ಬೆಳಗಾವಿಯ ಬಿಜೆಪಿ ಶಾಸಕರಿಗೆ ಪುಷ್ಪಾರ್ಚನೆ ಮಾಡಿ ಪೊಲೀಸರಿಂದ ಹುಟ್ಟುಹಬ್ಬ ಆಚರಣೆ..!

ಬೆಳಗಾವಿಯ ಬಿಜೆಪಿ ಶಾಸಕರಿಗೆ ಪುಷ್ಪಾರ್ಚನೆ ಮಾಡಿ ಪೊಲೀಸರಿಂದ ಹುಟ್ಟುಹಬ್ಬ ಆಚರಣೆ ಮಾಡಿದ ವಿಡಿಯೋ ವೈರಲ್ ಆಗಿದ್ದು ಜನಾಕ್ರೋಶಕ್ಕೆ ಗುರಿಯಾಗಿದೆ.

ಬೆಳಗಾವಿಯ ಕಿತ್ತೂರು ಬಿಜೆಪಿ ಶಾಸಕ ಮಹಾಂತೇಶ್ ದೊಡ್ಡಗೌಡರ ಹುಟ್ಟುಹಬ್ಬ ಆಚರಣೆ ವೇಳೆ ಪೊಲೀಸರಿಂದಲೇ ಹೂಮಳೆಯ ಸ್ವಾಗತ ಮಾಡಲಾಗಿದೆ. ಕಿತ್ತೂರು ಶಾಸಕ ಮತ್ತು ಪತ್ನಿಗೆ ಪೊಲೀಸರು ಪುಷ್ಪಾರ್ಚನೆ ಮಾಡುತ್ತಿದ್ದರೆ ಶಾಸಕ ಮಹಾರಾಜನಂತೆ ಫೋಸ್ ನೀಡಿದ್ದಾರೆ. ಶಾಸಕರಿಗೆ ಹೀಗೆ ಹೂಮಳೆ ಸುರಿಸಿ ಹುಟ್ಟುಹಬ್ಬ ಆಚರಿಸಿದ ಪೊಲೀಸರು ಯಾರೂ ಕೂಡ ಪೇದೆಯಲ್ಲ ಅಥವಾ ನಿವೃತ್ತ ಪೊಲೀಸ್ ಅಧಿಕಾರಿಗಳೂ ಅಲ್ಲ. ಇವರೆಲ್ಲರೂ ಬೈಲಹೊಂಗಲ್ ವ್ಯಾಪ್ತಿಯಲ್ಲಿ ಈಗಲೂ ವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿಎಸ್ಪಿ, ಎಸ್ ಐ, ಎಎಸ್ಐ ಆಗಿದ್ದಾರೆ.

ಬೈಲಹೊಂಗಲ ಡಿಎಸ್‌ಪಿ ಶಿವಾನಂದ ಕಟಗಿ, ಸಿಪಿಐ ಸಾತೇನಹಳ್ಳಿ, ನೇಸರಗಿ ಪೊಲೀಸ್ ಠಾಣೆ ಪಿಎಸ್ಐ ಶೀಗಿಹಳ್ಳಿ, ಎಸ್‌ಐ ವಿಶ್ವನಾಥ್ ಮಲ್ಲನ್ನವರ್, ಪೇದೆಗಳು ಮತ್ತು ಚಾಲಕರು ಶಾಸಕ ಮಹಾಂತೇಶ್ ದೊಡ್ಡಗೌಡರ್ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದಾರೆ.

ಶಾಸಕರು ಪೊಲೀಸರ ಆಥಿತ್ಯವನ್ನು ಸ್ವೀಕರಿಸಿದ್ದಾರೆ. ಪೊಲೀಸ್ ಹಿರಿಯ ಅಧಿಕಾರಿಗಳು ಈ ರೀತಿ ಶಾಸಕರಿಗೆ ಪುಷ್ಪಾರ್ಚನೆ ಮಾಡುತ್ತಿರುವುದು ಕಂಡು ಜನ ಆಕ್ರೋಶಗೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರೂ ಈ ರೀತಿ ನಡೆದುಕೊಳ್ಳುವುದಿಲ್ಲ. ಇದು ಜನ ಸಾಮಾನ್ಯರಿಗೆ ಏನನ್ನು ಸೂಚಿಸುತ್ತದೆ. ಪೊಲೀಸರ್ ಅಧಿಕಾರಿಗಳೇನು ಇವರ ಆಳುಗಳೇ? ಎನ್ನುವ ಪ್ರಶ್ನೆ ಮೂಡಿಸಿದೆ. ಪೋಲೀಸರು ಸ್ಥಳೀಯ ಶಾಸಕರ, ಜನಪ್ರತಿನಿಧಿಗಳ ಕೈಯಾಳು ಎನ್ನುವುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

ಕೊರೊನಾ ಸಂದರ್ಭದಲ್ಲಿ ಜನಸಾಮಾನ್ಯರು ಒಂದೆಡೆ ಸೇರಿದರೆ ಪ್ರಶ್ನೆ ಮಾಡುವ ಪೊಲೀಸರು ಶಾಸಕರ ಹುಟ್ಟುಹಬ್ಬ ಹೇಗೆ ಆಚರಿಸಿದ್ರು..? ಈ ವೇಳೆ ಒಬ್ಬರೂ ಮಾಸ್ಕ್ ಹಾಕಿಲ್ಲ ಯಾಕೆ..? ಎಂದು ಬುದ್ದಿ ಜೀವಿಗಳು ಕಿಡಿ ಕಾರಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights