ಡ್ರಗ್ಸ್‌ ಮಾಫಿಯಾ: ನಟಿ ರಾಗಿಣಿಯಿಂದ ಅಂತರ ಕಾಯ್ದುಕೊಳ್ಳಲು ಬಿಜೆಪಿ ಯತ್ನ!

ಕನ್ನಡ ಚಿತ್ರರಂಗ ಕಳೆದ ಒಂದು ವಾರದಿಂದ ಸಿನಿಮಾಗಳಿಗಿಂತ ಹೆಚ್ಚಾಗಿ ಡ್ರಗ್ಸ್‌ ದಂದೆಯಿಂದಲೇ ಸುದ್ದಿಯಾಗುತ್ತಿದೆ. ಈ ನಡುವೆ ಸಿಸಿಬಿ ಪೊಲೀಸರು ನಟಿ ರಾಗಿಣಿ ದ್ರಿವೇದಿಯನ್ನು ಬಂಧಿಸಿದ್ದು, ಆರೋಪ ಪಟ್ಟಿಯಲ್ಲಿ 2ನೇ ಆರೋಪಿಯೆಂದು ದಾಖಲಿಸಿದೆ. ಅಲ್ಲದೆ, ಡ್ರಗ್ಸ್‌ ದಂದೆಯನ್ನು ಬಿಜೆಪಿ ಸರ್ಕಾರ ಬಯಲುಗೊಳಿಸಿದೆ, ಯಾರೇ ಅಪರಾಧಿಯಾಗಿದ್ದರು ಅವರನ್ನು ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಹಾಗೂ ಹಲವು ಸಚಿವರು ಹೇಳುತ್ತಿರುವ ಬೆನ್ನಲ್ಲೇ, ರಾಗಿಣಿಗೂ ಬಿಜೆಪಿಗೂ ನಂಟಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಲಾಗುತ್ತಿದೆ.

ನಟಿ ರಾಗಿಣಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಬಿಜೆಪಿಯ ಹಲವು ನಾಯಕರೊಂಗಿದೆ ಚುನಾವಣಾ ಕ್ಯಾಂಪೇನ್‌ನಲ್ಲಿ ಭಾಗಿಯಾಗಿದ್ದರು. ಅವರ ಬಿಜೆಪಿ ಪರವಾದ ಕ್ಯಾಂಪೇನ್‌ನ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಜಾಲತಾಣಿಗರು ಕಳ್ಳರು, ರೌಡಿಗಳು, ಭ್ರಷ್ಟರು, ದಂದೆಕೋರರು ಬಿಜೆಪಿ ಸೇರುತ್ತಿದ್ದಾರೆ. ಬಿಜೆಪಿ ಇಂಥವರಿಗೆ ಅಧಿಕಾರ ನೀಡುತ್ತಿದೆ ಎಂದು ಟೀಕಿಸಲಾಗುತ್ತಿದೆ.

ಈ ಮಧ್ಯೆ,  2019ರ ವಿಧಾನಸಭಾ ಉಪ ಚುನಾವಣೆಯ ಸಂದರ್ಭದಲ್ಲಿ ರಾಗಿಣಿ ಸ್ವಯಂ ಪ್ರೇರಣೆಯಿಂದ  ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಬಿಜೆಪಿಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

Ragini Dwivedi's pics with CM BS Yediyurappa's son causing embarrassment to  BJP - IBTimes India

ರಾಗಿಣಿ ದ್ವಿವೇದಿ ಬಂಧನಕ್ಕೊಳಗಾದ ಬೆನ್ನಲ್ಲೇ ನಟಿಯಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿ,  2019ರ ಉಪ ಚುನಾವಣೆ ಸಂದರ್ಭದಲ್ಲಿ ನೂರಾರು ಸೆಲೆಬ್ರಿಟಿಗಳು ಪಕ್ಷದ ಪ್ರಚಾರಾಂದೋಲನದಲ್ಲಿ ಸ್ವಯಂ ಪ್ರೇರಣೆಯಿಂದ ಭಾಗವಹಿಸಿದ್ದರು. ಅವರಲ್ಲಿ ರಾಗಿಣಿ ದ್ವಿವೇದಿ ಕೂಡಾ ಒಬ್ಬರಾಗಿದ್ದರು ಎಂದು ಬಿಜೆಪಿ ವಕ್ತಾರ ಗಣೇಶ್ ಕಾರ್ನಿಕ್ ಹೇಳಿದ್ದಾರೆ.

ದ್ವಿವೇದಿ ಪಕ್ಷದ ಸದಸ್ಯರೂ ಅಲ್ಲ ಅಥವಾ ಚುನಾವಣಾ ಸಂದರ್ಭದಲ್ಲಿ ಅವರಿಗೆ ಪಕ್ಷ ಯಾವುದೇ ಹೊಣೆ ವಹಿಸಿರಲಿಲ್ಲ. ಅವರು ಸ್ವಯಂ ಪ್ರೇರಣೆಯಿಂದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಆಕೆಯ ವೃತ್ತಿ  ಜೀವನ ಮತ್ತು ಚಟುವಟಿಕೆಗಳಿಗೂ ಬಿಜೆಪಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಕಾರ್ನಿಕ್ ಹೇಳಿದ್ದಾರೆ.

ಇಂತಹ ಚಟುವಟಿಕೆಗಳನ್ನು ನಾವು ಪ್ರೋತ್ಸಾಹಿಸುವುದಿಲ್ಲ, ಮಾದಕ ವಸ್ತು ಜಾಲದಲ್ಲಿ ತೊಡಗಿಸಿಕೊಂಡಿರುವುದಕ್ಕೆ ರಾಗಿಣಿ ದ್ವಿವೇದಿಯನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಯಾವುದೇ ರೀತಿಯ ಸಮಾಜ ವಿರೋಧಿ ಚಟುವಟಿಕೆಗಳ ವಿರುದ್ಧವಾಗಿ ಬಿಜೆಪಿ ಇದೆ ಎಂದು ಎಂದು ಅವರು ತಿಳಿಸಿದ್ದಾರೆ.

ಡ್ರಗ್ಸ್‌ ಮಾಫಿಯಾಗೆ ಸಂಬಂಧಿಸಿದಂತೆ ನಟಿ ರಾಗಿಣಿ, ಅವರ ಆಪ್ತ ರವಿಶಂಕರ್ ಹಾಗೂ ಸಂಜನಾ ಅವರ ಒಡನಾಡಿ ರಾಹುಲ್‌ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಇನ್ನೂ 12 ಜನರ ಮೇಲೆ ದೂರು ದಾಖಲಿಸಿದ್ದಾರೆ.


ಇದನ್ನೂ ಓದಿ: ಡ್ರಗ್ಸ್‌ ಮಾಫಿಯಾ; ನಟಿ ರಾಗಿಣಿ ಬಂಧನದ ಬೆನ್ನಲ್ಲೇ 12 ಮಂದಿ ವಿರುದ್ಧ FRI

Spread the love

Leave a Reply

Your email address will not be published. Required fields are marked *