ND Tvಯನ್ನು ಜನಪ್ರಿಯ ಚಾನೆಲ್‌ ಪ್ಯಾಕ್‌ನಿಂದ ಹೊರಗಿಟ್ಟು ವಿವಾದ ಸೃಷ್ಟಿಸಿಕೊಂಡ ಹಾತ್‌ವೇ ಕೇಬಲ್‌!

ಜನಪರ ಪತ್ರಿಕೋದ್ಯಮದ ಮೂಲಕ ದೇಶಾದ್ಯಂತ ಪ್ರಖ್ಯಾತಿ ಗಳಿಸಿರುವ NDTV ಹಿಂದಿ ಸುದ್ದಿವಾಹಿನಿಯನ್ನು ಭಾರತದ ಜನಪ್ರಿಯ ಚಾನೆಲ್‌ ಪ್ಯಾಕ್‌ನಿಂದ ಹೊರಗಿಟ್ಟು ಹಾತ್‌ವೇ ಕೇಬಲ್‌‌ ವಿವಾದ ಸೃಷ್ಟಿಸಿದೆ.

ಈ ಕುರಿತು ಟ್ವಿಟ್‌ ಮಾಡಿರುವ ಎನ್‌ಡಿಟಿವಿ ಕನ್ವರ್‍ಜೆನ್ಸ್‌ ಮುಖ್ಯಸ್ಥರಾದ ಸುಪರ್ಣಾ ಸಿಂಗ್‌ ಹಾಗೂ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ರವೀಶ್‌ ಕುಮಾರ್‌, ಟಿವಿ ಕೇಬಲ್‌ ನಿರ್ವಹಣೆ ಮಾಡುವ ಹಾತ್‌ ವೇ ಕೇಬಲ್‌ ಹಾಗೂ ಡೇಟಾಕಾಮ್‌ ಯಾಕೆ ಈ ಕ್ರಮ ಕೈಗೊಂಡಿದೆ ಎಂದು ಗ್ರಾಹಕರ ಸೇವೆಗೆ ಕರೆ ಮಾಡಿ ವೀಕ್ಷಕರು ಪ್ರಶ್ನಿಸಬೇಕೆಂದು ಕೋರಿದ್ದಾರೆ.

ಪ್ರೈಮ್‌ಟೈಮ್ ಕಾರ್ಯಕ್ರಮಗಳಿಗಾಗಿ NDTV ತಂಡವು ಸಾಕಷ್ಟು ಶ್ರಮಪಡುತ್ತಿದೆ. ಈ ರೀತಿಯ ಹೇರಿಕೆಯಿಂದಾಗಿ ಕಾರ್ಯಕ್ರಮಗಳು ಜನರಿಗೆ ತಲುಪದಿದ್ದರೆ ಕಷ್ಟವಾಗುತ್ತದೆ. ಇಂದಿನ ಕಾರ್ಯಕ್ರಮ ವೀಕ್ಷಕರನ್ನು ತಲುಪುವುದಿಲ್ಲ. ಆದರೂ ನಮ್ಮ ಕೆಲಸವನ್ನು ನಾವು ಮಾಡುತ್ತೇವೆ. ನೋಡಲು ಯೋಗ್ಯವಾದ ಕಾರ್ಯಕ್ರಮ ಇದೆಂದು ಇತಿಹಾಸ ನೆನಪಿಡುತ್ತದೆ ಎಂದು ರವೀಶ್‌ ಕುಮಾರ್ ವಿಡಿಯೋದಲ್ಲಿ ತಿಳಿಸಿದ್ದಾರೆ.

ಬೇರೆ ಚಾನೆಲ್‌ಗಳ ರೀತಿ ಇಬ್ಬರು ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಎದುರು ಬದುರು ಕೂರಿಸಿ ಅರಚಾಡುವುದಿಲ್ಲ. ನಾನು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕೂತು ಕಾರ್ಯಕ್ರಮ ಸಿದ್ದಪಡಿಸುತ್ತೇವೆ. ಮಾತನಾಡಬೇಕಾದ ಸಾವಿರಾರು ಪದಗಳನ್ನು ಖುದ್ದು ಬರೆಯುತ್ತೇನೆ. ಇಷ್ಟು ಕಷ್ಟಪಟ್ಟು ತಯಾರಿಸಿದ ಕೆಲಸ ನಿಮಗೆ ತಲುಪಿದ್ದರೆ ಅದು ಸರಿಯಲ್ಲ. ಇದು ಕೇವಲ ಒಂದು ಕಾರ್ಯಕ್ರವಲ್ಲ. ಗೋದಿ ಮಿಡೀಯಾ ಪ್ರತಿದಿನ ಲಕ್ಷಾಂತರ ಪ್ರಜಾತಂತ್ರವಾದಿಗಳ ಕನಸನ್ನು ಹತ್ಯೆ ಮಾಡುತ್ತಿದೆ. ಅದನ್ನು ನಾವು ದಾಖಲೆಗಳ ಸಮೇತ ನಿಮ್ಮ ಮುಂದಿಡುತ್ತಿದ್ದೇವೆ. ಹಾಗಾಗಿ ಪ್ರೈಮ್‌ ಟೈಮ್ ಕಾರ್ಯಕ್ರಮ ಬೇಕೆಂದು ನೀವು ದನಿಯೆತ್ತಿ ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: 101 ಕೌರವರ ಹೆಸರನ್ನು ಒಂದು ನಿಮಿಷದಲ್ಲಿ ಹೇಳುವ ಬಾಲಕ; ಹಲವು ದಾಖಲೆಗಳನ್ನು ನಿರ್ಮಿಸಿದ್ದಾನೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights