ಬಿಗ್‌ಬಾಸ್‌ ಮನೆಗೆ BJP ಎಂಎಲ್‌ಸಿ ವಿಶ್ವನಾಥ್? ಹಳ್ಳಿಹಕ್ಕಿ‌ ಹೇಳಿದ್ದೇನು?

ನನಗೆ ಬಿಗ್‌ಬಾಸ್‌ ಮನೆಗೆ ಹೋಗಬೇಕು ಎಂಬ ಅಸೆ ಇದೆ. ಸೀಸನ್‌ 06ರಲ್ಲಿ ನನಗೆ ಆಹ್ವಾನ ಬಂದಿತ್ತು. ಆದರೆ, ಅನಾರೋಗ್ಯ ಕಾರಣದಿಂದಾಗಿ ಹೋಗಲು ಸಾಧ್ಯವಾಗಿರಲಿಲ್ಲ. ಇದೀಗ ಹಲವು ಸ್ನೇಹಿತರು ಬಿಗ್‌ಬಾಸ್‌ಗೆ ಹೋಗಿ ಅಂತಿದ್ದಾರೆ. ಅವಕಾಶ ಸಿಕ್ಕಿದ್ರೆ ಹೋಗ್ತೇನೆ ಎಂದು ಹಳ್ಳಿಹಕ್ಕಿ, ಎಂಎಲ್‌ಸಿ ವಿಶ್ವನಾಥ್‌ ಹೇಳಿದ್ದಾರೆ.

ಬಿಗ್‌ಬಾಸ್‌ ಮನೆಗೆ ಹೋದರೆ ನನಗೂ ಒಂದು ವೇದಿಕೆ ಸಿಕ್ಕಿದಂತಾಗುತ್ತದೆ ಎಂಬ ಆಸೆ ಇತ್ತು. ಆದರೆ, ಹಲವು ಚುನಾವಣೆಗಳು ಎದುರಾಗಿವೆ. ಪಕ್ಷದಲ್ಲಿ ಕೆಲಸ ಇರುತ್ತವೆ. ಹಾಗಾಗಿ ವಿಶೇಷವಾಗಿ ಆಹ್ವಾನಿಸಿದರೆ, ಮೂರು ಅಥವಾ ನಾಲ್ಕು ದಿನ ಇದ್ದು ಬರುತ್ತೇನೆ ಎಂದು ಬೆಂಗಳೂರಿನಲ್ಲಿ ಅವರು ಹೇಳಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ನಟ-ನಟಿಯರು, ಯುವಜನರು, ಹಲವು ಕ್ಷೇತ್ರದಿಂದ ಬಂದವರು ಇರುತ್ತಾರೆ. ದೇಶದ ಜನರಿಗೆ ಎಲ್ಲವೂ ಅರ್ಥವಾಗುತ್ತದೆ. ಆದರೆ, ರಾಜಕಾರಣ ಸರಿಯಾಗಿ ಅರ್ಥವಾಗುವುದಿಲ್ಲ. ನಾನು ಬಿಗ್‌ಬಾಸ್‌ ಮನೆಗೆ ಹೋದರೆ, ಅಲ್ಲಿ ರಾಜಕಾರಣದ ಸ್ಪಾರ್ಕ್ ಹೆಚ್ಚಿಸಬಹುದು ಎಂದು ಅವರು ಹೇಳಿದ್ದರು.

ಸದ್ಯ, ಬಿಜೆಪಿಯಿಂದ ನಾಮನಿರ್ದೇಶಿತ ಎಂಎಲ್‌ಸಿ ಆಗಿರುವ ವಿಶ್ವನಾಥ್‌ ಮಂತ್ರಿ ಪದವಿಗಾಗಿ ದಂಬಾಲು ಬಿದ್ದಿದ್ದಾರೆ. ಜನರಿಂದ ಆಯ್ಕೆ ಆದರೆ ಮಾತ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದರಿಂದಾಗಿ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಹಾಗಾಗಿ ಮುಂದಿನ ವಾರ ವಿಧಾನ ಪರಿಷತ್‌ಗೆ ವಿಧಾನಸಭೆಯಿಂದ ನಡೆಯಲಿರುವ ಚುನಾವಣೆಯಲ್ಲಿ ತಮಗೆ ಟಿಕೆಟ್‌ ನೀಡಬೇಕು ಎಂದು ವಿಶ್ವನಾಥ್‌ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಮೈಸೂರು JDSನಲ್ಲಿ ಭುಗಿಲೆದ್ದ ಆಕ್ರೋಶ; ಜಿ.ಟಿ ದೇವೇಗೌಡರನ್ನು ಉಚ್ಛಾಟಿಸುವಂತೆ ಒತ್ತಾಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights