ಬ್ರಿಟನ್‌ ರಾಣಿ ಎಲಿಜಬೆತ್ II ಅವರ ಪತಿ ಪ್ರಿನ್ಸ್ ಫಿಲಿಪ್ ನಿಧನ!

ಬ್ರಿಟನ್‌ನ ರಾಣಿ ಎಲಿಜಬೆತ್ II ಅವರ ಪತಿ ಪ್ರಿನ್ಸ್ ಫಿಲಿಪ್ ಅವರು ಇಂದು ನಿಧನರಾಗಿದ್ದಾರೆ. 99 ವಯಸ್ಸಿನ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದಾಗಿ ಶುಕ್ರವಾರ ನಿಧನರಾಗಿದ್ದಾರೆ ಎಂದು ಬಕಿಂಗ್ಹ್ಯಾಮ್ ಪ್ಯಾಲೇಸ್‌ ತಿಳಿಸಿದೆ.

ನೌಕಾಪಡೆಯ ಮಾಜಿ ಕಮಾಂಡರ್ ಆಗಿದ್ದ ಫಿಲಿಪ್‌ ಬಹಿರಂಗವಾಗಿ ಮಾತನಾಡುತ್ತಿದ್ದರು. ಅವರು ತನ್ನ ಜೀವನದ ಬಹುಭಾಗವನ್ನು ರಾಣಿಯ ಆಪ್ತನಾಗಿ ಅವರ ಚಾರಿಟಿಯಲ್ಲಿ ದಾನ ಕಾರ್ಯಗಳೊಂದಿಗೆ ಕಳೆದಿದ್ದಾರೆ ಎಂದು ಹೇಳಲಾಗಿದೆ.

ಆರೋಗ್ಯ ಸಮಸ್ಯೆಯಿಂದಾಗಿ ಅವರನ್ನು ಫೆಬ್ರವರಿ 16, 2021 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡ ಅವರನ್ನು ಒಂದು ತಿಂಗಳ ನಂತರ ಮನೆಗೆ ಕರೆದೊಯ್ಯಲಾಗಿತ್ತು. ಇದೀಗ ಅವರು ಸಾವನ್ನಪ್ಪಿದ್ದಾರೆ.

ಸುಮಾರು ಎಂಟು ದಶಕಗಳ ಕಾಲ ಫಿಲಿಪ್ ಅವರು ರಾಣಿಯ ಜೊತೆಗಿದ್ದರು. ಜೂನ್‌ ತಿಂಗಳಿನಲ್ಲಿ ಅವರು ತಮ್ಮ 100ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದರು. ಆದರೆ, ಅದಕ್ಕೆ ಕೆಲವೇ ತಿಂಗಳುಗಳ ಮುನ್ನ ಅವರು ಸಾವನ್ನಪ್ಪಿದ್ದಾರೆ. ಅವರು ಈಗ ಬ್ರಿಟನ್‌ನ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ರಾಜರಾಗಿದ್ದಾರೆ.

ನವೆಂಬರ್‌ನಲ್ಲಿ ತಮ್ಮ 73 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ ಈ ದಂಪತಿಗಳು, ಕೊರೊನಾ ಕಾರಣದಿಂದಾಗಿ ಲಂಡನ್‌ನ ಪಶ್ಚಿಮದಲ್ಲಿರುವ ವಿಂಡ್ಸರ್ ಕ್ಯಾಸಲ್‌ನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ಫಿಲಿಪ್ ಮತ್ತು ರಾಣಿ ಜನವರಿಯಲ್ಲಿ ಮೊದಲ ಬಾರಿಗೆ ಕೊರೊನಾ ವ್ಯಾಕ್ಸಿನ್‌ ಹಾಕಿಸಿಕೊಂಡಿದ್ದರು.

ಫಿಲಿಪ್ ಆರೋಗ್ಯ ಸಮಸ್ಯೆಗಳಿಗೆ ಹೊಸದೇನಲ್ಲ. ಈ ಹಿಂದೆ 2011 ರಲ್ಲಿ ನಿರ್ಬಂಧಿತ ಅಪಧಮನಿಯಿಂದ ಬಳಲುತ್ತಿದ್ದ ಅವರಿಗೆ ಸ್ಟೆಂಟ್ ಅಳವಡಿಸಲಾಗಿತ್ತು.

ಅವರು 2018 ರಲ್ಲಿ ಸೊಂಟಕ್ಕೆ ಶಸ್ತ್ರಚಿಕಿತ್ಸೆ ಮಾಡಿಕೊಸಿಕೊಂಡಿದ್ದರು. 2019 ರ ಜನವರಿಯಲ್ಲಿ ಅವರ ಕಾರು ಅಪಘಾತಕ್ಕೆ ಒಳಗಾಗಿ ಅವರೂ ಗಾಯಗೊಂಡಿದ್ದರು.

ಇದನ್ನೂ ಓದಿ: ಸಾಮಾಜಿಕ ಮಾಧ್ಯಮದಲ್ಲಿ ಟ್ರಂಪ್‌ ಖಾತೆ ನಿಷೇಧ; 45ನೇ ಅಧ್ಯಕ್ಷ ಎಂಬ ಹೊಸ ವೆಬ್‌ಸೈಟ್‌ ತೆರೆದ ಟ್ರಂಪ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights