6 ಸ್ಥಾನ ಫಿಕ್ಸ್ : ಒಂದು ಸ್ಥಾನಕ್ಕೆ ಫೈಟ್ : ಸಂಜೆ ವೇಳೆಗೆ ಸಚಿವರ ಪಟ್ಟಿ ಬಿಡುಗಡೆ!
ನೂತನ ಸಚಿವರುಗಳ ಪಟ್ಟಿ ಇಂದು ಸಂಜೆ ಬಿಡುಗಡೆ ಮಾಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದು, ನಾಳೆ ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದಿದ್ದಾರೆ.
ಸಂಕ್ರಾಂತಿಗೆ ಯಾರ್ಯಾರು ಸಂಪುಟ ಸೇರಿ ಸಹಿ ಹಂಚುತ್ತಾರೆ ಎಂಬುದರ ಜೊತೆಗೆ ಯಾರಿಗೆ ಸಚಿವ ಸ್ಥಾನ ಕೈತಪ್ಪಿ ಅಸಮಧಾನ ಭುಗಿಲೇಳುತ್ತದೆ ಎನ್ನುವ ಆತಂಕ ಸಿಎಂಗೆ ಶುರುವಾಗಿದೆ. ಈಗಾಗಲೇ ಸಂಪುಟ ಸೇರುವ 7 ಶಾಸಕರ ಪೈಕಿ 6 ಜನರ ಹೆಸರು ಫೈನಲ್ ಆಗಿದೆ.
ಆದರೂ ಸಂಪುಟ ವಿಸ್ತರಣೆ ಎಲ್ಲವೂ ನಿಗೂಢವಾಗಿದೆ. ಏಳು ಜನರಲ್ಲಿ ಎಂಟಿಬಿ ನಾಗರಾಜ್, ಆರ್ ಶಂಕರ್, ಉಮೇಶ್ ಕತ್ತಿ, ಎಸ್ ಅಂಗಾರ ಪೂರ್ಣಿಮಾ ಶ್ರೀನಿವಾಸ್, ಮುನಿರತ್ನ ಹೆಸರುಗಳು ಬಹುತೇಕ ಹೆಸರು ಪಕ್ಕಾ ಆಗಿದೆ. ಆದರೆ ಇಗಿರುವಂತ 7 ಸ್ಥಾನಗಳಿಗೆ ಆಕಾಂಕ್ಷಿಗಳ ಪಟ್ಟಿ ತುಂಬಾ ದೊಡ್ಡದಾಗಿದೆ.
ಏಳರಲ್ಲಿ ಇನ್ನೂ ಒಂದು ಸ್ಥಾನಕ್ಕಾಗಿ ಮಹದೇವಪುರ ಅರವಿಂದ್ ಲಿಂಬಾವಳಿ, ಸಿ.ಪಿ ಯೋಗೇಶ್ವರ್, ಮುರುಗೇಶ್ ನಿರಾಣಿ, ರಾಮದಾಸ್, ಬಸವನಗೌಡ ಯತ್ನಾಳ್, ಮೈಸೂರು ಉತ್ತರ ಕರ್ನಾಟಕ ಶಾಸಕರು ಸೇರಿದಂತೆ ಒಟ್ಟು 12 ಜನ ಆಕಾಂಕ್ಷಿಗಳ ಮದ್ಯೆ ದೊಡ್ಡ ಮಟ್ಟದ ಪೈಪೋಟಿ ನಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇಂದು ಸಂಜೆ ಒಳಗೆ ಪಟ್ಟಿ ಬಿಡುಗಡೆಯಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಸೂಚಿಸಿದ್ದು, ಕೇಸರಿ ಹೈಕಮಾಂಡ್ ಮಣೆ ಹಾಕಿರುವ ಕಲಿಗಳು ಯಾರು ಎನ್ನುವ ಪ್ರಶ್ನೆ ಎದುರಾಗಿದೆ. ಮಾತ್ರವಲ್ಲಾ ಈಗಾಗಲೇ ಫಿಕ್ಸ್ ಆಗಿರುವ ಹೆಸರುಗಳು ಬದಲಾಗುವ ಅಥವಾ ಹೊಸ ಹೆಸರುಗಳು ಸೇರಿಕೊಳ್ಳುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತದೆ. ಸಂಪುಟ ಸೇರುವಂತವರ ಪಟ್ಟಿ ಇನ್ನೂ ನಿಗೂಢವಾಗಿಯೇ ಇದ್ದು, ಮತ್ತೆ ಅಚ್ಚರಿಯ ಹೆಸರುಗಳು ಘೋಷಣೆಯಾಗುವ ಸಾಧ್ಯತೆ ಇದೆ.

