FACT CHECK | ದಂಪತಿಗಳ ಅಕ್ರಮ ಸಂಬಂಧ ಎಂದು ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ
ಇಬ್ಬರು ದಂಪತಿಗಳು ತಮ್ಮ ಜೋಡಿ ಬಿಟ್ಟು ಬೇರೆಯವರೊಂದಿಗೆ ಹೋಟೆಲ್‌ಗೆ ಹೋಗಿ ಸಿಕ್ಕಿ ಬೀಳುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
एक ही होटल में हसबैंड वाइफ दोनों लेकिन अलग अलग लोगों के साथ,,,
अदला बदली खेल रहे हो क्या??? pic.twitter.com/yyGZS4NYBu
— Sushil Kumar (@Sushilprjapti) January 20, 2025
ಎಡ್. ಸುಶೀಲ್ ಕುಮಾರ್ ಎಂಬ ಎಕ್ಸ್ (ಟ್ವಿಟರ್) ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. “ಒಂದೇ ಹೋಟೆಲ್‌ನಲ್ಲಿ ಗಂಡ-ಹೆಂಡತಿ ಇಬ್ಬರೂ ಬೇರೆ ಬೇರೆ ಜನರೊಂದಿಗೆ ಇದ್ದಾರೆ. ಮುಟ್ಟಾಳರೇ ನಿಮ್ಮ ಹೆಂಡತಿಯನ್ನು ನೀವು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ನೀವು ವಿನಿಮಯ ಆಟಗಳನ್ನು ಆಡುತ್ತಿದ್ದೀರಾ?” ಎಂದು ಬರೆದುಕೊಂಡಿದ್ದಾರೆ.
एक ही होटल में हसबैंड वाइफ दोनों लेकिन अलग अलग लोगों के साथ,,,
अंधभक्तों तुमसे तुम्हारी लुगाई संभाली नहीं जाती तो अदला बदली खेल रहे हो क्या pic.twitter.com/Ja9JWNgvRV
— Adv.Nazneen Akhtar (@NazneenAkhtar23) January 19, 2025
ಕೃಪಾ ಶಂಕರ್ ಎಂಬ ಟ್ವೀಟರ್ ಬಳಕೆದಾರರು “ಏನು ಸಮಯ ಬಂದಿದೆ? ಒಮ್ಮೆ ತಮ್ಮ ಗಂಡಂದಿರಿಗಾಗಿ ಪ್ರಾಣವನ್ನೇ ಕೊಡಲು ಸಿದ್ಧರಿದ್ದ ಮಹಿಳೆಯರಿಗೆ ಹೋಲಿಸಿದರೆ ಇಂದಿನ ಮಹಿಳೆಯರು ಎಷ್ಟು ಬದಲಾಗಿದ್ದಾರೆ” ಎಂದು ಬರೆದು ವಿಡಿಯೋ ಹಂಚಿಕೊಂಡಿದ್ದಾರೆ. ಸುಶೀಲ್ ಕುಮಾರ್ ಎಂಬ ಮತ್ತೊಬ್ಬ ಟ್ವೀಟರ್ ಬಳಕೆದಾರರು “ಒಂದೇ ಹೋಟೆಲ್‌ನಲ್ಲಿ ಗಂಡ-ಹೆಂಡತಿ ಇಬ್ಬರೂ ಬೇರೆ ಬೇರೆ ಜನರೊಂದಿಗೆ ನೀವು ವಿನಿಮಯ ಆಟಗಳನ್ನು ಆಡುತ್ತಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ.
ವಿಡಿಯೋದಲ್ಲಿ ಒಂದೇ ಹೋಟೆಲ್‌ನಲ್ಲಿರುವ ಎರಡು ಬೇರೆ ಬೇರೆ ಕೊಠಡಿಗಳಿಗೆ ಎರಡು ಜೋಡಿಗಳು ಹೋಗುವುದನ್ನು ಕಾಣಬಹುದು. ಒಂದು ಕೋಣೆಗೆ ಹೋದ ವ್ಯಕ್ತಿಗೆ ಇನ್ನೊಂದು ಕೋಣೆಯ ಹೊರಗೆ ಇರುವ ಚಪ್ಪಲಿಗಳನ್ನು ನೋಡುತ್ತಾನೆ. ಆ ಬಳಿಕ ಅನುಮಾನಗೊಂಡು ಆ ಕೋಣೆಯ ಬಾಗಿಲು ತಟ್ಟುತ್ತಾನೆ. ಬಾಗಿಲು ತೆರೆದಾಗ ಆ ಕೋಣೆಯಲ್ಲಿರುವ ಮಹಿಳೆ ಅವನ ಹೆಂಡತಿ ಎಂದು ತಿಳಿದುಬರುತ್ತದೆ. ಆಗ ಜಗಳ ಆರಂಭವಾಗುತ್ತದೆ. ಆಗ ಕೋಣೆಗಳಿಂದ ಮಹಿಳೆಯರು ಹೊರಬಂದಾಗ ಅವರ ಗಂಡಂದಿರು ಹೊರಡೆ ನಿಂತು ಜಗಳವಾಡುತ್ತಿರುವುದನ್ನು ಕಂಡು ಅಚ್ಚರಿಗೊಂಡ ಓಡಿಹೋಗುತ್ತಾರೆ. ಇಬ್ಬರು ಗಂಡಂದಿರು ಬೇಸರಗೊಂಡು ಒಬ್ಬರ ಹಿಡಿದು ಮತ್ತೊಬ್ಬರು ಜಗಳ ಮಾಡುತ್ತಾರೆ. ಹಾಗಿದ್ದರೆ ವೈರಲ್ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ವಿಡಿಯೋದ ಮೇಲಿನ @IdeasFactory ಎಂಬ ವಾಟರ್‌ಮಾರ್ಕ್ ಮೂಲಕ ಐಡಿಯಾಸ್ ಫ್ಯಾಕ್ಟರಿಯ ಫೇಸ್‌ಬುಕ್ ಪುಟ ಮತ್ತು 3RD EYE ಎಂಬ ಯೂಟ್ಯೂಬ್ ಚಾನೆಲ್ ಅನ್ನು ಪತ್ತೆ ಹಚ್ಚಿ ಸರ್ಚ್ ಮಾಡಿದಾಗ, ಈ ಚಾನೆಲ್‌ನಲ್ಲಿ ತೋರಿಸಿರುವ ವಿಡಿಯೋಗಳು ಸ್ಕ್ರಿಪ್ಟ್ ಮಾಡಿ ನಟಿಸಿದ ವಿಡಿಯೋ ಎಂದು ತಿಳಿದುಬಂದಿದೆ.
https://www.youtube.com/watch?v=uLQ7DdXNAQQ&embeds_referring_euri=https%3A%2F%2Fvijaykarnataka.com%2F&embeds_referring_origin=https%3A%2F%2Fvijaykarnataka.com&source_ve_path=MjM4NTE
ಇದೇ ರೀತಿ ಜನರಿಗೆ ಮನೋರಂಜನೆ ನೀಡುವ, ವಿಡಂಬನೆಗಳು ಮತ್ತು ಜಾಗೃತಿ ಮೂಡಿಸುವ ವಿಡಿಯೋಗಳು ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಾಗಿವೆ. ಈ ವಿಡಿಯೋಗಳಲ್ಲಿ ತೋರಿಸಿರುವ ಎಲ್ಲಾ ಪಾತ್ರಗಳು ಮತ್ತು ಸನ್ನಿವೇಶಗಳು ಕಾಲ್ಪನಿಕ. ಅವುಗಳ ಉದ್ದೇಶ ಜಾಗೃತಿ ಮೂಡಿಸುವುದು, ಮನರಂಜಿಸುವುದು ಮತ್ತು ಶಿಕ್ಷಣ ನೀಡುವುದು ಎಂಬ ಸ್ಪಷ್ಟನೆ ಇದೆ.
![]()
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಗಂಡ ಹೆಂಡತಿಯರು ಬೇರೆ ಬೇರೆ ವ್ಯಕ್ತಿಗಳೊಂದಿಗೆ ಒಂದೇ ಹೋಟೆಲ್‌ನಲ್ಲಿ ಸಿಕ್ಕಿ ಬೀಳುವ ವಿಡಿಯೋ ಒಂದು ಕಿರುಚಿತ್ರವಾಗಿದೆ. ಯೂಟ್ಯೂಬ್ ಚಾನೆಲ್ ಮನೋರಂಜನೆ, ಜಾಗೃತಿ ಉದ್ದೇಶದಿಂದ ಈ ವಿಡಿಯೋವನ್ನು ಚಿತ್ರೀಕರಿಸಿದೆ. ವಿಡಿಯೋದಲ್ಲಿರುವ ನಿಜ ಗಂಡ ಹೆಂಡತಿ ಅಲ್ಲ. ಅವರೆಲ್ಲಾ ನಟ ನಟಿಯರು. ಈ ವಿಡಿಯೋವನ್ನು ಬಳಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ದಿಕ್ಕುತಪ್ಪಿಸಲಾಗುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮನರಂಜನೆ ಉದ್ದೇಶಕ್ಕೆಂದು ರಚಿಸಿದ ಸ್ಕ್ರಿಪ್ಟೆಡ್ ಮಾಡಿದ ವಿಡಿಯೋವನ್ನು, ದಂಪತಿಗಳಿಬ್ಬರು ಅಕ್ರಮ ಸಂಬಂಧ ಹೊಂದಿದ್ದು ಒಂದೇ ಹೋಟೆಲ್‌ನಲ್ಲಿ ಸಿಕ್ಕಿಬಿದ್ದಾರೆ ಎಂಬಂತೆ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಇದು ಸುಳ್ಳು. ಇದು ನೈಜ ವಿಡಿಯೋ ಅಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
FACT CHECK | ಜಮ್ಮು- ಕಾಶ್ಮೀರಲ್ಲಿ ತೆರೆದ ಜೀಪ್‌ನಲ್ಲಿ ಪ್ರಯಾಣಿಸಿದ ಮೊದಲ ಪ್ರಧಾನಿ ಮೋದಿ ಎಂಬುದು ಸುಳ್ಳು
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಜಮ್ಮು- ಕಾಶ್ಮೀರಲ್ಲಿ ತೆರೆದ ಜೀಪ್‌ನಲ್ಲಿ ಪ್ರಯಾಣಿಸಿದ ಮೊದಲ ಪ್ರಧಾನಿ ಮೋದಿ ಎಂಬುದು ಸುಳ್ಳು

