ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವುದರಲ್ಲಿ ತಪ್ಪೇನು?: ಮಾಜಿ ಸಿಎಂ ಹೆಚ್‌ಡಿಕೆ
ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಸ್ಥಳೀಯ ಚುನಾವಣೆಗಳಲ್ಲಿ ಬೇರೆ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.
ಮಂಡ್ಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರ ಚುನಾವಣೆಯ ನವೆಂಬರ್ 17 ರಂದು ನಡೆಯಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಧ್ಯಕ್ಷ ಸ್ಥಾನ ದೊರಕದಂತೆ ಮಾಡುವ ಉದ್ದೇಶದಿಂದ ಜೆಡಿಎಸ್ ಮತ್ತೆ ಬಿಜೆಪಿಯ ನೆರವು ಕೋರಿದೆ.
ಮಂಡ್ಯದಲ್ಲಿ ಒಕ್ಕಲಿಗರ ಪ್ರಭಲ್ಯ ಹೆಚ್ಚಾಗಿದೆ. ಹಾಗಾಗಿ ಇಲ್ಲಿ ಕಾಂಗ್ರೆಸ್ ಗೆದ್ದರೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರ ವರ್ಚಸ್ಸು ಹೆಚ್ಚಲಿದೆ. ಇಲ್ಲಿ ಗೆಲುವು ಸಾಧಿಸುವುದರೊಂದಿಗೆ ಶಿವಕುಮಾರ್ ರಾಜಕೀಯ ಸ್ಥಾನಮಾನವನ್ನು ಗಟ್ಟಿಮಾಡಿಕೊಳ್ಳದಂತೆ ತಡೆಯುವುದು ಜೆಡಿಎಸ್‌ನ ಯೋಜನೆಯಾಗಿದೆ. ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಶಿವಕುಮಾರ್ ಇಬ್ಬರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು ಆ ಸಮುದಾಯದ ಮತದಾರರ ನೆಲೆಯನ್ನೇ ಗುರಿಯಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್‌ಗೆ ಡಿಕೆ ಶಿವಕುಮಾರ್ ಆಹ್ವಾನ ನೀಡಿದ್ದಾರೆ; ನಾನಿನ್ನೂ ನಿರ್ಧರಿಸಿಲ್ಲ: ಮಧು ಬಂಗಾರಪ್ಪ
ಮಂಡ್ಯ ಡಿಡಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ದೊರಕದಂತೆ ತಡೆಯಲಿ ಜೆಡಿಎಸ್ ಯತ್ನಿಸುತ್ತಿದೆ. ಈ ಹಿನ್ನಲೆಯಲ್ಲಿ ಸರ್ಕಾರದ ನಾಮನಿರ್ದೇಶಿತರ ಬೆಂಬಲ ಕೋರಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರನ್ನು ಸಂಪರ್ಕಿಸಿದ್ದಾರೆ.
ಬಿಜೆಪಿಯೊಂದಿಗಿ ಮೈತ್ರಿಯನ್ನು ಸಮರ್ಥಿಸಿಕೊಂಡಿರುವ ಹೆಚ್‌ಡಿಕೆ, ಕೊಳ್ಳೆಗಾಲದ ಹನೂರಿನಲ್ಲಿ ಕಾಂಗ್ರೆಸ್ – ಬಿಜೆಪಿ ಮೈತ್ರಿಯಾಗಿವೆ. ನವಲಗುಂದದಲ್ಲಿ ಕಾಂಗ್ರೆಸ್ – ಬಿಜೆಪಿ ಮೈತ್ರಿಯಾಗಿವೆ. ಹಾಗಾಗಿ ಸ್ಥಳೀಯವಾಗಿ ಮೂರು ಪಕ್ಷದವರು ಹೊಂದಾಣಿಕೆಯಾಗುತ್ತಿದ್ದಾರೆ. ಅದು ಸ್ಥಳೀಯ ವಿಚಾರ ಎಂದು ಸಮಜಾಯಿಷಿ ನೀಡಿದರು. ಸ್ಥಳೀಯ ಚುನಾವಣೆಗಳಲ್ಲಿ ಮೈತ್ರಿಯಾಗಿದೆ ಎಂದಾಕ್ಷಣ ಜೆಡಿಎಸ್ ಗೆ ಬಿಜೆಪಿ ಬಗ್ಗೆ ಮೃದುಧೋರಣೆ ಇದೆ ಎಂದು ತಿಳಿಯಬೇಡಿ ಎಂದೂ ಅವರು ತಿಳಿಸಿದ್ದಾರೆ.
ಡಿಸಿಸಿ ಬ್ಯಾಂಕ್ ನಿರ್ದೇಶಕರಲ್ಲಿ ಹಾಲಿ ಎಂಟು ಮಂದಿ ಕಾಂಗ್ರೆಸ್ ನವರಿದ್ದಾರೆ. ನಾಲ್ವರು ಜೆಡಿಎಸ್‌ನವರಿದ್ದಾರೆ. ಹಾಗಾಗಿ ಕಾಂಗ್ರೆಸ್‌ನ ಬಲವೇ ಹೆಚ್ಚಗಿದೆ. ಈ ಹಿನ್ನಲೆಯಲ್ಲಿ ಮೂವರು ಸರ್ಕಾರಿ ನಾಮನಿರ್ದೇಶಿತರ ಬೆಂಬಲ ಪಡೆಯಲು ಜೆಡಿಎಸ್ ಬಿಜೆಪಿಯ ನೆರವು ಕೋರಿದೆ. ಆದರೂ, ಬಿಜೆಪಿ ಬೆಂಬಲ ಪಡೆದರೂ ಜೆಡಿಎಸ್‌ಗೆ ಏಳು ನಿರ್ದೇಶಕರಷ್ಟೇ ಆಗಲಿದ್ದಾರೆ. ಹಾಗಾಗಿ ಕಾಂಗ್ರೆಸ್ ಪ್ರತಿನಿಧಿಸುವ ಒಬ್ಬ ನಿರ್ದೇಶಕರ ಮನವೊಲಿಸಿ ಬೆಂಬಲ ಪಡೆಯಲು ಜೆಡಿಎಸ್ ಮುಂದಾಗಿದೆ.
ಇದನ್ನೂ ಓದಿ: ಕನ್ನಡಿಗರ ಹಿತ ಮರೆತ BJP: ಚುನಾವಣೆಗಾಗಿ ಮರಾಠಿಗರ ಅಭಿವೃದ್ಧಿ 50 ಕೋಟಿ ಅನುದಾನ!

