Fact Check: ವೈರಲ್‌ ಆಗುತ್ತಿರುವ ಮಕ್ಕಳ ಅಪಹರಣದ ವಿಡಿಯೋದ ಹಿನ್ನೆಲೆಯೇನು ಗೊತ್ತೇ?

ಸೂಟ್‌ಕೇಸ್‌ನಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ವ್ಯಕ್ತಿಯನ್ನು ಜನರು ಹಿಡಿದಿದ್ದಾರೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಈ ವೀಡಿಯೊವನ್ನು ಮಧುಬನಿ ಲೌಕಾಹಿ ಲೈವ್‌, ವಿಶ್ವ ಗುರು ಭಾರತ, ಪಬ್ಲಿಕ್‌ ಲೈವ್, ಕಾಂಗ್ರೆಸ್ ಫೈಟ್ ಬ್ಯಾಕ್ ಸೇರಿದಂತೆ ಹಲವಾರು Facebook ಪುಟಗಳು ಮತ್ತು ಗುಂಪುಗಳಲ್ಲಿಯೂ ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್‌ ಚೆಕ್:

ವಿಡಿಯೋದ ಸತ್ಯವನ್ನು ಹುಡುಕಲು ಮುಂದಾದಾಗ, ಪಂಜಾಬ್ ಮೂಲದ ರೊಜಾನಾ ವಕ್ತಾರರ ಸತ್ಯ-ಪರೀಕ್ಷಕ ಭಗವಂತ್ ಸಿಂಗ್ ರುಪಾಲ್ ಅವರು ‘ಭಾರತಿ ಪ್ರಾಂಕ್’ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಆ ವಿಡಿಯೋ ನಕಲಿ ಎಂದು ಬಳಕೆದಾರರು ಹೇಳಿರುವ ಯೂಟ್ಯೂಬ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ರೂಪಲ್ ಅವರು ಮೂಲ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋವನ್ನು ಫೇಸ್ ಬುಕ್ ಬಳಕೆದಾರ ರಾಜು ಭಾರತಿ ಪೋಸ್ಟ್ ಮಾಡಿದ್ದಾರೆ. ಇದು ಸ್ಕ್ರಿಪ್ಟೆಡ್‌ ವೀಡಿಯೊ ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಹಂಚಿಕೊಂಡಿದ್ದಾರೆ. “ಈ ಪುಟವು ಕಾಲ್ಪನಿಕ ವೀಡಿಯೊಗಳನ್ನು ಒಳಗೊಂಡಿದೆ; ವೀಡಿಯೊದಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಪಾತ್ರಗಳು ಕಾಲ್ಪನಿಕವಾಗಿವೆ. ಈ ವೀಡಿಯೊಗಳನ್ನು ಸಾಮಾಜಿಕ ಜಾಗೃತಿಯನ್ನು ಬೆಳೆಸುವ ಉದ್ದೇಶದಿಂದ ಮಾಡಲಾಗಿದೆ. ಯಾವುದೇ ಧರ್ಮ, ಜಾತಿ, ರಾಷ್ಟ್ರೀಯತೆ, ಲಿಂಗ ಅಥವಾ ಯಾವುದೇ ವ್ಯಕ್ತಿಯನ್ನು ಯಾವುದೇ ರೀತಿಯಲ್ಲಿ ಮಾನಹಾನಿ ಮಾಡುವುದು, ಅಗೌರವಿಸುವುದು ನಮ್ಮ ಉದ್ದೇಶವಲ್ಲ” ಎಂದು ಅವರು ತಮ್ಮ ಬರೆದಿದ್ದಾರೆ.

ರಾಜು ಭಾರ್ತಿ ಇಂತಹ ಹಲವು ಕಿರುಚಿತ್ರದ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. (1, 2, 3)

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಮಕ್ಕಳ ಅಪಹರಣದ ವೀಡಿಯೊ ಒಂದು ಸ್ಕ್ರಿಪ್ಟೆಡ್‌ ವಿಡಿಯೋವಾಗಿದ್ದು, ಇದರ ತುಣುಕನ್ನು ನೈಜ ಘಟನೆಯೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಕೃಪೆ: ಆಲ್ಟ್‌ನ್ಯೂಸ್‌

ಇದನ್ನೂ ಓದಿ: Fact Check: ತಿರುಪತಿ ಪುರೋಹಿತರ ಮನೆಯಲ್ಲಿ 128KG ಚಿನ್ನ ಪತ್ತೆ? ನಿಜಾಂಶವೇನು?

Spread the love

Leave a Reply

Your email address will not be published. Required fields are marked *