ಅಂತೂ IPL 2020 ವೇಳಪಟ್ಟಿ ಪ್ರಕಟ; ಮೊದಲ ಪಂದ್ಯದಲ್ಲಿ ಪಿಚ್‌ಗೆ ಇಳಿಯುವವರಾರು?

ನಡೆಯುವುದೇ ಇಲ್ಲ ಎಂದು ಭಾವಿಸಲಾಗಿದ್ದ ಐಪಿಎಲ್‌ ಟೂರ್ನಿ ಸೆಪ್ಟೆಂಬರ್‌ನಿಂದ ಆರಂಭವಾಗಲಿದ್ದು, ಕ್ರಿಕೆಟ್‌ ಪ್ರೇಮಿಗಳಷ್ಟು ಸಾಕಷ್ಟು ಸತಾಯಿಸಿ ಕೊನೆಗೂ ಇಂದು IPL 2020ಯ ವೇಳಾಪಟ್ಟಿ ಪ್ರಕಟವಾಗಿದೆ.

ಅರಬ್‌ ರಾಷ್ಟ್ರಗಳಲ್ಲಿ (ಯುಎಇ) ನಡೆಯಲಿರುವ ಐಪಿಎಲ್‌ ಟೂರ್ನಿಯು ಉದ್ಘಾಟನಾ ಪಂದ್ಯ ಸೆಪ್ಟೆಂಬರ್ 19ರಂದು ಅಬುಧಾಬಿ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲೇ ಹೇಳಲಾಗಿದ್ದಂತೆ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಲೀಗ್​ ಹಂತದ ಎಲ್ಲ 56 ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಲಾಗಿದೆ. ಪ್ಲೇಆಫ್​ ಹಂತದ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಟೂರ್ನಿಯ ಫೈನಲ್ ಪಂದ್ಯ ನವೆಂಬರ್ 10ರಂದು ನಿಗದಿಯಾಗಿದೆ.

ಎರಡನೇ ಪಂದ್ಯ ದುಬೈನಲ್ಲಿ ನಡೆಯಲಿದ್ದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್​ ಇಲೆವೆನ್ ಪಂಜಾಬ್ ನಡುವೆ ನಡೆಯಲಿದೆ. ಮೂರನೇ ಪಂದ್ಯ ಸನ್​ರೈಸರ್ಸ್​ ಹೈದರಬಾದ್​ ಮತ್ತು ಆರ್​ಸಿಬಿ ನಡುವೆ ನಡೆಯಲಿದ್ದು, ಆ ಮೂಲಕ ಆರ್‌ಸಿಬಿ ಐಪಿಎಲ್‌ ಟೂರ್ನಿಯನ್ನು ಪ್ರವೇಶಿಸಲಿದೆ.

ಸೆ.22ರ ನಂತರ ಟೂರ್ನಿಯ ಸ್ಥಳ ಶಾರ್ಜಾಕ್ಕೆ ಸ್ಥಳಾಂತರವಾಗಲಿದೆ. ಸೆ.22 ಆತಿಥೇಯ ರಾಜಸ್ಥಾನ ತಂಡ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನ ಎದುರಿಸಲಿದೆ.

ಒಟ್ಟು 56 ಪಂದ್ಯಗಳಲ್ಲಿ ದುಬೈನಲ್ಲಿ 24, ಅಬುಧಾಬಿಯಲ್ಲಿ 20 ಮತ್ತು ಶಾರ್ಜಾದಲ್ಲಿ 12 ಪಂದ್ಯಗಳು ನಡೆಯಲಿವೆ. ರಾತ್ರಿಯ ಪಂದ್ಯಗಳು ಭಾರತೀಯ ಕಾಲಮಾನದಂತೆ ರಾತ್ರಿ 7.30ಕ್ಕೆ ಆರಂಭಗೊಳ್ಳಲಿವೆ. ಸಂಜೆ ನಡೆಯಲಿರುವ ಪಂದ್ಯಗಳು 3.30ರಿಂದ ನಡೆಯಲಿವೆ.

 


ಇದನ್ನೂ ಓದಿ: IPL 2020: ಬಿಡುಗಡೆಯಾಗದ ವೇಳಾಪಟ್ಟಿ; ಕ್ರಿಕೆಟ್‌ ಪ್ರೇಮಿಗಳಿಂದ ಐಪಿಎಲ್‌ ಟ್ರೋಲ್‌!

Spread the love

Leave a Reply

Your email address will not be published. Required fields are marked *