ನಟಿ ಸಂಜನಾ, ರಾಗಿಣಿಗೆ ಜಾಮೀನು ನೀಡಲು ಬಾಂಬ್ ಬೆದರಿಕೆ ಪತ್ರ ಬರೆದಿದ್ದ ಆರೋಪಿ ಅರೆಸ್ಟ್!
ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ನಟಿ ಸಂಜನಾ ಮತ್ತು ರಾಗಿಣಿ ಅವರಿಗೆ ಜಾಮೀನು ನೀಡುವಂತೆ ನ್ಯಾಯಾಧೀಶರಿಗೆ ಬಾಂಬ್ ಬೆದರಿಕೆ ಹಾಕಿ ಪತ್ರ ಬರೆದಿದ್ದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬೆದರಿಕೆಗೆ ಸಂಬಂಧಿಸಿದಂತೆ ನಾಲ್ಕು ಪೊಲೀಸರ ತಂಡವನ್ನು ರಚಿಸಲಾಗಿತ್ತು. ಪೊಲೀಸರು ಬೆದರಿಕೆ ಹಾಕಿದ್ದ ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಸಿಟಿ ಸಿವಿಲ್ ಕೋರ್ಟ್ ಮತ್ತು ಕಮೀಷನರ್ ಆಫೀಸಿಗೆ ಬಾಂಬ್ ಹಾಕುತ್ತೇವೆ ಎಂದು ನಿನ್ನೆ ಸಿಟಿ ಸಿವಿಲ್ ಕೋರ್ಟ್ ಜಡ್ಜ್, ಕಮೀಷನರ್ ಕಮಲ್ ಪಂಥ್, ಜಂಟಿ ಪೊಲೀಸ್ ಆಯುಕ್ತ, ಸಂದೀಪ್ ಪಾಟೀಲ್ ಮತ್ತು ಡಿಸಿಪಿ ರವಿಕುಮಾರಿಗೆ ಬೆದರಿಕೆ ಪತ್ರವನ್ನು ಬರೆದಿದ್ದರು.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ರ ಬರೆದ ಆರೋಪಿ ರಾಜಶೇಖರ್ ಸಂಬಂಧಿ ರಮೇಶ್ ಓಟರ್ ಐಡಿ ಮತ್ತು ಫೋನ್ ನಂಬರ್ ಬರೆದು ಪತ್ರವನ್ನು ಕಳುಹಿಸಿದ್ದಾನೆ. ಆಸ್ತಿ ಕೊಳ್ಳೆ ಹೊಡೆಯಲು ರಾಜಶೇಖರ್ ಸಂಬಂಧಿ ರಮೇಶ್ ಮೇಲೆ ಅನುಮಾನ ಬರುವಂತೆ ಈ ಕೃತ್ಯ ಎಸಗಿದ್ದಾನೆ. ರಾಜಶೇಖರ್ ಪತ್ರ ಬರೆಯಲು ವೇದಾಂತ್ ಎಂಬಾತನ ಸಹಾಯ ಪಡೆದಿದ್ದಾ ಎನ್ನಲಾಗಿದೆ.
ಸದ್ಯ ಬೆಂಗಳೂರು ಸಿಸಿಬಿ ಪೊಲೀಸರು ರಾಜಶೇಖರ್ ಮತ್ತು ವೇದಾಂತ್ ಇಬ್ಬರನ್ನು ಅರೆಸ್ಟ್ ಮಾಡಿ ತನಿಖೆ ನಡೆಸುತ್ತಿದ್ದಾರೆ.