ಬ್ರೆಜಿಲ್‌ನಲ್ಲಿ ಕಪ್ಪು ವರ್ಣೀಯನ ಹತ್ಯೆ: ಭುಗಿಲೆದ್ದ ಆಕ್ರೋಶ

ಕಪ್ಪು ಜನಾಂಗದ ವ್ಯಕ್ತಿಯೋರ್ವನನ್ನು ಬಿಳಿ ಜನಾಂಗದ ಭದ್ರತಾ ಸಿಬ್ಬಂದಿಗಳು ಅಮಾನುಷವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ಬ್ರೆಜೆಲ್‌ನ ಕ್ಯಾರಿಫೋರ್‌ ಸೂಪರ್‌ ಮಾರ್ಕೆಟ್‌ ಬಳಿ ನಡೆದಿದೆ. ಘಟನೆಯನ್ನು ವಿರೋಧಿಸಿ ಬ್ರೆಜಿಲ್‌ನಾದ್ಯಂತ ಆಕ್ರೋಶ ಹೊರಹೊಮ್ಮಿದ್ದು, ಪ್ರತಿಭಟನೆಗಳು ನಡೆಯುತ್ತಿವೆ.

ಬಿಳಿ ಜನಾಂಗಕ್ಕೆ ಸೇರಿದ ಇಬ್ಬರು ಭದ್ರತಾ ಸಿಬ್ಬಂದಿಗಳು ಕಪ್ಪು ಜನಾಂಗದ ವ್ಯಕ್ತಿಯನ್ನು ಅಮಾನುಷವಾಗಿ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.ಕಪ್ಪು ಜನಾಂಗದ ವ್ಯಕ್ತಿ ಸೂಪರ್​ ಮಾರ್ಕೆಟ್​ಗೆ ಬಂದಿದ್ದ. ಈ ವೇಳೆ ಭದ್ರತಾ ಸಿಬ್ಬಂದಿ ಆತನ ಮೇಲೆ ನಿರಂತರವಾಗಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಕಪ್ಪು ವ್ಯಕ್ತಿ ಮೃತಪಟ್ಟಿದ್ದಾನೆ.

ವಿಡಿಯೋ ವೈರಲ್‌ ಆಗುತ್ತಿದ್ದಂತೆ, ಬ್ರೆಜಿಲ್‌ನ ಸಾವೊ ಪಾಲೋ ಬಳಿ ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಘಟನೆ ನಡೆದ ಸೂಪರ್​ ಮಾರ್ಕೆಟ್​ನ ಗಾಜುಗಳನ್ನು ಒಡೆಯಲಾಗಿದೆ. ಸೂಪರ್​ ಮಾರ್ಕೆಟ್​ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದು, ಅಶ್ರುವಾಯುವನ್ನು ಪ್ರಯೋಗಿದ್ದಾರೆ. ಆದರೂ ಜನರು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

ಬ್ರೆಜಿಲ್‌ನ ರಾಜಧಾನಿ ಬ್ರಸಿಲಿಯಾ ಸೇರಿದಂತೆ ಬೆಲೋ ಹಾರಿಜಂಟೆ ಮತ್ತು ರಿಯೋ ಡೆ ಜನೆರಿಯೋದಲ್ಲೂ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಕೆಲವು ತಿಂಗಳುಗಳ ಹಿಂದೆ ಅಮೆರಿಕಾದಲ್ಲಿ ಜಾರ್ಜ್‌ ಪ್ಲಾಯ್ಡ್‌ ಎಂಬ ಆಫ್ರಿಕಾ-ಅಮೆರಿಕನ್‌ ಕಪ್ಪು ವರ್ಣಿಯನನ್ನು ಪೊಲೀಸರು ಉಸಿರುಗಟ್ಟಿಸಿ ಕೊಂದಿದ್ದರು. ಪೊಲೀಸರ ದೌರ್ಜನ್ಯವನ್ನು ವಿರೋಧಿಸಿ ಅಮೆರಿಕಾದ್ಯಂತ ಹೋರಾಟಗಳು ನಡೆದಿದ್ದವು. ಅಲ್ಲದೆ, ಅಟ್ಲಾಂಟಾದಲ್ಲಿಯೂ ಮತ್ತೊಬ್ಬ ಕಪ್ಪು ವರ್ಣೀಯನನ್ನು ಹತ್ಯೆ ಮಾಡಿದ್ದರು.  ಘಟನೆಯ ನಂತರ ಮತ್ತೆ ಬ್ರೆಜಿಲ್‌ನಲ್ಲಿ ಕಪ್ಪು ವರ್ಣೀಯನನ್ನು ಭದ್ರತಾ ಸಿಬ್ಬಂಧಿ ಹತ್ಯೆ ಮಾಡಿದ್ದಾರೆ.


ಇದನ್ನೂ ಓದಿ: POKಯಲ್ಲಿ ಭಾರತೀಯ ಸೇನೆ ‘ಪಿನ್‌ಪಾಯಿಂಟ್ ಏರ್‌ಸ್ಟ್ರೈಕ್’ ಮಾಡಿಲ್ಲ: ಲೆಫ್ಟಿನೆಂಟ್ ಜನರಲ್ ಸ್ಪಷ್ಟನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights