“ನಾನು ನನ್ನ ಪತ್ನಿಯ ಸಂಗಾತಿ, ಧಣಿ ಅಲ್ಲ” : ಟೀಕೆಯ ಟ್ವೀಟ್‌ಗಳಿಗೆ ಇರ್ಫಾನ್ ಪಠಾಣ್ ಪ್ರತಿಕ್ರಿಯೆ!

ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದು ಸಾರ್ವಜನಿಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರುತ್ತಾರೆ. ಇತ್ತೀಚೆಗೆ ಅವರು ತಮ್ಮ ಪತ್ನಿ ಸಫಾ ಬೇಗಂ ಅವರ ಫೋಟೋದ ಬಗ್ಗೆ ಟೀಕೆಯ ಟ್ವೀಟ್‌ಗಳಿಗೆ ಪ್ರತಿಕ್ರಿಯಿಸಿ “ನಾನು ನನ್ನ ಪತ್ನಿಯ ಸಂಗಾತಿ, ಧಣಿ ಅಲ್ಲ” ಎಂದು ಉತ್ತರ ನೀಡಿದ್ದಾರೆ.

ಈ ಹಿಂದೆ ಇರ್ಫಾನ್ ಪಠಾಣ್ ಅವರ ಪತ್ನಿಯ ಮುಖವನ್ನು ಬ್ಲರ್ ಮಾಡಿದ ಫೋಟೋವನ್ನು ಹಂಚಿಕೊಳ್ಳಲಾಗಿತ್ತು. ಇದಕ್ಕೆ ಹಲವಾರು ಜನ ಇರ್ಫಾನ್ ಪಠಾಣ್ ತಮ್ಮ ಪತ್ನಿ ಮುಖವನ್ನು ಬ್ಲರ್ ಮಾಡಿದ್ದಾರೆ, ಅವರ ಮುಖವನ್ನು ತೋರಿಸಲು ಬಯಸುವುದಿಲ್ಲ ಎಂದು ಟೀಕಿಸಿದ್ದರು. ಇದಕ್ಕೆ ಉತ್ತರಿಸಿದ ಇರ್ಫಾನ್ ಪಠಾಣ್ “ನಾನು ನನ್ನ ಪತ್ನಿಯ ಸಂಗಾತಿ, ಧಣಿ ಅಲ್ಲ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಈ ಫೋಟೋವನ್ನು ಮೂಲತಃ ತನ್ನ ಮಗನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದರಲ್ಲಿ ಅವರ ಹೆಂಡತಿಯೇ ತಮ್ಮ ಮುಖವನ್ನು ಬ್ಲರ್ ಮಾಡಿದ್ದಾರೆ. ಇದನ್ನ ನಾನು ಮಾಡಿಲ್ಲ. ನಾನು ನನ್ನ ಪತ್ನಿಯ ಸಂಗಾತಿ, ಧಣಿ ಅಲ್ಲ ಎಂದು ಇರ್ಫಾನ್ ಸ್ಪಷ್ಟನೆ ನೀಡಿದ್ದಾರೆ.

ರಾಯ್‌ಪುರದಲ್ಲಿ ಇರ್ಫಾನ್ ಕೋವಿಡ್‌ ಧನಾತ್ಮಕ ಪರೀಕ್ಷೆ ನಡೆಸಿದ್ದರು. ಅವರು ಮನೆಯ ಪ್ರತ್ಯೇಕತೆಯಿಂದಲೇ ವೈರಸ್‌ನಿಂದ ಚೇತರಿಸಿಕೊಂಡರು. ಇರ್ಫಾನ್ 29 ಟೆಸ್ಟ್, 120 ಏಕದಿನ ಮತ್ತು 24 ಟಿ 20 ಐಗಳಲ್ಲಿ ಭಾರತವನ್ನು ಪ್ರತಿನಿಧಿಸಿ 301 ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights