ಬಿಗ್ ಬಾಸ್ ಕನ್ನಡ ಸೀಸನ್ 8 : ಒಂಟಿ ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಸೆಲೆಬ್ರಿಟಿಗಳು…

ಬಿಗ್ ಬಾಸ್ ಸೀಸನ್ 8 ಈಗಾಗಲೇ ಪ್ರಾರಂಭವಾಗಿದೆ. ಸ್ಪರ್ಧಿಗಳು ಯಾರು ಯಾರು ಬರುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಕನ್ನಡದ ಬಿಗ್ ಬಾಸ್ 8ನೇ ಆವೃತ್ತಿ ನಿನ್ನೆಯಿಂದ ಆರಂಭವಾಗಿದ್ದು, ಒಂಟಿ ಮನೆಗೆ ಒಟ್ಟು 17 ಸ್ಪರ್ಧಿಗಳು ಎಂಟ್ರಿಯಾಗಿದ್ದಾರೆ.

8ನೇ ಸೀಸನ್ಗೆ ಹಲವಾರು ನಟ, ನಟಿ ಸ್ಟಾರ್ ಗಳು ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಹಲವರ ಹೆಸರು ಕೇಳಿ ಬರುತ್ತಿತ್ತು.

ಅಂತಿಮವಾಗಿ ಈಗ ಸೋಷಿಯಲ್ ಮೀಡಿಯಾದಲ್ಲಿ ಮೋಟಿವೇಷನ್ ಮಾತುಗಳನ್ನಾಡುವ ಬ್ರೋ ಗೌಡ, ಬ್ರಹ್ಮಗಂಟು ಧಾರವಾಹಿಯ ನಟಿ ಗೀತಾ ಭಾರತಿ ಭಟ್, ಹಾಸ್ಯ ಕಲಾವಿದ ಮಂಜುಪಾವಗಡ, ಪುಟ್ಟಗೌರಿ ಮದುವೆಯ ಅಜ್ಜಮ್ಮ ಚಂದ್ರಕಲಾ ಮೋಹನ್, ನಟಿ ದಿವ್ಯ, ಯೂಟ್ಯೂಬ್ ನಲ್ಲಿ ಕಾಮಿಡಿ ವಿಡಿಯೋ ಮಾಡುವ ರಘು, ಸ್ಯಾಂಡಲ್ ವುಡ್ ಡ್ರಗ್ಸ್ ಆರೋಪ ಮಾಡಿದ್ದ ಪ್ರಶಾಂತ್ ಸಂಬರ್ಗಿ, ಸೀರಿಯಲ್ ನಟಿ ದಿವ್ಯ ಉರುಡುಗ, ನಟ ರಾಜೀವ್, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ನಿರ್ಮಿಲಾ ಚನ್ನಪ್ಪ ಎಂಟ್ರಿ ಕೊಟ್ಟಿದ್ದಾರೆ.

ಇನ್ನೂ ನಟಿ ನಿಧಿ ಸುಬ್ಬಯ್ಯ, ಹಿರಿಯ ನಟ ಶಂಕರ್ ಅಶ್ವಥ್, ಅಗ್ನಿಸಾಕ್ಷಿ ಧಾರವಾಹಿ ಖ್ಯಾತಿಯ ವೈಷ್ಣವಿ, ಟಿಕ್ ಟಾಕ್ ಸ್ಟಾರ್ ಧನುಶ್ರೀ, ಉತ್ತರ ಕನ್ನಡದ ಹಾಡುಗಾರ ವಿಶ್ವನಾಥ್, ಬೈಕ್ ರೈಡರ್ ಅರವಿಂದ್ ಪ್ರವೇಶಿಸಿದ್ದಾರೆ.

ಒಟ್ಟಿನಲ್ಲಿ ನಾನಾ ಕ್ಷೇತ್ರದಲ್ಲಿ ಗುರುತಿಸಿಕೊಮಡ ಸೆಲೆಬ್ರಿಟಿಗಳು ಅದ್ಯಾವ ರೀತಿ ಮನೋರಂಜನೆ ನೀಡ್ತಾರೆ ಅನ್ನೊದು ಭಾರೀ ನಿರೀಕ್ಷೆ ಹುಟ್ಟಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights