ಸಿ ವೋಟರ್ ಸಮೀಕ್ಷೆ: ಉಪಚುನಾವಣೆಯಲ್ಲಿ ಬಿಜೆಪಿಗೇ ಮೇಲುಗೈ ಸಾಧ್ಯತೆ!

ಬಿಹಾರ ವಿಧಾನಸಭಾ ಚುನಾವಣೆ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಉಪಚುನಾವಣೆಗಳು ನಡೆದಿವೆ. ಬಿಹಾರದಲ್ಲಿ ಬಿಜೆಪಿ ಭಾಗಿಯಾಗಿರುವ ಎನ್‌ಡಿಎ ಮೈತ್ರಿಕೂಟ ಸೋಲನುಭವಿಸಲಿದ್ದು, ಮಹಾಘಟಬಂಧನ್‌ ಅಧಿಕಾರಕ್ಕೇರಲಿದೆ ಎಂದು ಸಿ ವೋಟರ್ ಸಮೀಕ್ಷೆಗಳು ಹೇಳಿವೆ.

ಅಂತೆಯೇ, 4 ರಾಜ್ಯಗಳಲ್ಲಿ ಉಪಚುನಾವಣೆ ನಡೆದಿದ್ದು, ಇದರ ಫಲಿತಾಂಶವೂ ನವೆಂಬರ್ 10 ರಂದು ಹೊರಬೀಳಲಿದೆ. ಚುನಾವಣಾ ನಂತರದ ಸಮೀಕ್ಷಗಳ ಪ್ರಕಾರ ಈ ಉಪಚುನಾವಣೆಯಲ್ಲಿ ಬಿಜೆಪಿಯೆ ಮೇಲುಗೈ ಸಾಧಿಲಿದೆ ಎಂದು ಸಿ ವೋಟರ್ ಮತ್ತು ಇಂಡಿಯಾ ಟುಡೆ ಸಮೀಕ್ಷೆಗಳು ಹೇಳಿವೆ.

ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಅಧಿಕ ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ಇಂಡಿಯಾ ಟುಡೆ ಸಮೀಕ್ಷೆಯ ಪ್ರಕಾರ, ಉತ್ತರ ಪ್ರದೇಶದ ಒಟ್ಟು 7 ಸ್ಥಾನಗಳಲ್ಲಿ, ಬಿಜೆಪಿ 5-6, ಎಸ್‌ಪಿ – 1-2, ಬಿಎಸ್‌ಪಿ 0-1 ಹಂಚಿಕೆಯಾಗಲಿವೆ.

ಮಧ್ಯಪ್ರದೇಶದ ಒಟ್ಟು 28 ಸ್ಥಾನಗಳಲ್ಲಿ, ಬಿಜೆಪಿ 16-18, ಕಾಂಗ್ರೆಸ್ 10-12, ಬಿಎಸ್‌ಪಿ 0-1 ರಂತೆ ಹಂಚಿಕೆಯಾಗಲಿದೆ. ಗುಜರಾತ್ ಒಟ್ಟು ಸ್ಥಾನಗಳಲ್ಲಿ 8, ಬಿಜೆಪಿ 6-7, ಕಾಂಗ್ರೆಸ್‌ 0-1 ಗೆದ್ದುಕೊಳ್ಳಲಿದೆ ಎಂದು ವರದಿ ಹೇಳುತ್ತದೆ.

ಇನ್ನು ಕರ್ನಾಟಕಕ್ಕೆ ಸಂಬಂಧಿಸಿದಂತೆ, ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ‘ಸಿ ವೋಟರ್‌’ ಚುನಾವಣೋತ್ತರ ಸಮೀಕ್ಷೆ ಹೇಳಿದೆ.

ಎರಡೂ ಕ್ಷೇತ್ರಗಳಲ್ಲಿ ನವೆಂಬರ್‌ 3ರಂದು ಮತದಾನ ನಡೆದಿತ್ತು. ನ.10 ರಂದು ಮತ ಎಣಿಕೆ ನಡೆಯಲಿದೆ. ಬಿಜೆಪಿ ಅಭ್ಯರ್ಥಿಗಳಾದ ಮುನಿರತ್ನ ಮತ್ತು ಡಾ. ರಾಜೇಶ್‌ ಗೌಡ ಗೆಲುವು ಸಾಧಿಸಲಿದ್ದಾರೆ ಎಂದು ‘ಸಿ ವೋಟರ್‌’ ಸಮೀಕ್ಷೆ ತಿಳಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights