ಜಗತ್ತಿನಲ್ಲಿಯೇ ಉಚಿತ ಸ್ಯಾನಿಟರಿ ಪ್ಯಾಡ್ ನೀಡುವ ಮೊದಲ ರಾಷ್ಟ್ರ ಇದು….

ಸ್ಯಾಮೊಟರಿ ಪ್ಯಾಡ್ ಅತ್ಯಗತ್ಯದ ವಸ್ತು. ಆದರೆ ಅದರ ಬೆಲೆ ಮಾತ್ರ ದುಬಾರಿ. ಬಡವರಿಗೆ ಇದು ಕೈಗೆಟಕವುದು ಕಷ್ಟಸಾಧ್ಯ. ಬಹಳಷ್ಟು ಹಳ್ಳಿಗಳಿಲ್ಲ, ಹಿಂದುಳಿದ ಪ್ರದೇಶದಗಳ ಮಹಿಳೆಯರಿಗೆ ಇಂದಿಗೂ ಸ್ಯಾನಿಟರಿ ಪ್ಯಾಡ್ ಗಳು ಸಿಗದ ಪರಸ್ಥಿತಿ ಇದೆ. ಇದೀಗ ಸ್ಯಾಟ್ಲೆಂಡ್ ಪಿರಿಯಡ್ಸ್ ಸಮಯದ ಎಲ್ಲ ಉತ್ಪನ್ನಗಳನ್ನು ಉಚಿತವಾಗಿ ನೀಡುವ ಕಾನೂನು ಹೊರ ತಂದಿದೆ.

ಈ ಮೂಲಕ ಸ್ಕಾಟ್ಲೆಂಡ್ ಜಗತ್ತಿನಲ್ಲಿಯೇ ಉಚಿತ ಸ್ಯಾನಿಟರಿ ಪ್ಯಾಡ್ ನೀಡುವ ಮೊದಲ ರಾಷ್ಟ್ರವಾಗಿ ಮೂಡಿ ಬಂದಿದೆ. ಸತತ ನಾಲ್ಕು ವರ್ಷಗಳ ಅಭಿಯಾನದ ನಂತರ ಸ್ಕಾಟ್ಲೆಂಡ್ ಈ ನಿರ್ಧಾರ ಕೈಗೊಂಡಿದೆ. ಇನ್ನು ಈ ರಾಷ್ಟ್ರದಲ್ಲಿ ಎಲ್ಲ ಮುಟ್ಟಿನ ಸಂದರ್ಭ ಬಳಸುವ ವಸ್ತುಗಳ ಉಚಿತವಾಗಿ ಲಭ್ಯವಾಗಲಿದೆ. ದಿ ಪರಿಯಡ್ಸ್ ಪ್ರಾಡಕ್ಸ್ ಕಾಯ್ದೆ ಜಾರಿಯಾಗಿದೆ.

ಇದೀಗ ಮುಟ್ಟಿನ ಸಂದರ್ಭ ಬೇಕಾದುವ ಅಗತ್ಯ ವಸ್ತುಗಳು ಅಗತ್ಯವಿರುವವರಿಗೆ ಲಭ್ಯವಾಗುವಂತೆ ನೋಡಿಕೊಳ್ಳಲು ಸ್ಥಳೀಯ ಆಡಳಿತಗಳು ನೋಡಿಕೊಳ್ಳಲಿವೆ. 2018ರಿಂದಲೂ ಉಚಿತ ಸ್ಯಾನಿಟರಿ ಪ್ಯಾಡ್ ನೀಡುತ್ತಾ ಬಂದ ನಾರ್ತ್ ಆಯರ್ ಶೈರ್ ನಂತ ಮಂಡಳಿಗಳಂತೆ ಕೆಲಸ ಮಾಡಲಿದೆ.

ಉಚಿತ ಸ್ಯಾನಿಟರಿ ಪ್ಯಾಡ್ ಒದಗಿಸುವ ಅಭಿಯಾನಕ್ಕೆ ಸ್ಕಾಟ್ಲೆಂಡ್ ನಲ್ಲಿ ತಳಮಟ್ಟದಲ್ಲಿಯೂ ಬೆಂಬಲ ಸಿಕ್ಕಿತ್ತು. ಸ್ಯಾಟಿಶ್ ಕಾರ್ಮಿಕರ ಆರೋಗ್ಯ ವಕ್ತಾರೆ ಮೊನಿಕಾ ಲೆನನ್ ಇದು ಸ್ಕಾಟ್ಲೆಂಡ್ ಗೆ ಹೆಮ್ಮೆಯ ದಿನ ಎಂದು ಸಂತಸಪಟ್ಟಿದ್ದಾರೆ.

ಇದು ಮುಟ್ಟಾಗುವ ಮಹಿಳೆಯರು, ಬಾಲಕಿಯರ ಬದುಕಿನಲ್ಲಿ ದೊಡ್ಡ ಬದಲಾವಣೆ ತರಲಿದೆ. ಈಗಾಗಲೇ ಸಮುದಾಯ ಹಂತದಲ್ಲಿ ಈ ಬಗ್ಗೆ ಹೆಚ್ಚಿನ ಅಭಿವೃದ್ಧಿ ಇದೆ. ಮುಟ್ಟಿನ ದಿನಗಳ ಘಟನೆಯನ್ನು ತಂದುಕೊಂಡಲು ಈ ಕಾಯ್ದೆ ನೆರವಾಗಲಿದೆ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights