ಭಾರತದಲ್ಲಿ 95,735 ಹೊಸ ಕೊರೊನಾ ಕೇಸ್ : 1,172 ಸೋಂಕಿತರ ಸಾವು!
ಭಾರತ ಒಂದೇ ದಿನ 95,735 ಹೊಸ ಕೊರೊನಾ ಪ್ರಕರಣಗಳನ್ನು ದಾಖಲಿಸಿದ್ದು 1,172 ಸಾವುಗಳು ಸಂಭವಿಸಿವೆ. ಈವರೆಗೆ ಸೋಂಕಿತರ ಸಂಖ್ಯೆ ಒಟ್ಟು 44.65 ಲಕ್ಷ ತಲುಪಿದೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 95,735 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 1,172 ಸಾವುಗಳು ದಾಖಲಾಗಿವೆ. 9,19,018 ಸಕ್ರಿಯ ಪ್ರಕರಣಗಳು, 3,471,784 ಸೋಂಕಿತರು ಗುಣಮುಖರಾಗಿದ್ದು ಮತ್ತು 75,062 ಸಾವುಗಳು ಸೇರಿದಂತೆ ಒಟ್ಟು ಪ್ರಕರಣಗಳು 44,65,864 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಒಂದೇ ದಿನದಲ್ಲಿ ಸುಮಾರು 96,000 ಹೊಸ ಪ್ರಕರಣಗಳು ದಾಖಲಾದ ನಂತರ ಭಾರತದಲ್ಲಿ ಕೋವಿಡ್ -19 ಸಂಖ್ಯೆ 4,465,863 ಕ್ಕೆ ಏರಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ ಸಾವಿನ ಸಂಖ್ಯೆ 73,890 ರಿಂದ 75,063 ಕ್ಕೆ ಏರಿದೆ. ಗುಣಮುಖರಾದವರ ಸಂಖ್ಯೆ 3,471,783 ರಷ್ಟಿದೆ.
ರಾಯಿಟರ್ಸ್ ಪ್ರಕಾರ, ವಿಶ್ವದಾದ್ಯಂತ 27.7 ಮಿಲಿಯನ್ ಕೋವಿಡ್ -19 ಪ್ರಕರಣಗಳು ಮತ್ತು 902,468 ಸಾವುಗಳು ಸಂಭವಿಸಿವೆ.

