ಬಿಜೆಪಿ ನಿಯಮ; ರಾಜಕೀಯ ನಿವೃತ್ತಿ ಹೊಂದುತ್ತಾರೆಯೇ ಮೋದಿ? ಡೀಟೇಲ್ಸ್‌

ಪ್ರಧಾನಿ ನರೇಂದ್ರ ಮೋದಿಯವರಿಗೆ ಸೆಪ್ಟೆಂಬರ್ ತಿಂಗಳ 17ನೇ ತಾರೀಖಿಗೆ 70 ವರ್ಷ ವಯಸ್ಸು ತುಂಬಲಿದೆ. ಸದ್ಯ ಮೋದಿಯವರ ಬೆಂಬಲಿಗರು ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಆದರೆ, ಬಿಜೆಪಿಯ ರಾಜಕೀಯ ನಿಮಯದ ಪ್ರಕಾರ ಮೋದಿಯವರ ರಾಜಕೀಯ ಭವಿಷ್ಯವು ಇಲ್ಲಿಗೆ ಮುಗಿಯಲಿದೆಯೇ. ಮೋದಿ ರಾಜಕೀಯದಿಂದ ನಿವೃತ್ತಿ ಹೊಂದಬೇಕಾದ ಸಮಯ ಎದುರಾಗಿದೆ.

ಬಿಜೆಪಿಯ ಆಂತರಿಕ ನಿಯಮಗಳ ಪ್ರಕಾರ 70 ವ‍ರ್ಷ ತುಂಬಿದವರು ರಾಜಕೀಯದಲ್ಲಿ ಮುಂದುವರೆಯುವಂತಿಲ್ಲ. ಅವರ ರಾಜಕೀಯ ಜೀವನ 70 ವರ್ಷಗಳಿಗೆ ಮುಗಿಯಲಿದೆ. ಮತ್ತಾವುದೇ ಚುನಾವಣೆಗಳಲ್ಲಿ ಅವರು ಬಿಜೆಪಿಯಿಂದ ಸ್ಪರ್ಧಿಸುವಂತಿಲ್ಲ ಎಂಬ ನಿಯಮವಿದೆ.

ಹಾಗಾಗಿ, ಪ್ರಧಾನಿ ಮೋದಿಯವರು ಇದೇ ಸೆಪ್ಟೆಂಬರ್ 17 ರಂದು 70ನೇ ವಯಸ್ಸಿಗೆ ಕಾಲಿಡಲಿದ್ದು, ಅವರ ರಾಜಕೀಯ ಜೀವನ ಅಂತ್ಯವಾಗುವುದೇ ಎಂಬ ಪ್ರಶ್ನೆ ಉಧ್ಭವಿಸಿದೆ. ಸದ್ಯ ಪ್ರಧಾನಿ ಹುದ್ದೆಯಲ್ಲಿರುವ ಮೋದಿಯವರು 2024ರವರೆಗೆ ಅಧಿಕಾರದಲ್ಲಿರಬಹುದಾದ ಅವಕಾಶವಿದ್ದು, ನಂತರದ ಚುನಾವಣೆಗಳಲ್ಲಿ ಮೋದಿಯವರು ಸ್ಪರ್ಧಿಸಲು ಬಿಜೆಪಿ ನಿಯಮಗಳ ಪ್ರಕಾರ ಅವಕಾಶವಿಲ್ಲ ಎನ್ನಲಾಗುತ್ತಿದೆ.

ಹಾಗಾಗಿ, ಮೋದಿಯವರ 70 ವರ್ಷದ ಹುಟ್ಟು ಹಬ್ಬದ ಸಂಭ್ರಮ ಮೋದಿಯವರ ಬೆಂಬಲಿಗರಿಗೆ ಸಂತೋಷದ ಜೊತೆಗೆ ಬ್ಯಾಡ್‌ ನ್ಯೂಸ್‌ ಕೂಡ ನೀಡಬಹುದಾದ ಸಾಧ್ಯತೆಗಳಿವೆ.

ಅಷ್ಟೇ ಅಲ್ಲದೆ, ಬಿಜೆಪಿಯಲ್ಲಿ ಮೋದಿಯವರ ನಂತರ, ಅವರ ಸ್ಥಾನವನ್ನು ತುಂಬ ಬಹುದಾದವರು ಯಾರು ಎಂಬ ಪ್ರಶ್ನೆಯೂ ಎದುರಾಗಿದೆ.


ಇದನ್ನೂ ಓದಿ: ಪ್ರವಾಹ ಪರಿಹಾರಕ್ಕೆ ಅಗತ್ಯ ನೆರವು ದೊರೆಯದೇ ಇರುವುದಕ್ಕೆ ಮೋದಿಯಲ್ಲ ಮನ್‌ಮೋಹನ್ ಸಿಂಗ್‌ ಕಾರಣ: ಆರ್ ಅಶೋಕ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights