ಕೇರಳ: ಕೋತಿಗಳ ಹಾವಳಿ ನಿಯಂತ್ರಿಸುವವರಿಗೆ ಓಟು ಎಂದ ಜನರು!

“ತಮ್ಮ ಊರಿನಲ್ಲಿರುವ ಗಂಭೀರ ಕೋತಿಗಳ ಕಾಟ ಹೆಚ್ಚಾಗಿದ್ದು, ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ಹಾಗಾಗಿ ಕೋತಿಗಳ ಕಾಟ ನಿಯಂತ್ರಿಸುವವರಿಗೆ ನಾವು ಮತ ನೀಡುತ್ತೇವೆ” ಎಂದು ಕೇರಳದ ಕಾಲ್ಪೆಟ್ಟ ಪ್ರದೇಶದ ಜನರು ಹೇಳಿದ್ದಾರೆ.

ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದ್ದು, ಯಾರು ಕೋತಿಗಳ ಹಾವಳಿಯನ್ನು ನಿಯಂತ್ರಿಸುತ್ತಾರೋ ಅವರಿಗೇ ಓಟು ಎಂದು ಜನರು ಹೇಳಿದ್ದಾರೆ.

“ತಮ್ಮನ್ನು ಕೋತಿಗಳ ಕಾಟದಿಂದ ಮುಕ್ತಿಗೊಳಿಸುವ ಅಭ್ಯರ್ಥಿಗೆ ಮತ ನೀಡುತ್ತೇವೆ ಎಂದು ಕೇರಳದ ಕಲ್ಪೆಟ್ಟಾ ಮತ್ತು ವೈಯನಾಡ್‌ ಸ್ಥಳಿಯರು ನಿರ್ಧರಿಸಿದ್ದಾರೆ. ಒಬ್ಬ ಸ್ಥಳೀಯರ ಪ್ರಕಾರ, ಯಾವ ಅಭ್ಯರ್ಥಿಯು ಕೋತಿಗಳ ತೊಂದರೆಯನ್ನು ನಿವಾರಿಸುವುದಾಗಿ ಯಾವ ಅಭ್ಯರ್ಥಿ ಹೇಳುತ್ತಾರೋ ಅವರಿಗೆ ನನ್ನ ಮತ ನೀಡುವುದಾಗಿ ನಿರ್ಧರಿಸಿದ್ದೇನೆ. ಕೋತಿಗಳು ನಮ್ಮ ಮನೆಗೆ ನುಗ್ಗಿ ಆಹಾರ ಪದಾರ್ಥಗಳನ್ನು ಹಾಳು ಮಾಡುತ್ತಿದೆ” ಎಂದು ANI ವರದಿ ಮಾಡಿದೆ.

ಪ್ರತಿಯೊಂದು ಕ್ಷೇತ್ರದ ಜನತೆಗೂ ತಮ್ಮದೇ ಆದ ಸಮಸ್ಯೆಗಳಿರುತ್ತದೆ. ಅವುಗಳನ್ನು ನಿವಾರಿಸುವವರಿಗೆ ತಮ್ಮ ಮತಗಳನ್ನು ನೀಡುತ್ತೇವೆ ಎಂದು ಹೇಳುವುದು ಪ್ರಜ್ಞಾವಂತ ನಾಗರೀಕ ಪ್ರಜೆಯ ಹಕ್ಕು. ಆದರೆ ಇಲ್ಲಿ ಕೋತಿಗಳ ಕಾಟ ನಿವಾರಿಸುವವರಿಗೆ ತಮ್ಮ ಮತಗಳನ್ನು ನೀಡುತ್ತೇವೆ ಎನ್ನುತ್ತಿದ್ದಾರೆ.

ಇದರಿಂದಲೇ ತಿಳಿಯುತ್ತದೆ, ಅಲ್ಲಿನ ಸಮಸ್ಯೆ ಎಷ್ಟು ಗಂಭಿರವಾದದ್ದು ಎಂದು. ಹಾಗಾಗಿ ಇಲ್ಲಿನ ಜನರು ತೆಗೆದುಕೊಂಡಿರುವ ತೀರ್ಮಾನ ಮತ್ತು ಇವರು ಇಟ್ಟಿರುವ ಬೇಡಿಕೆ, ನೋಡುವುದಕ್ಕೆ ಹಾಸ್ಯಾಸ್ಪದವಾಗಿ ಕಂಡರೂ, ವಾಸ್ತವದಲ್ಲಿ ಅವರಿಗಾಗಿರಬಹುದಾದ ತೊಂದರೆ ತೀರಾ ಗಂಭೀರವಾದದ್ದು.


Read Also: ಚೀನಾದ RCEP ಒಪ್ಪಂದಕ್ಕೆ 15 ರಾಷ್ಟ್ರಗಳ ಸಹಿ! ಒಪ್ಪಂದದಿಂದ ಹೊರಗುಳಿದ ಭಾರತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights