Fact Check: ಹಳೆಯ ವಿಡಿಯೋದಲ್ಲಿ ಖುಷ್ಬೂ ಸುಂದರ್ ಕಪಾಳಮೋಕ್ಷ ಮಾಡಿದ ವ್ಯಕ್ತಿ ಬಿಜೆಪಿ ಕಾರ್ಯಕರ್ತನಾ?

2021 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ, ನಟಿ-ರಾಜಕಾರಣಿ ಖುಷ್ಬು ಸುಂದರ್ ಅವರು ಕಾಂಗ್ರೆಸ್ ಅನ್ನು ತೊರೆದು ಅಕ್ಟೋಬರ್ 12 ರಂದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದರು. ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಬಿಜೆಪಿಗೆ ಸೇರಿದ ಸುಂದರ್, 2015 ರಿಂದ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರಾಗಿದ್ದರು.

ಈ ಮಧ್ಯೆ, ಅವರು ಬಿಜೆಪಿಗೆ ತೆರಳಿದ ನಂತರ ಈ ಘಟನೆ ನಡೆದಿದೆ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬನಿಗೆ ಖುಷ್ಬು ಕಪಾಳಮೋಕ್ಷ ಮಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಪಾಳಮೋಕ್ಷ ಮಾಡಿದ ವ್ಯಕ್ತಿ ಖುಷ್ಬು ಅವರೊಂದಿಗೆ ಕೆಟ್ಟದಾಗಿ ವರ್ತಿಸಿದ ಬಿಜೆಪಿ ಕಾರ್ಯಕರ್ತ ಎಂದು ಸಹ ಹೇಳಲಾಗುತ್ತಿದೆ.

ತಮಿಳು ಭಾಷೆಯಲ್ಲಿ ಅಂತಹ ಒಂದು ವೀಡಿಯೊಗೆ ಶೀರ್ಷಿಕೆ ಹೀಗಿದೆ, “ಇಂದು, ಖುಷ್ಬು ಅವರೊಂದಿಗೆ ಕೆಟ್ಟದಾಗಿ ವರ್ತಿಸಲು ಪ್ರಯತ್ನಿಸಿದ ಬಿಜೆಪಿ ಸದಸ್ಯನಿಗೆ ನಟಿ ಕಪಾಳಮೋಕ್ಷ ಮಾಡಿದ್ದಾಳೆ” ಎಂದು ಬರೆಯಲಾಗಿದೆ.

ಆದರೆ ಈ ಹೇಳಿಕೆ ತಪ್ಪಾಗಿದ್ದು ಈ ವಿಡಿಯೋ 2019 ರ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್-ಜೆಡಿ (ಎಸ್) ಚುನಾವಣಾ ರ್ಯಾಲಿಯಿಂದ ಬಂದಿದ್ದು, ಈ ವ್ಯಕ್ತಿ ಬಿಜೆಪಿ ಕಾರ್ಯಕರ್ತ ಎಂದು ಯಾವುದೇ ವಿಶ್ವಾಸಾರ್ಹ ಮೂಲಗಳು ವರದಿ ಮಾಡಿಲ್ಲ. ಖುಷ್ಬು ಅವರು ಇತ್ತೀಚಿನ ಬಿಜೆಪಿಗೆ ಪ್ರವೇಶಿಸುವುದಕ್ಕೂ ಈ ವೀಡಿಯೋಕ್ಕೂ ಯಾವುದೇ ಸಂಬಂಧವಿಲ್ಲ. ಕಳೆದ ವರ್ಷ ಏಪ್ರಿಲ್‌ನಲ್ಲಿ ಅನೇಕ ಮಾಧ್ಯಮಗಳು ಈ ವೀಡಿಯೊವನ್ನು ವರದಿ ಮಾಡಿವೆ. ಖುಷ್ಬು ಅವರೊಂದಿಗೆ ಕೆಟ್ಟದಾಗಿ ವ್ಯಕ್ತಿಯೊಬ್ಬ ವರ್ತಿಸಿದ್ದು ನಿಜ. ಆದರೆ ಆ ವ್ಯಕ್ತಿ ಬಿಜೆಪಿ ಸದಸ್ಯ ಅಲ್ಲ.

2019 ರ ಏಪ್ರಿಲ್ 10 ರಂದು ಖುಷ್ಬು ಬೆಂಗಳೂರು ಕೇಂದ್ರ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಖುಷ್ಬು ಅವರು ಪ್ರಚಾರ ಮುಗಿಸಿ ವಾಹನದತ್ತ ತೆರಳುತ್ತಿದ್ದಾಗ, ಒಬ್ಬ ವ್ಯಕ್ತಿಯು ಅವಳೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾನೆ. ನಂತರ ಖುಷ್ಬು ಆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಏಪ್ರಿಲ್ 11, 2019 ರಂದು ನ್ಯೂಸ್ ಮಿನಿಟ್ ವರದಿಯು ಖುಷ್ಬು ಅವರನ್ನು ಉಲ್ಲೇಖಿಸಿ, “ಅವನು ಒಮ್ಮೆ ನನ್ನನ್ನು ಹಿಡಿದನು ಮತ್ತು ನಾನು ತಿರುಗಿ ನಡೆಯಲು ಪ್ರಾರಂಭಿಸಿದೆ. ಅವನು ನನ್ನನ್ನು ಎರಡನೇ ಬಾರಿಗೆ ಹಿಡಿದನು. ಆ ಸಮಯದಲ್ಲಿ ನಾನು ತಿರುಗಿ ಅವನಿಗೆ ಕಪಾಳಮೋಕ್ಷ ಮಾಡಿದೆ” ಎಂದು ಹೇಳಿದ್ದಾರೆ.

ಬೆಂಗಳೂರು ಪೊಲೀಸರನ್ನು ಉಲ್ಲೇಖಿಸಿ, ಲೇಖನವು ವ್ಯಕ್ತಿಯ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ವರದಿ ಮಾಡಿದೆ. ಅವನಿಗೆ ಎಚ್ಚರಿಕೆ ನೀಡಲಾಯಿತು ಎಂದಿದೆ.

ಹೀಗಾಗಿ ವೈರಲ್ ವೀಡಿಯೋ ಒಂದು ವರ್ಷ ಹಳೆಯದು. ಜೊತೆಗೆ ನಟಿಯೊಂದಿಗೆ ಕೆಟ್ಟದಾಗಿ ವರ್ತಿಸಿದ ವ್ಯಕ್ತಿ ಬಿಜೆಪಿ ಅಥವಾ ಇನ್ನಾವುದೇ ರಾಜಕೀಯ ಪಕ್ಷದವರು ಎಂಬ ಆರೋಪವಿಲ್ಲ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights