ಬಿಹಾರ ಚುನಾವಣೆಯ ಮೇಲಿದೆ ಯಡಿಯೂರಪ್ಪ ಸಿಎಂ ಖುರ್ಚಿಯ ಭವಿಷ್ಯ

BS ಯಡಿಯೂರಪ್ಪನ ಮುಖ್ಯಮಂತ್ರಿ ಪಟ್ಟ ದೂರದ ಬಿಹಾರದಲ್ಲಿ ನಡೆಯಬಹುದಾದ ರಾಜಕೀಯ ಬೆಳವಣಿಗೆಗಳ ಮೇಲೆ ಅವಲಂಬಿತವಾಗಿದೆ..  ಇದು ನಿಜನಾ ಅಂತ ನೋಡಲು ಹೊರಟರೆ  ಹೌದೆನ್ನುತ್ತಿವೆ ಬಿಜೆಪಿ ಮೂಲಗಳು.. ಬಿಹಾರದಲ್ಲಿ ಮೂರು ಹಂತಗಳಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆ ಇಲ್ಲಿ ಬಿಎಸ್ವೈ ಭವಿಷ್ಯ ನಿರ್ಧರಿಸಲಿದೆ ಎಂಬ ಮಾತು ಕೇಳಿಬರುತ್ತಿದೆ.

ಸಂಪುಟ ವಿಸ್ತರಣೆ ಮಾಡುವುದಕ್ಕೂ ಯಡಿಯೂರಪ್ಪನವರಿಗೆ ಅವಕಾಶ ನೀಡದೇ ಸತಾಯಿಸುತ್ತಿರುವ ಬಿಜೆಪಿ ಹೈಕಮಾಂಡ್ ಬಿಹಾರ ಚುನಾವಣೆ ಬಳಿಕ ಅವರ ನಾಯಕತ್ವದ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ . ಕುತೂಹಲದ ವಿಚಾರವೆಂದರೇ ಬಿಎಸ್ವೈ ತಮ್ಮ ಸ್ಥಾನ ಉಳಿಸಿಕೊಳ್ಳಬೇಕಾದರೇ ಅಲ್ಲಿ ಎನ್ಡಿಎ ಸೋಲಬೇಕು ಎನ್ನುವ ಪರಿಸ್ಥಿತಿ ಇದೆ.

ಬಿಹಾರದಲ್ಲಿ ಎನ್ಡಿಎ ಗೆಲವು ಸುಸೂತ್ರವಲ್ಲ ಎಂಬ ವಾಸ್ತವ ಬಿಜೆಪಿ ನಾಯಕರಿಗೆ ಆಗಿದ್ದು, ಅಧಿಕಾರ ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸಿದೆ. ಒಂದು ವೇಳೆ ಅಲ್ಲಿ ಎನ್ಡಿಎ ಮರಳಿ ಅಧಿಕಾರಕ್ಕೆ ಬರಲು ಸಾಧ್ಯವಾಗದೇ ಹೋದರೇ ಅಂದರೇ ಬಿಜೆಪಿ ಭಾರೀ ಸೋಲು ಅನುಭವಿಸಿದರೇ ಪಕ್ಷವು ಸದ್ಯದ ಮಟ್ಟಿಗೆ ಬಿಎಸ್ವೈ ತಂಟೆಗೆ ಬರುವುದಿಲ್ಲ ಎಂಬ ಮಾತು ಅವರ ವಲಯದಲ್ಲಿಯೇ ಕೇಳಿಬರುತ್ತಿದೆ.

ಬಿಹಾರದಲ್ಲಿ ಬಿಜೆಪಿ ಸೋತರೇ ಮೋದಿ ಮತ್ತು ಶಾ ಮುಖ ಇಟ್ಟುಕೊಂಡು ಪ್ರಚಾರ ಮಾಡಿದರಷ್ಟೇ ಸಾಲದು, ಸ್ಥಳೀಯ ನಾಯಕರೂ ಬೇಕು ಎಂಬ ವಾದಕ್ಕೆ ಪುಷ್ಠಿ ದೊರಕಿದಂತಾಗುತ್ತದೆ. ಆಗ ಅನಿವಾರ್‍ಯ ಎಂಬಂತೆ ಯಡಿಯೂರಪ್ಪ ಅವರನ್ನು ಅವರ ಇಚ್ಛೆಯಾನುಸಾರ ಅಧಿಕಾರ ನಡೆಸಲು ಅನುಮತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಬಿಹಾರದ ಜನತೆ ಮತ್ತು ಎನ್ಡಿಎಗೆ ಮಾಲೆ ಹಾಕಿದರೇ ಡಿಸೆಂಬರ್‌ನಲ್ಲಿ ಬಿಎಸ್ವೈ ಬದಲಾವಣೆ ನಿಶ್ಚಿತ… ಎಲ್ಲದ್ದಕ್ಕು ಕಾಲವೇ ಉತ್ತರಿಸಬೇಕು….


ಇದನ್ನೂ ಓದಿ: ಬೈ ಎಲೆಕ್ಷನ್‌: ಮ್ಯಾಚ್‌ ಫಿಕ್ಸಿಂಗ್‌ ರೀತಿ ವೋಟ್‌ ಫಿಕ್ಸಿಂಗ್ ನಡೆಯುತ್ತಿದೆ‌: ಶರವಣ್‌ ಆರೋಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights