ತಿಯಲ್ಲಿ ಭಾರತದ ಚಾಂಪಿಯನ್ ಕುಸ್ತಿಪಟು ಫೈನಲ್‌ಗೆ ದಾಪುಗಾಲಿಟ್ಟು ಕನಿಷ್ಠ ಬೆಳ್ಳಿ ಪದಕವನ್ನು ಖಾತ್ರಿ ಪಡಿಸಿದ್ದರು. ಇದೀಗ ಫೈನಲ್‌ಪಂದ್ಯಕ್ಕೂ ಮುನ್ನ ವಿನೇಶ್‌ಫೋಗಾಟ್‌ಅವರ ದೇಹದ ತೂಕ ಹೆಚ್ಚಿದೆ ಎಂದು ಡಿಸ್‌ಕ್ವಾಲಿಫೈಡ್‌ಮಾಡಲಾಗಿದೆ. ಫೈನಲ್‌ನಲ್ಲಿ ಅವರು ಅಮೆರಿಕದ ಸಾರಾ ಹಿಲ್‌ಡೆಬ್ರಾಂಟ್‌ಎದುರು ಪೈಪೋಟಿ ನಡೆಸಬೇಕಿತ್ತು.

ಕಳೆದ ಬಾರಿ ಅಂದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ವಿನೇಶ್‌ಫೋಗಟ್‌53 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಈ ಭಾರಿ ತಮ್ಮ ತೂಕ ಇಳಿಸಿಕೊಂಡು 50 ಕೆ.ಜಿ ವಿಭಾಗದಲ್ಲಿ ಸ್ಪರ್ಧೆಗೆ ಇಳಿದಿದ್ದರು. ಅಮೆರಿಕದ ರೆಸ್ಲರ್‌ಸಾರಾ ಹಿಲ್‌ಡೆಬ್ರಾಂಟ್ ವಿರುದ್ಧದ ಫೈನಲ್‌ಗೂ ಮುನ್ನ ನಡೆಸಲಾದ ತೂಕ ಪರೀಕ್ಷೆಯಲ್ಲಿ ವಿನೇಶ್‌ಫೋಗಾಟ್‌100 ಗ್ರಾಮ್‌ಹೆಚ್ಚುವರಿ ತೂಕ ಹೊಂದಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಫೈನಲ್‌ನಿಂದ ಅನರ್ಹಗೊಳಿಸಲಾಗಿದೆ ಎಂದು ವರದಿಗಳ ಮೂಲಕ ತಿಳಿದುಬಂದಿದೆ. ಫೈನಲ್‌ನಲ್ಲಿ ಸ್ಪರ್ಧಿಸಲು ಅವರ ದೇಹದ ತೂಕ 50 ಕೆ.ಜಿ ಗಿಂತಲೂ ಕಡಿಮೆ ಇರಬೇಕಿತ್ತು.

ಫೈನಲ್‌ಗೂ ಮುನ್ನ 100 ಗ್ರಾಮ್‌ಹೆಚ್ಚಿದ ತೂಕ!

ಕುಸ್ತಿ ಸ್ಪರ್ಧೆಯ ಮೊದಲ ದಿನ ವಿನೇಶ್‌ಫೋಗಟ್‌ಮೂರು ಪಂದ್ಯಗಳನ್ನು ಆಡಿದ್ದಾರೆ. 16ರ ಘಟ್ಟದ ಪಂದ್ಯದಲ್ಲಿ ಡಿಫೆಂಡಿಂಗ್‌ಚಾಂಪಿಯನ್‌(ಟೋಕಿಯೋ ಒಲಿಂಪಿಕ್ಸ್‌ಗೋಲ್ಡ್‌ಮಡೆಲಿಸ್ಟ್‌) ಜಪಾನ್‌ನ ಯೂಯ್‌ಸುಸಾಕಿ ಅವರನ್ನು 3-2 ಅಂಕಗಳಿಂದ ಮಣಿಸಿದ್ದ ವಿನೇಶ್‌, ಬಳಿಕ 8ರ ಘಟ್ಟದ ಪಂದ್ಯದಲ್ಲಿ ಯುಕ್ರೇನ್‌ನ ಒಕ್ಸಾನಾ ಲಿವಾಖ್‌ಅವರನ್ನು 7-5 ಅಂತರದಿಂದ ಸೋಲಿಸಿದರು. ಬಳಿಕ ನಡೆದ ಸೆಮಿಫೈನಲ್‌ಪಂದ್ಯದಲ್ಲಿ ಕ್ಯೂಬಾದ ರೆಸ್ಲರ್‌ಯುಸ್ನೇಲಿಸ್‌ಗುಝ್ಮಾನ್‌ಎದುರು 5-0 ಅಂತರದ ಜಯ ದಾಖಲಿಸಿ ಫೈನಲ್‌ತಲುಪುವ ಮೂಲಕ ಕನಿಷ್ಠ ಕಂಚಿನ ಪದಕ ಖಾತ್ರಿ ಪಡಿಸಿಕೊಂಡಿದ್ದರು. ಅಂದಹಾಗೆ ಈ ಮೂರೂ ಪಂದ್ಯಗಳಿಗೂ ಮುನ್ನ ವಿನೇಶ್‌ಫೋಗಾಟ್‌ಅವರ ದೇಹದ ತೂಕ 50 ಕೆ.ಜಿ ದಾಟಿರಲಿಲ್ಲ. ಆದರೆ, ಫೈನಲ್‌ಗೂ ಮುನ್ನ ನಡೆಸಲಾದ ಪರೀಕ್ಷೆಯಲ್ಲಿ ಅವರ ದೇಹ ತೂಕದಲ್ಲಿ ಹೆಚ್ಚಳ ಕಂಡುಬಂದಿದೆ.

ವಿನೇಶ್‌ಕೈತಪ್ಪಿದ ಪದಕ

ಒಲಿಂಪಿಕ್ಸ್‌ನಿಯಮದ ಪ್ರಕಾರ ಈಗ ವಿನೇಶ್‌ಫೋಗಾಟ್‌ಗೆ ಬೆಳ್ಳಿ ಪದಕ ಕೂಡ ಕೈತಪ್ಪಿದೆ. 50 ಕೆ.ಜಿ ಫೈನಲ್‌ತಲುಪಿರುವ ಅಮೆರಿಕದ ಸಾರಾ ಹಿಲ್‌ಡೆಬ್ರಾಂಟ್‌ಅವರಿಗೆ ಗೋಲ್ಡ್‌ಮೆಡಲ್‌ಜಯಿಸಲಿದ್ದು, ಫೈನಲ್ ಪಂದ್ಯ ಆಡದೇ ಇರುವ ಕಾರಣ ವಿನೇಶ್‌ಗೆ ಕನಿಷ್ಠ ಬೆಳ್ಳಿ ಪದಕ ಕೈತಪ್ಪಿದ್ದು, 2 ಕಂಚಿನ ಪದಕಗಳ ವಿತರಣೆ ಆಗಲಿದೆ. ನಿಯಮ ಪ್ರಕಾರ ಅನರ್ಹಗೊಂಡ ಕುಸ್ತಿಪಟುವಿಗೆ ಕೊನೇ ಸ್ಥಾನ ಸಿಗುತ್ತದೆ. ಹೀಗಾಗಿ ವಿನೇಶ್ ಯಾವುದೇ ಪದಕ ಇಲ್ಲದೆ ಹಿಂದಿರುಗುವಂತ್ತಾಗಿದೆ.

ನಿಯಮಾನುಸಾರ ಸ್ಪರ್ಧೆಯ ಎರಡೂ ದಿನ ಅಥ್ಲೀಟ್‌ಅದೇ ದೇಹ ತೂಕವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ವರದಿಗಳ ಪ್ರಕಾರ ವಿನೇಶ್‌ಅವರ ದೇಹದ ತೂಕದಲ್ಲಿ 2 ಕೆ.ಜಿ ಹೆಚ್ಚಳವಾಗಿತ್ತು. ರಾತ್ರಿಯಿಡೀ ನಡೆಸಿದ ಹಲವು ಕಸರತ್ತುಗಳು ಮತ್ತು ಪ್ರಯತ್ನಗಳ ಹೊರತಾಗಿಯೂ ಅವರ ತೂಕದಲ್ಲಿ 100-150 ಗ್ರಾಮ್ ತೂಕ ಹೆಚ್ಚಾಗಿ ಕಂಡುಬಂದಿದೆ ಎನ್ನಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವಿನೇಶ್ ಪೋಗಟ್ ಅನರ್ಹತೆಗೆ ಕಾರಣವಾಗಿದ್ದು 50.1 ಕೆ.ಜಿ ತೂಕವೇ ಹೊರತು 52.1 ಕೆ.ಜಿ ಅಲ್ಲ. ಅಂದರೆ ಅವರು (50ಕೆ.ಜಿ) ಅಗತ್ಯಕ್ಕಿಂತ 100ಗ್ರಾಂ ಹೆಚ್ಚಿಗೆ ತೂಕ ಇದ್ದರಿಂದ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com  ವಾಟ್ಸಾಪ್  ನಂ  9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬಾಂಗ್ಲಾದೇಶದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ರವೀಂದ್ರನಾಥ ಟ್ಯಾಗೋರ್ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights