JNU ವಿವಿಗೆ ವಿವೇಕಾನಂದರ ಹೆಸರಿಡಿ ಎಂದ ಸಿ.ಟಿ.ರವಿ: ನೆಟ್ಟಿಗರಿಂದ ತರಾಟೆ!

ದೇಶದಲ್ಲಿಯೇ ಕ್ಯಾಂಪಸ್ ಡೆಮಾಕ್ರಸಿಯನ್ನು ಇನ್ನೂ ಉಳಿಸಿಕೊಂಡಿರುವ ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (JNU) ವಿವಿಗೆ ನೆಹರು ಹೆಸರನ್ನು ತೆಗೆದು ಸ್ವಾಮಿ ವಿವೇಕಾನಂದ ವಿಶ್ವವಿದ್ಯಾನಿಯಲ ಎಂದು ಮರುನಾಮರಕರಣ ಮಾಡಬೇಕು ಎಂದು ಹೇಳಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿಯನ್ನು  ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

1966 ರ ವಿಶೇಷ ಕಾಯ್ದೆಯ ಪ್ರಕಾರ ಹಿಂದುಳಿದ ಪ್ರದೇಶದ ಮತ್ತು ವರ್ಗದ ಮಕ್ಕಳು ದೇಶದ ರಾಜಧಾನಿಯಲ್ಲಿದ್ದು ಅಧ್ಯಯನ ಮಾಡಬೇಕು ಎಂಬ ಉದ್ದೇಶದಿಂದ ಜವಾಹರಲಾಲ್ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಲಾಗಿತ್ತು. ಆರಂಭದಿಂದಲೇ ಜೆಎನ್‌‌ಯು ಪ್ರಭುತ್ವವನ್ನು ಪ್ರಶ್ನಿಸುತ್ತಲೆ ಬಂದಿರುವ ವಿಶ್ವವಿದ್ಯಾನಿಯಲವಾಗಿದ್ದು ದೇಶಕ್ಕೆ ಹಲವಾರು ಧೀಮಂತ ನಾಯಕರನ್ನು ನೀಡಿದೆ. ಅದರಂತೆ ಸಹಜವಾಗಿಯೆ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಕೂಡಾ ಈ ಬಾರಿ ಮಗ್ಗುಲ ಮುಳ್ಳಾಗಿ ಕಾಡಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ಬೆಂಬಲಿತರಿಂದ ಅಲ್ಲಿ ಹಲವಾರು ದಾಳಿಗಳಾಗಿದೆ ಎಂದು ಹಲವಾರು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಇದೀಗ ಬಿಜೆಪಿಯ ನೂತನ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಜೆಎನ್‌ಯು ಹೆಸರನ್ನು ಬದಲಾಯಿಸಬೇಕು ಎಂದು ವಿವಾದ ಮೈಗೆಳೆದಿದ್ದು ಟ್ವೀಟ್ಟರ್‌ನಲ್ಲಿ, “ಸ್ವಾಮಿ ವಿವೇಕಾನಂದರು ಭಾರತ ಎಂಬ ಪರಿಕಲ್ಷನೆಯ ಪರವಾಗಿ ನಿಂತರು. ಅವರ ತತ್ವಶಾಸ್ತ್ರ ಮತ್ತು ಮೌಲ್ಯಾದರ್ಶಗಳೇ ಭಾರತದ ಬಲ ಮತ್ತು ಶಕ್ತಿಯಾಗಿದೆ. ಜೆಎನ್‌ಯು ಹೆಸರನ್ನು ಸ್ವಾಮಿ ವಿವೇಕಾನಂದ ವಿಶ್ವವಿದ್ಯಾನಿಯಲ ಎಂದು ಬದಲಿಸುವುದೆ ಸರಿಯಾಗಿದೆ. ರಾಷ್ಟ್ರಪ್ರೇಮಿ ಸಂತನ ಜೀವನ ತಲೆಮಾರುಗಳ ತನಕ ಪ್ರೇರಣೆ ಆಗಲಿ” ಎಂದು ಬರೆದಿದ್ದಾರೆ.

ಇದನ್ನೂ ಓದಿ: 20 ವರ್ಷದಲ್ಲಿ 07 ಬಾರಿಗೆ ಸಿಎಂ ನಿತೀಶ್‌ ಕುಮಾರ್‌: ಮುಖ್ಯಮಂತ್ರಿ ಗಾದಿಯ ಕಂಪ್ಲೀಟ್‌ ಡೀಟೇಲ್ಸ್

ಆದರೆ ಅವರ ಟ್ವೀಟ್‌‌ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜಯ್ ಎಂಬವರು, “ನಿಮಗೆ ಸ್ವಂತಿಕೆ ಎನ್ನೋದು ಇಲ್ವಾ. ಇನ್ನೊಬ್ಬರ ಕೆಲಸವನ್ನು ತಿರುಚುವ ಪ್ರಯತ್ನ ಯಾಕೆ, ಈವಾಗ ನೀವು ಬದಲಾಯಿಸಿದರೆ ಮುಂದೆ ಅವರು ಅಧಿಕಾರಕ್ಕೆ ಬಂದಾಗ ಅವರು ಅದೇ ಮಾಡುತ್ತಾರೆ. ಹೊಸದಾಗಿ ಯೂನಿವರ್ಸಿಟಿ ಕಟ್ಟಿ ಅದಕ್ಕೆ ಹೆಸರಿಡಿ, ಸುಮ್ಮನೆ ಯಾವಾಗಲೂ ಬೆಂಕಿ ಹಚ್ಚುವ ಹೇಳಿಕೆ ಹಾಗೂ ಕೆಲಸಗಳು ಯಾಕೆ” ಎಂದು ಹೇಳಿದ್ದಾರೆ.

ಸೂರ್ಯ ಎಂಬವರು, “ಸಾರ್ ಹಾಗೆ ನಿಮ್ಮ ಹೆಸರನ್ನು, ನಿಮ್ಮ ಪಾರ್ಟಿ ಹೆಸರನ್ನು ಬದಲಾಯಿಸಿ ಕೊಂಡು ಬಿಡಿ. ನಮಗೆ ಇನ್ನೂ ಖುಷಿ ಆಗುತ್ತದೆ. ಆನಂತರ ಅಗಾಗ ಒಳ್ಳೆ ಕಾಮಿಡಿ ಮಾಡುತ್ತೀರಿ, ಹೀಗೆ ನಿಮ್ಮ ಕಾಮಿಡಿ ಮುಂದುವರೆಸಿ, ಇನ್ನಷ್ಟು ಮನರಂಜನೆ ಕೊಡಿ” ಎಂದು ವ್ಯಂಗ್ಯವಾಡಿದ್ದಾರೆ.

ನವೀನ್ ಎಂಬವರು, “ಜವಾಹರ ಲಾಲ್ ನೆಹರು ಸಹ ದೇಶ ಕಟ್ಟಿದ್ದಾರೆ ದೇಶಕ್ಕಾಗಿ ದುಡಿದಿದ್ದಾರೆ. ಯಾಕೆ ಅವರ ಹೆಸರು ಹೇಳದೆ ನಿಮ್ಮಿಂದ ರಾಜಕಿಯ ಮಾಡಕ್ಕೆ ಯೋಗ್ಯತೆಯಿಲ್ಲ” ಎಂದು ಪ್ರಶ್ನಿಸಿದ್ದಾರೆ.

ಸಂತೋಷ್ ಕುಮಾರ್‌, “ಬರಿ ಹೆಸರು ಬದಲಾಯಿಸುವುದಲ್ಲೇ ನಿಮ್ಮ ಜೀವನ ಕಳೆದು ಹೋಗುತ್ತದೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ನಾವು ಹೊರಗಿನಿಂದ ಬಂದವರು, ಬಿಜೆಪಿ ಅಂತರಂಗದ ಗುಟ್ಟು ಬಿಟ್ಟುಕೊಡುತ್ತಿಲ್ಲ: ಸಚಿವ ಎಸ್‌.ಟಿ. ಸೋಮಶೇಖರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights