ಜೋರ್ಡಾನ್ನ ರಾಜಕುಮಾರ ಹಮ್ಜಾಗೆ ಗೃಹ ಬಂಧನ; ಆದೇಶ ಪಾಲಿಸುವುದಿಲ್ಲ ಎಂದ ರಾಜ!
ಜೋರ್ಡಾನ್ನ ರಾಜ ಅಬ್ದುಲ್ಲಾ-2 ಅವರ ವಿರುದ್ದ ಸಂಚು ರೂಪಿಸಿದ್ದಾರೆ ಎಂಬ ಆರೋಪದ ಮೇಲೆ ರಾಜನ ಮಲ ಸಹೋದರ ರಾಜಕುಮಾರ ಹಮ್ಜಾ ಬಿನ್ ಹುಸೇನ್ ಅವರಿಗೆ ಗೃಹ ಬಂಧನ ವಿಧಿಸಲಾಗಿದೆ. ಅದರೆ, ತಾನು ಗೃಹ ಬಂಧನ ಆದೇಶವನ್ನು ಪಾಲಿಸುವುದಿಲ್ಲ ಎಂದು ಹಮ್ಜಾ ಹೇಳಿದ್ದಾರೆ.
ಸಾಮ್ರಾಜ್ಯದ ಭದ್ರತೆಯನ್ನು ಅಸ್ಥಿರಗೊಳಿಸುವ ದೇಶದ್ರೋಹದ ಪಿತೂರಿಯಲ್ಲಿ ಹಮ್ಜಾ ಭಾಗಿಯಾಗಿದ್ದಾರೆ ಎಂದು ಸರ್ಕಾರ ಆರೋಪಿಸಿದೆ. ಹೀಗಾಗಿ, ಅವರನ್ನು ಗೃಹ ಬಂಧನದಲ್ಲಿ ಇರಿಸುವಂತೆ ಆದೇಶ ನೀಡಿದೆ. ಅಲ್ಲದೆ 16 ಜನರನ್ನು ಬಂಧಿಸಲಾಗಿದೆ.
ಈ ಬಗ್ಗೆ ಬಿಬಿಸಿ ಹಮ್ಜಾ ಅವರ ವಿಡಿಯೋ ಬಿಡುಗಡೆ ಮಾಡಿದೆ. ಅದರಲ್ಲಿ, ತನ್ನನ್ನು ಅಮ್ಮನ್ ಅರಮನೆಯಲ್ಲಿ ಗೃಹ ಬಂಧನದಲ್ಲಿ ಇರಿಸಲಾಗಿದೆ. ನಾನು ಟ್ವೀಟ್ ಮಾಡುವಂತಿಲ್ಲ, ಜನರೊದಿಗೆ ಸಂಪರ್ಕಿಸುವಿಲ್ಲ, ಕುಟುಂಬದವರನ್ನು ನೋಡುವಂತಿಲ್ಲ ಎಂದು ಆದೇಶಿಸಿದ್ದಾರೆ. ಆದರೆ, ನಾನು ಇದಾವುದನ್ನೂ ಪಾಲಿಸುವುದಿಲ್ಲ ಎಂದು ಹಮ್ಜಾ ಹೇಳಿದ್ದಾರೆ.
ರಾಜಕುಮಾರ ಬುಡಕಟ್ಟು ಮುಖಂಡರನ್ನು ಭೇಟಿ ಮಾಡಿ ಜನ ಬೆಂಬಲ ಗಳಿಸದ ನಂತರ ಈ ಕ್ರಮಕೈಗೊಳ್ಳಲಾಗಿದೆ. ಇದು ದೇಶದ ನಾಯಕರ ಭ್ರಷ್ಟಾಚಾರ, ಅಸಮರ್ಥತೆ ಮತ್ತು ಕಿರುಕುಳದ ಭಾಗ ಎಂದು ಹಮ್ಜಾ ಅವರ ವಕೀಲ ಆರೋಪಿಸಿದ್ದಾರೆ.
ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್ II ಅವರ ಪತಿ ಪ್ರಿನ್ಸ್ ಫಿಲಿಪ್ ನಿಧನ!

