BJPಯಲ್ಲಿದ್ರೆ Z ಸೆಕ್ಯೂರಿಟಿ, ಇಲ್ದಿದ್ರೆ ಇಲ್ಲ; TMC ಸೇರಿದ ಮುಕುಲ್‌ ರಾಯ್‌ Z ರಕ್ಷಣೆ ಕಸಿದುಕೊಂಡ ಕೇಂದ್ರ!

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತೊರೆದು ಟಿಎಂಸಿ ಸೇರಿದ ಹಿರಿಯ ಮುಖಂಡ, ಶಾಸಕ ಮುಕುಲ್ ರಾಯ್‌ ಅವರಿಗೆ ನೀಡಲಾಗಿದ್ದ Z ಸೆಕ್ಯೂರಿಟಿಯನ್ನು ಒಕ್ಕೂಟ ಸರ್ಕಾರ ವಾಪಸ್‌ ಪಡೆದುಕೊಂಡಿದೆ ಎನ್ನಲಾಗಿದೆ.

2017ರಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಮುಖಲ್‌ ರಾಯ್‌, ಬಿಜೆಪಿಯಿಂದ ಗೆದ್ದಿ ಶಾಸಕರಾಗಿದ್ದರು. ಇದೀಗ ಅವರು ಬಿಜೆಪಿ ತೊರೆದು ಟಿಎಂಸಿಗೆ ಮರಳಿದ್ದಾರೆ. ಇದೇ ಸಂದರ್ಭದಲ್ಲಿ ಅವರಿಗೆ ನೀಡಲಾಗಿದ್ದ Z ಶ್ರೇಣಿಯ ವಿಐಪಿ ರಕ್ಷಣೆಯನ್ನು ಒಕ್ಕೂಟ ಸರ್ಕಾರ ವಾಪಸ್ ಪಡೆದಿದೆ.

ಮುಕುಲ್ ರಾಯ್‌ಗೆ ನೀಡಲಾಗಿದ್ದ ರಕ್ಷಣೆಯನ್ನು ನಿಲ್ಲಿಸುವಂತೆ ಕೇಂದ್ರ ಗೃಹ ಸಚಿವಾಲಯವು ಕೇಂದ್ರ ಮೀಸಲು ಪೊಲೀಸ್ ಪಡೆಗೆ (ಸಿಆರ್‌ಪಿಎಫ್) ನಿರ್ದೇಶನ ನೀಡಿದೆ.

ಕಳೆದ ವಾರ ಮುಕುಲ್ ರಾಯ್ ಬಿಜೆಪಿ ತ್ಯಜಿಸಿ ತನ್ನ ಮಗ ಸುಬ್ರಂಗ್ಶು ರಾಯ್‌ ಜೊತೆಗೆ ಟಿಎಂಸಿ ಸೇರಿದ್ದರು. ಅವರ ಅನುಯಾಯಿಗಳು ಸಹ ಬಿಜೆಪಿ ಬಿಟ್ಟು ಟಿಎಂಸಿ ಸೇರುತ್ತಾರೆ ಎಂಬ ಚರ್ಚೆಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಭಾರತೀಯ ಸರ್ಕಾರದ ಕೆಲವು ಕ್ರಮಗಳು ಅದರ ಪ್ರಜಾಪ್ರಭುತ್ವ ಮೌಲ್ಯಗಳ ಬಗ್ಗೆ ಆತಂಕಗಳನ್ನು ಹುಟ್ಟು ಹಾಕಿದೆ: ಅಮೆರಿಕದ ಉನ್ನತ ಅಧಿಕಾರಿ

ಮುಕುಲ್ ರಾಯ್‌ರವರೆ ಒಕ್ಕೂಟ ಸರ್ಕಾರಕ್ಕೆ ಪತ್ರ ಬರೆದು ತಮಗೆ ನೀಡಲಾಗಿದ್ದ ಭದ್ರತೆಯನ್ನು ವಾಪಸ್‌ ಪಡೆಯುವಂತೆ ಕೋರಿದ್ದರು. ಅದು ಈಗ ಕಾರ್ಯರೂಪಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

2017ರಲ್ಲಿ ಮುಕುಲ್ ರಾಯ್ ಟಿಎಂಸಿ ತ್ಯಜಿಸಿ ಬಿಜೆಪಿ ಸೇರಿದ ನಂತರ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಜೊತೆಗೆ Z ಶ್ರೇಣಿಯ ವಿಐಪಿ ರಕ್ಷಣೆ ನೀಡಲಾಗಿತ್ತು. ಅವರು ಪಶ್ಚಿಮ ಬಂಗಾಳದಲ್ಲಿ ಸಂಚರಿಸುವಾಗ 22-24 ಸಿಆರ್‌ಪಿಎಫ್‌ ಕಮಾಂಡೊಗಳು ಅವರಿಗೆ ರಕ್ಷಣೆ ನೀಡಲು ಸಂಚರಿಸುತ್ತಿದ್ದವು.

ಮತ್ತೊಂದು ಕೇಂದ್ರ ಅರೆಸೈನಿಕ ಪಡೆ ಸಿಐಎಸ್ಎಫ್ ಸುಬ್ರಂಗ್ಶುವಿಗೆ ನೀಡುತ್ತಿರುವ ಸಣ್ಣ ವರ್ಗದ ಭದ್ರತಾ ರಕ್ಷಣೆಯನ್ನು ಸಹ ಹಿಂಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ ತಂದೆ-ಮಗನಿಗೆ ಈಗ ರಾಜ್ಯ ಪೊಲೀಸರು ಭದ್ರತೆ ಒದಗಿಸುತ್ತಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆ?: ಕಾಂಗ್ರೆಸ್‌ ಏಕಾಂಗಿಯಾಗಿ ಸ್ಪರ್ಧೆಸುವ ಬಗ್ಗೆ ಹೇಳಿದ ನಂತರ ರಾಜಕೀಯ ಸಂಚಲನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights