ರೈತರ ಟ್ರ್ಯಾಕ್ಟರ್ ರ್ಯಾಲಿಯನ್ನು ಪೊಲೀಸರು ನಿರ್ಧರಿಸುತ್ತಾರೆ – ಸುಪ್ರೀಂ ಕೋರ್ಟ್

ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಕಳೆದ ಕೆಲ ತಿಂಗಳಿನಿಂದ ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನೆ ಮುಂದುವರೆಸಿದ ಹರಿಯಾಣ ಮತ್ತು ಪಂಜಾಬ್ ರೈತರು ಜನವರಿ 26 ಗಣರಾಜ್ಯೋತ್ಸವಕ್ಕೆ ಟ್ರ್ಯಾಕ್ಟರ್ ರ್ಯಾಲಿ ಮಾಡಲು ನಿರ್ಧರಿಸಿದ್ದಾರೆ.

ಹೌದು.. ನವದೆಹಲಿಯಲ್ಲಿ ಗಣರಾಜ್ಯೋತ್ಸವದಂದು ಯೋಜಿತ ಟ್ರ್ಯಾಕ್ಟರ್ ರ್ಯಾಲಿಗೆ ಕೇಂದ್ರ ಸರ್ಕಾರ ಬೆದರಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಆದರೆ  ಗಣರಾಜ್ಯೋತ್ಸವದಂದು ಯೋಜಿತ ಟ್ರ್ಯಾಕ್ಟರ್ ರ್ಯಾಲಿಗೆ ಸಂಬಧಿಸಿದ ಆದೇಶಗಳನ್ನು ರವಾನಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ. ಏಕೆಂದರೆ ಈ ವಿಷಯಗಳನ್ನು ಪೊಲೀಸರು ನಿರ್ಧರಿಸಬೇಕು ಎಂದು ಕೋರ್ಟ್ ಹೇಳಿದೆ.

ಮೂರು ಹೊಸ ವಿವಾದಗಳ ಕೃಷಿ ಕಾನೂನುಗಳ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ವಿಫಲವಾದ ಹಿನ್ನೆಲೆ ಸಾವಿರಾರು ರೈತರು ರಾಷ್ಟ್ರ ರಾಜಧಾನಿಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆಯನ್ನು ನಡೆಸಲು ನಿರ್ಧರಿಸಿದ್ದಾರೆ. ಆದರೆ “ಯಾವುದೇ ರ್ಯಾಲಿ ಅಥವಾ ಮೆರವಣಿಗೆಯನ್ನು ಅನುಮತಿಸುವುದನ್ನು ನಾವು ಅನಿಯಮಿತ ಮತ್ತು ಅನುಚಿತವೆಂದು ನೋಡುತ್ತೇವೆ. ಇದು ಪೊಲೀಸ್ ವಿಷಯವಾಗಿದೆ. ಪೊಲೀಸರು ಅದನ್ನು ನಿರ್ಧರಿಸುತ್ತಾರೆ. ನಾವು ಆದೇಶವನ್ನು ರವಾನಿಸಲು ಹೋಗುವುದಿಲ್ಲ” ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಇಂದು ತಿಳಿಸಿದೆ.

ಈಗಾಗಲೇ ಪ್ರತಿಭಟನೆಗೆ ಸಂಭದಿಸಿದಂತೆ ಕೇಂದ್ರ ಸರ್ಕಾರದೊಂದಿಗೆ ಹಲವಾರು ಸುತ್ತಿನ ಮಾತುಕತೆ ನಡೆದಿದೆ. ಆದರೆ ಕೇಂದ್ರ ಸರ್ಕಾರ ರೈತರ ಮನವೊಲಿಸುವಲ್ಲಿ ಸಫಲವಾಗಿಲ್ಲ.

ಮುಖ್ಯ ಬೇಡಿಕೆಗಳು: 1.ಎಲ್ಲಾ ಮೂರು ಫಾರ್ಮ್ ಮಸೂದೆಗಳನ್ನು ಹಿಂತೆಗೆದುಕೊಳ್ಳುವುದು

2.ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಕಾನೂನುಬದ್ಧವಾಗಿ ಖಚಿತಪಡಿಸಿ
3.ಸರಾಸರಿ ತೂಕದ ಉತ್ಪಾದನೆಯ ವೆಚ್ಚಕ್ಕಿಂತ ಎಂಎಸ್‌ಪಿಯನ್ನು ಕನಿಷ್ಠ 50% ಹೆಚ್ಚಿಸಿ
4.ಎನ್‌ಸಿಆರ್ ಮತ್ತು ಪಕ್ಕದ ಪ್ರದೇಶಗಳಲ್ಲಿ ವಾಯು ಗುಣಮಟ್ಟದ ಆಯೋಗವನ್ನು ಹಿಂತೆಗೆದುಕೊಳ್ಳಿ (2020)
5.ರೈತರ ರಾಷ್ಟ್ರೀಯ ಆಯೋಗದ ಶಿಫಾರಸುಗಳನ್ನು ಜಾರಿ
6.ಕೃಷಿ ಒಕ್ಕೂಟದ ಮುಖಂಡರು, ಬರಹಗಾರರು, ಮಾನವ ಹಕ್ಕು ಕಾರ್ಯಕರ್ತರು, ಕವಿಗಳು ಮತ್ತು ಬುದ್ಧಿಜೀವಿಗಳ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲು
7. ಕೃಷಿ ಚಟುವಟಿಕೆಗಳಿಗೆ ಡೀಸೆಲ್ ಬೆಲೆಯನ್ನು 50% ರಷ್ಟು ಕಡಿಮೆ ಮಾಡುವುದು
8.ವಿದ್ಯುತ್ (ತಿದ್ದುಪಡಿ) ಸುಗ್ರೀವಾಜ್ಞೆ (2020) ಹಿಂತೆಗೆದುಕೊಳ್ಳಲು
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights