ಕಾಂಗ್ರೆಸ್ಸಿಗರಿಂದಲೇ ಕಾಂಗ್ರೆಸ್‌ ದುರ್ಬಲಗೊಳ್ಳುತ್ತಿದೆ: ಮಲ್ಲಿಕಾರ್ಜುನ ಖರ್ಗೆ

ಬಿಹಾರ ಚುನಾವಣೆ ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ ನಡೆದ  ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ ಹಿನ್ನಡೆ ಸಾಧಿಸಿದೆ. ಇದರಿಂದಾಗಿ ಪಕ್ಚದ ಹಲವು ಮುಖಂಡರು ಪಕ್ಷದ ನಾಯಕತ್ವದ ವಿರುದ್ಧ ಮಾತನಾಡುತ್ತಿದ್ದಾರೆ. ಅವರಿಂದಲೇ ಪಕ್ಷ ದುರ್ಬಲಗೊಳ್ಳುತ್ತಿದೆ ಎಂದು  ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ಕೆಲವರು ಪಕ್ಷವನ್ನು ಒಳಗಿನಿಂದ ದುರ್ಬಲಗೊಳಿಸುವ ಯತ್ನ ನಡೆಸಿದ್ದಾರೆ. ಹೈಕಮಾಂಡ್​ ಬಲ ಪಡಿಸುವ ನಿಟ್ಟಿನಲ್ಲಿ ನಾವು ಒಗ್ಗಟ್ಟಿನಿಂದ ಹೋರಾಡುವ ಅವಶ್ಯಕತೆ ಇದೆ. ಆದರೆ ಕೆಲ ಹಿರಿಯ ನಾಯಕರು, ನಾಯಕತ್ವ ಹಾಗೂ ಪಕ್ಷದ ವಿರುದ್ಧ ಮಾತನಾಡಿರುವುದು ನನಗೆ ನೋವುಂಟು ಮಾಡಿದೆ. ಒಂದು ಕಡೆ ಬಿಜೆಪಿ ಹಾಗೂ ಆರ್​ಎಸ್​ಎಸ್​ ನಮ್ಮ ಬೆನ್ನ ಹಿಂದೆ ಬಿದ್ದರೆ, ಮತ್ತೊಂದೆಡೆ ಇಂತಹ ನಾಯಕರು ಪಕ್ಷವನ್ನು ಒಳಗಿನಿಂದಲೇ ದುರ್ಬಲಗೊಳಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.

ನಾವೇ ಪಕ್ಷ ಹಾಗೂ ನಾಯಕತ್ವವನ್ನು ಈ ರೀತಿ ದುರ್ಬಲಗೊಳಿಸಿದರೆ ನಾವು ಪಕ್ಷ ಮುನ್ನಡೆಯಲು ಸಾಧ್ಯವಿಲ್ಲ. ನಮ್ಮ ಸಿದ್ಧಾಂತ ದುರ್ಬಲಗೊಂಡರೆ ನಮ್ಮ ನಾಶವಾಗುತ್ತದೆ. ಇದು ನಿಮ್ಮ ಗಮನದಲ್ಲಿರಬೇಕು ಎಂದು ಎಚ್ಚರಿಸಿದರು.

ರಾಹುಲ್​ ಗಾಂಧಿ ಮತ್ತು ಸೋನಿಯಾಗಾಂಧಿ ಸೋಲಿಸಲು ಕೆಲವು ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಹೆಸರೇಳದೆ ಅವರು ವಿರುದ್ಧ ಅತೃಪ್ತಿಹೊರಹಾಕಿದರು. ಪ್ರತಿ ರಾಜ್ಯದಲ್ಲಿಯೂ ನಾಯಕರನ್ನು ಹೊಂದಿದೆ. ಅಭ್ಯರ್ಥಿಗಳನ್ನು ಅಂತಿಮಗೊಳಿಸುವಾಗ ತಮ್ಮಗೆ ಮತ್ತು ತಮ್ಮ ನಿಷ್ಟಾವಂತ ಕಾರ್ಯಕರ್ತರಿಗೆ ಟಿಕೆಟ್​ ಬಯಸುತ್ತಾರೆ. ಶೇ 90 ರಷ್ಟು ಟಿಕೆಟ್​ ಅನ್ನು ಅವರ ಸಲಹೆ ಮೇಲೆ ನೀಡಲಾಗುವುದು. ಒಂದು ವೇಳೇ ಇದು ಸಾಧ್ಯವಾಗದಿದ್ದರೆ ದೂರುತ್ತಾರೆ. ಈ ಸಂದರ್ಭದಲ್ಲಿ ತಮ್ಮ ಮಾತು ಕೇಳುವುದಿಲ್ಲ. ಈ ವೇಳೆ ಒಗ್ಗಟ್ಟಿನ ಕೊರತೆ ಕಂಡು ಬರುತ್ತಿರುವುದನ್ನು ಗಮನಿಸಿರುವುದಾಗಿ ತಿಳಿಸಿದರು.

ಬಿಹಾರ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ವಿರುದ್ಧ ಕಾಂಗ್ರೆಸ್​ ನಾಯಕ ಕಪಿಲ್​ ಸಿಬಲ್ ​ ಟೀಕಿಸಿದ್ದರು. 70 ಸ್ಥಾನಗಳಲ್ಲಿ ಕೇವಲ 19 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಪಕ್ಷದ ಸಾಮರ್ಥ್ಯದ ವಿರುದ್ಧ ಪರೋಕ್ಷವಾಗಿ ಕುಟುಕಿದ್ದರು. ಕಳೆದ ಆಗಸ್ಟ್​ನಲ್ಲಿ ಪಕ್ಷವನ್ನು ಬಲಗೊಳಿಸುವ ಬಗ್ಗೆ ಕಪಿಲ್‌ ಸಿಬಲ್‌ ಸೇರಿದಂತೆ 23 ಕಾಂಗ್ರೆಸ್​ ನಾಯಕರು ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು.


ಇದನ್ನೂ ಓದಿ: ಕರ್ನಾಟಕದ ಕಾರ್ಮಿಕರು ಮತ್ತು ಜಪಾನ್‌ ಕಂಪನಿಯ ನಡುವೆ ತಿಕ್ಕಾಟ: ಟೊಯೋಟಾದವರ ಮಾಡುತ್ತಿರುವುದೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights