17 ವರ್ಷದ ಬಾಲಕಿ ಅಪಹರಣ, ಒಡಿಶಾದ ಜಮೀನಿನಲ್ಲಿ 22 ದಿನಗಳ ಕಾಲ ಗ್ಯಾಂಗ್-ರೇಪ್!

ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ. ಮನೆ ಬಿಟ್ಟು ಮಹಿಳೆಯರು ಹೊರಬರಲು ಸಾವಿರ ಬಾರಿ ಯೋಚನೆ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಹತ್ರಾಸ್ ನಂತಹ ಅತ್ಯಾಚಾರ ಪ್ರಕರಣಗಳು ಜನರ ನೆಮ್ಮದಿ ಹಾಳುಮಾಡಿವೆ. ಇಂತಹದ್ದೇ ಒಂದು ಘಟನೆ ಒಡಿಶಾದಲ್ಲಿ ನಡೆದಿದೆ.

ವ್ಯಕ್ತಿಯೊಬ್ಬ 17 ವರ್ಷದ ಬಾಲಕಿಯನ್ನು ಅಪಹರಿಸಿ ಒಡಿಶಾದ ಕಟಕ್‌ನಲ್ಲಿರುವ ಜಮೀನೊಂದಕ್ಕೆ ಕರೆದೊಯ್ದು ಅಲ್ಲಿ ಅವನು ಮತ್ತು ಇನ್ನೊಬ್ಬ ವ್ಯಕ್ತಿ 22 ದಿನಗಳ ಕಾಲ ಅತ್ಯಾಚಾರ ಎಸಗಿದ ದಾರುಣ ಘಟನೆ ನಡೆದಿದೆ.

ನೆರೆಯ ಜಗತ್ಸಿಂಗ್‌ಪುರ ಜಿಲ್ಲೆಯ ಟಿರ್ಟೋಲ್ ಮೂಲದ ಬಾಲಕಿ ಕಳೆದ ತಿಂಗಳು ತನ್ನ ಹೆತ್ತವರೊಂದಿಗೆ ಜಗಳವಾಡಿದ ನಂತರ ಮನೆಯಿಂದ ಓಡಿಹೋಗಿದ್ದಳು.

ಮನೆಗೆ ಮರಳಲು ಕಟಕ್‌ನ ಒಎಂಪಿ ಸ್ಕ್ವೇರ್‌ನಲ್ಲಿ ಬಸ್ ಹತ್ತಲು ಅವಳು ಕಾಯುತ್ತಿದ್ದಾಗ, ಒಬ್ಬ ವ್ಯಕ್ತಿ ತನ್ನ ಮೋಟಾರ್‌ಸೈಕಲ್‌ನಲ್ಲಿ ಆಕೆಗೆ ಮನೆಗೆ ಡ್ರಾಪ್ ಮಾಡುವುದಾಗಿ ಹೇಳಿದ್ದಾನೆ. ಈ ವೇಳೆ ಬಾಲಕಿಯನ್ನು ಅಪಹರಿಸಲಾಗಿದೆ ಎಂದು ಬಾಲಕಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ತಿಳಿಸಿದ್ದಾಳೆ.

ಆದರೆ ಟಿರ್ಟೋಲ್ಗೆ ಹೋಗುವ ಬದಲು, ಅವನು ಅವಳನ್ನು ಗತಿರೌಟ್ಪಟ್ನಾ ಗ್ರಾಮದ ಕೋಳಿ ಸಾಕಣೆ ಕೇಂದ್ರಕ್ಕೆ ಕರೆದೊಯ್ದು 22 ದಿನಗಳ ಕಾಲ ಕೋಣೆಯಲ್ಲಿ ಬಂಧಿಯಾಗಿಟ್ಟಿದ್ದನು. ನಂತರ ಇಬ್ಬರು ಪುರುಷರು ಜಮೀನಿನಲ್ಲಿ ಪದೇ ಪದೇ ಅತ್ಯಾಚಾರ ಮಾಡಿದ್ದಾರೆ ಎಂದು ಅವಳು ಹೇಳಿದ್ದಾಳೆ

ಜಮೀನಿನಲ್ಲಿ ಅಕ್ರಮ ಚಟುವಟಿಕೆಗಳನ್ನು ಶಂಕಿಸಿ ಕೆಲವು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದಾಗ ಬಾಲಕಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡನೇ ಆರೋಪಿಯನ್ನು ಹುಡುಕುವ ಪ್ರಯತ್ನ ನಡುವೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.

“ಆರೋಪಿಗಳ ಸ್ನೇಹಿತನನ್ನು ಬಂಧಿಸಲು ಪೊಲೀಸ್ ತಂಡವನ್ನು ರಚಿಸಲಾಗಿದೆ” ಎಂದು ಕಟಕ್ ನಗರದ ಪೊಲೀಸ್ ಉಪ ಆಯುಕ್ತ ಪ್ರತೀಕ್ ಸಿಂಗ್ ಹೇಳಿದ್ದಾರೆ.

ಅತ್ಯಾಚಾರ ಮತ್ತು ಗ್ಯಾಂಗ್ ರಾಪ್‌ಗೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳಾದ 376 (2) (ಸಿ) ಮತ್ತು 376 (2) (ಜಿ), ಮತ್ತು ಸೆಕ್ಷನ್ 34 ರ ಅಡಿಯಲ್ಲಿ ಕೇಸ್ ದಾಳಲಿಸಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights