ಫೆಬ್ರವರಿ ವೇಳೆಗೆ ಭಾರತದ 50% ಜನರಿಗೆ ಕೊರೊನಾ ಹರಡುತ್ತದೆ: ಕೇಂದ್ರ ಸರ್ಕಾರ ಸಮಿತಿ

ಜಗತ್ತನ್ನೇ ವ್ಯಾಪಿಸಿರುವ ಕೊರೊನಾ ತನ್ನ ಆಕ್ರಮಣವನ್ನು ಮುಂದುವರಿಸಿದೆ. ಆರಂಭದಲ್ಲಿ ಭಯಭೀತರಾಗಿದ್ದ ಜನರು ಇತ್ತೀಚೆಗೆ ಕೊರೊನಾ ಕೂಡ ಸಾಮಾನ್ಯ ಎಂಬಂತೆ ಭಾವಿಸಿದ್ದು, ನಾರ್ಮಲ್‌ ಜೀವನಕ್ಕೆ ಮರಳುತ್ತಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ ಆಘಾತಕಾರಿ ಸುದ್ದಿಯೊಂದನ್ನು ಪ್ರಕಟಿಸಿದೆ. ಮುಂದಿನ ಫೆಬ್ರವರಿ ವೇಳೆಗೆ ಭಾರತದಲ್ಲಿರುವ ಅರ್ಧದಷ್ಟು ಜನರು ಕೊರೊನಾ ಸೋಂಕಿಗೆ ಒಳಗಾಗಲಿದ್ದಾರೆ ಎಂದು ಕೇಂದ್ರ ಸರ್ಕಾರದ ಸಮಿತಿ ತಿಳಿಸಿದೆ.

ಭಾರತದಲ್ಲಿರುವ  130 ಕೋಟಿ ಜನರಲ್ಲಿ 65 ಕೋಟಿ ಜನರಿಗೆ ಸೋಂಕು ತಗುಲಿದೆ. ಈಗಗಲೇ ವಿಶ್ವದಲ್ಲಿಯೇ ಅಧಿಕ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗಿರುವ ದೇಶಗಳಲ್ಲಿ ಭಾರತವು ಎರಡನೇ ಸ್ಥಾನದಲ್ಲಿದ್ದು, ಮೊದಲ ಸ್ಥಾನಕ್ಕೆ ಏರಿಕೆ ಆಗುವ ಸಾಧ್ಯತೆ ಇದೆ.

ಇತ್ತೀಚೆಗಿನ ದಿನಗಳಲ್ಲಿ​ ಸೋಂಕು ಹರಡುವಿಕೆ ಪ್ರಮಾಣ ಕಡಿಮೆಯಾಗುತ್ತಿದೆ. ದಿನವೊಂದಕ್ಕೆ 61,000 ಹೊಸ ಪ್ರಕರಣಗಳು ದಿನವೊಂದಕ್ಕೆ ದಾಖಲಾಗುತ್ತಿದೆ. ನಮ್ಮ ಗಣಿತ ಮಾದರಿ ಅಂದಾಜಿನ ಪ್ರಕಾರ ಶೇ30ರಷ್ಟು ಜನಸಂಖ್ಯೆ ಪ್ರಸ್ತುತ ಸೋಂಕಿಗೆ ತುತ್ತಾಗಿದ್ದಾರೆ. ಈ ಸಂಖ್ಯೆ ಫೆಬ್ರವರಿ ವೇಳೇಗೆ ಶೇ 50ರಷ್ಟು ಆಗಲಿದೆ ಎಂದು ಭಾರತೀಯ ತಾಂತ್ರಿಕ ಸಂಸ್ಥೆ ಪ್ರಾಧ್ಯಾಪಕ ಹಾಗೂ ಸಮಿತಿ ಸದಸ್ಯ ಮನೀಂದ್ರ ಅಗರ್​ವಾಲ್​ ತಿಳಿಸಿದ್ದಾರೆ.

ಪ್ರಸ್ತುತ ವೈರಸ್​ ಹರಡುವಿಕೆಯ ಪ್ರಮಾಣ ಸರ್ಕಾರದ ಸೆರೋಲಾಜಿಕಲ್​ ಸಮೀಕ್ಷೆಗಿಂತ ಹೆಚ್ಚಿದೆ. ಸರ್ಕಾರದ ಈ ಸಮೀಕ್ಷೆ ಶೇ 14ರಷ್ಟು ಜನಸಂಖ್ಯೆಗೆ ಮಾತ್ರ ಸೋಂಕು ತಗುಲಿದೆ. ಈ ಸೆರೋಲಾಜಿಕಲ್​ ಸಮೀಕ್ಷೆ ಸ್ಯಾಂಪಲಿಂಗ್​ ಸಂಪೂರ್ಣವಾಗಿ ಸಂಗ್ರಹಿಸುವಲ್ಲಿ ಸಫಲವಾಗಿಲ್ಲ. ಇದಕ್ಕೆ ಕಾರಣ ಜನಸಂಖ್ಯೆಯ ಸಂಪೂರ್ಣ ಗಾತ್ರದ ಸಂಖ್ಯೆ ಬಳಕೆ ಮಾಡಿಕೊಳ್ಳದಿರುವುದು ಎಂದು ಸಮಿತಿ ಹೇಳಿದೆ.

ವೈರಾಲಾಜಿಸ್ಟ್​, ವಿಜ್ಞಾನಿಗಳು ಮತ್ತು ಇತರ ತಜ್ಞರ ಸಮಿತಿಯು ಗಣಿತದ ಮಾದರಿ ಅವಲಂಬಿಸಿ ಸಮೀಕ್ಷೆ ನಡೆಸಿದ್ದು, ಭಾನುವಾರ ಇದನ್ನು ಪ್ರಕಟಿಸಲಾಗಿದೆ. ಇದರ ಅನ್ವಯ ಹೊಸ ಮಾದರಿ ಬಳಸಿ ರೂಪಿಸಲಾಗಿದೆ. ಇದರಲ್ಲಿ ಪ್ರಕರಣಗಳನ್ನು ಸ್ಪಷ್ಟವಾಗಿ ಗಣನೆಗೆ ತೆಗೆದುಕೊಂಡಿದ್ದೇವೆ. ಈ ಮೂಲಕ ಸೋಂಕಿತರನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ ಎಂದರು.

ಇದೇ ವೇಳೆ ಸಮಿತಿ ಮುನ್ನೆಚ್ಚರಿಕೆ ವಹಿಸದಿದ್ದರೆ ಇದರ ನಿಯಂತ್ರಣ ಸಾಧ್ಯವಿಲ್ಲ ಎಂದು ಕೂಡ ಸ್ಪಷ್ಟಪಡಿಸಿದೆ. ಮಾಸ್ಕ್​ ಧಾರಣೆ, ಸ್ವಚ್ಛತೆ, ಸಾಮಾಜಿಕ ಅಂತರ ನಿರ್ಲಕ್ಷ್ಯಿಸಿದರೆ, ಇದರಿಂದ ಪ್ರಕರಣಗಳ ಸಂಖ್ಯೆ ಒಂದೇ ತಿಂಗಳಲ್ಲಿ 2.6 ದಶಲಕ್ಷ ಹೆಚ್ಚಾಗುವ ಸಾಧ್ಯತೆ ಇದೆ. ರಜೆ ದಿನಗಳು ಹೆಚ್ಚಾಗುತ್ತಿದ್ದಂತೆ ಸೋಂಕಿ ಪ್ರಮಾಣ ಕೂಡ ಹೆಚ್ಚಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.


ಇದನ್ನೂ ಓದಿ: ಸಿದ್ದರಾಮಯ್ಯ ಪುತ್ರನ ಸ್ನೇಹಿತ ಬಿಜೆಪಿ ಅಭ್ಯರ್ಥಿ: ಕಾಂಗ್ರೆಸ್‌ ಪ್ರಚಾರದಲ್ಲಿ ಯತೀಂದ್ರ ಹೇಳಿದ್ದೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights