ಗುಜರಾತ್‌ನಲ್ಲಿ ಡ್ರ್ಯಾಗನ್ ಹಣ್ಣಿನ ಹೆಸರು ‘ಕಮಲಂ’ ಎಂದು ಮರುನಾಮಕರಣ : ನೆಟ್ಟಿಗರಿಂದ ಸಕತ್ ಮೀಮ್ಸ್

ಗುಜರಾತ್‌ನಲ್ಲಿ ಡ್ರ್ಯಾಗನ್ ಹಣ್ಣಿನ ಹೆಸರು ‘ಕಮಲಂ’ ಎಂದು ಮರುನಾಮಕರಣವಾಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಮೀಮ್ಸ್ ಮತ್ತು ಜೋಕ್ಗಳು ಹರಿದಾಡುತ್ತಿವೆ.

ಡ್ರ್ಯಾಗನ್ ಹಣ್ಣಿನ ಹೆಸರನ್ನು ಕಮಲಂ ಎಂದು ಬದಲಾಯಿಸಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮಂಗಳವಾರ ಹೇಳಿದ್ದಾರೆ. ಹೀಗಾಗಿ ಕಮಲಂ ಎನ್ನುವ ಹೆಸರು ಸದ್ಯ ಅಂತರ್ಜಾಲವನ್ನು ಉತ್ತಮ ಮಟ್ಟಕ್ಕೆ ರಂಜಿಸುತ್ತಿದೆ.

ಡ್ರ್ಯಾಗನ್ ಫ್ರೂಟ್ ಗೆ ಕಮಲಂ ಎಂದು ಏಕೆ ಮರುನಾಮಕರಣ ಮಾಡಲಾಗಿದೆ?

“ಡ್ರ್ಯಾಗನ್ ಫ್ರೂಟ್ ಎಂಬ ಹೆಸರು ಸರಿಯಾಗಿಲ್ಲ ಮತ್ತು ಅದರ ಹೆಸರಿನಿಂದಾಗಿ ಚೀನಾದ ಬಗ್ಗೆ ಯೋಚಿಸಲಾಗುತ್ತದೆ. ಆದ್ದರಿಂದ ನಾವು ಅದಕ್ಕೆ ಕಮಲಂ ಎಂಬ ಹೆಸರನ್ನು ನೀಡಿದ್ದೇವೆ. ಇದು ಕಮಲದಂತೆ ಕಾಣುತ್ತದೆ ಎಂದು ರೈತರು ಹೇಳುತ್ತಾರೆ. ಅದಕ್ಕೆ ನಾವು ಕಮಲಂ ಎಂದು ಹೆಸರಿಟ್ಟಿದ್ದೇವೆ” ಎಂದು ವಿಜಯ್ ರೂಪಾನಿ ಹೇಳಿದರು.

https://twitter.com/pencilashan/status/1351782850576715776?ref_src=twsrc%5Etfw%7Ctwcamp%5Etweetembed%7Ctwterm%5E1351782850576715776%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdragon-fruit-renamed-as-kamalam-in-gujarat-memes-and-jokes-online-are-pure-gold-1760928-2021-01-20

ನವಸಾರಿ ಮತ್ತು ಸೌರಾಷ್ಟ್ರದ ವಿವಿಧ ಭಾಗಗಳಲ್ಲಿ ಬೆಳೆಯುವ ಡ್ರ್ಯಾಗನ್ ಹಣ್ಣಿನ ಹೆಸರನ್ನು ಕಮಲಂಗೆ ಬದಲಾಯಿಸಲು ರಾಜ್ಯ ಸರ್ಕಾರ ಪೇಟೆಂಟ್ಗಾಗಿ ಅರ್ಜಿ ಸಲ್ಲಿಸಿದೆ. ಡ್ರ್ಯಾಗನ್ ಹಣ್ಣು ಹೈಲೋಸೆರಿಯಸ್ ಕುಲದ ಹಣ್ಣನ್ನು ಸೂಚಿಸುತ್ತದೆ. ಭಾರತವನ್ನು ಹೊರತುಪಡಿಸಿ ಆಗ್ನೇಯ ಏಷ್ಯಾ, ಯುನೈಟೆಡ್ ಸ್ಟೇಟ್ಸ್, ಕೆರಿಬಿಯನ್, ಆಸ್ಟ್ರೇಲಿಯಾ ಮತ್ತು ಮೆಸೊಅಮೆರಿಕಾದಲ್ಲಿ ಇದನ್ನು ಬೆಳೆಸಲಾಗುತ್ತದೆ. ಈ ಹಣ್ಣು ಗುಜರಾತ್‌ನ ಶುಷ್ಕ ಪ್ರದೇಶಗಳಲ್ಲಿ ಕಂಡುಬರುತ್ತದೆ ಮತ್ತು ಇದು ಪೌಷ್ಠಿಕಾಂಶದ ಮೌಲ್ಯಕ್ಕೆ ಹೆಸರುವಾಸಿಯಾಗಿದೆ. ಇದು ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯ ಮಾಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇಂಟರ್ನೆಟ್ ರಿಯಾಕ್ಟ್..

ಪ್ರಕಟಣೆಯ ನಂತರ ಡ್ರ್ಯಾಗನ್ ಫ್ರೂಟ್ ಕಮಲಂ ಟ್ವಿಟ್ಟರ್ನಲ್ಲಿ ಟ್ರೆಂಡ್ ಆಗಿದ್ದು ಕಮಲಂ ಬಗ್ಗೆ ಇಂಟರ್ನೆಟ್ ಸಾಕಷ್ಟು ಮೀಮ್ಸ್ ಮತ್ತು ಜೋಕ್ಗಳನ್ನು ಪೋಸ್ಟ್ ಮಾಡಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights