ವಿದ್ಯಾರ್ಥಿಗಳೊಂದಿಗೆ ಪುಷ್-ಅಪ್ ಮಾಡಿದ ರಾಹುಲ್ ಗಾಂಧಿ : ವೀಡಿಯೋ ವೈರಲ್!
ತುಂಬಾ ಸಲೀಸಾಗಿ ಯಾವ ಬಾಕ್ಸರ್ ಗೂ ಕಮ್ಮಿ ಇಲ್ಲ ಎಂಬಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪುಷ್-ಅಪ್ ಮಾಡಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ತಮಿಳುನಾಡಿನ ಮುಲಾಗುಮುದಬ್ನ್‌ನಲ್ಲಿರುವ ಸೇಂಟ್ ಜೋಸೆಫ್ ಮೆಟ್ರಿಕ್ಯುಲೇಷನ್ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದ ನಂತರ ರಾಹುಲ್ ಗಾಂಧಿ ನೃತ್ಯ ಮಾಡಿದ್ದಾರೆ.
ವೀಡಿಯೊದಲ್ಲಿ, ರಾಹುಲ್ ಗಾಂಧಿ ತಮಿಳುನಾಡಿನ ಮುಲಾಗುಮುದಬ್ನ್ ಎಂಬ ವಿದ್ಯಾರ್ಥಿಯೊಂದಿಗೆ ಪುಷ್-ಅಪ್ ಮಾಡಿದ್ದಾರೆ.ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ 15 ಪುಷ್-ಅಪ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಜೊತೆಗೆ ಒಂದೆ ಕೈಯಿಂದ ಪುಷ್-ಅಪ್ ಮಾಡಿದ್ದಾರೆ.
#WATCH: Congress leader Rahul Gandhi doing push-ups and 'Aikido' with students of St. Joseph's Matriculation Hr. Sec. School in Mulagumoodubn, Tamil Nadu pic.twitter.com/qbc8OzI1HE
— ANI (@ANI) March 1, 2021
ತಮಿಳುನಾಡಿನ ರಾಜ್ಯಕ್ಕೆ ಭೇಟಿ ನೀಡಿದ ವಯನಾಡ್ ಸಂಸದ ರಾಹುಲ್ ಗಾಂಧಿ, ಎಐಸಿಸಿ ತಮಿಳುನಾಡು ಉಸ್ತುವಾರಿ ದಿನೇಶ್ ಗುಂಡು ರಾವ್ ವಿದ್ಯಾರ್ಥಿಗಳೊಂದಿಗೆ ನೃತ್ಯ ಮಾಡಿದ್ದಾರೆ.
#WATCH: Congress leader Rahul Gandhi dances with students of St. Joseph's Matriculation Hr. Sec. School in Mulagumoodubn, Tamil Nadu during an interaction with them pic.twitter.com/RaSDpuXTqQ
— ANI (@ANI) March 1, 2021
ವೀಡಿಯೋ ವೈರಲ್ ಆದ ನಂತರ ಹಲವಾರು ವ್ಯಕ್ತಿಗಳು ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿಯನ್ನು ಹೊಗಳಿದ್ದಾರೆ ಮತ್ತು ಫಿಟ್ನೆಸ್ ಗೆ ಸಲಹೆ ನೀಡಿದ್ದಾರೆ. ಬಾಕ್ಸಿಂಗ್ ಚಾಂಪಿಯನ್ ವಿಜೇಂದರ್ ಸಿಂಗ್ ಅವರು ಗಾಂಧಿಯವರ ಪುಷ್-ಅಪ್ ಅನ್ನು ಬೆರಗಾದರು ಜೊತೆಗೆ ಅವರನ್ನು ‘ಬಾಕ್ಸರ್’ ಎಂದು ಕರೆದಿದ್ದಾರೆ.