ಭಾರತದಲ್ಲಿ ಮತ್ತೆ ಪಬ್ಜಿ : ಆನ್‌ಲೈನ್ ಗೇಮಿಂಗ್ ಕಂಪನಿಗಳಿಗೆ ಕಡಿವಾಣ ಹಾಕಿದ ತಮಿಳುನಾಡು!

ಪಬ್‌ಜಿ ಆನ್‌ಲೈನ್ ಗೇಮ್ ಈಗಾಗಲೇ ಭಾರತದಲ್ಲಿ ನಿಷೇಧವಾಗಿದೆ. ಆದರೆ ಭಾರತದಲ್ಲಿ ಮತ್ತೆ ಕಾಲಿಡಲು ಸಜ್ಜಾಗುತ್ತಿದೆ. ಕಾನೂನಾತ್ಮಕ ತೊಡಕುಗಳನ್ನು ಪೂರೈಸಿಕೊಂಡು ಪಬ್‌ಜಿ ಮತ್ತೆ ಬರಲು ಸಜ್ಜಾಗಿರುವಾಗ ಪಬ್‌ಜಿ ಸೇರಿದಂತೆ ಎಲ್ಲಾ ಆನ್‌ಲೈನ್‌ ಗೇಮ್‌ಗಳಿಗೆ ಮತ್ತಷ್ಟು ಕಂಟಕ ಎದುರಾಗಿದೆ. ಆನ್‌ಲೈನ್ ಗೇಮಿಂಗ್ ಕಂಪನಿಗಳಿಗೆ ಕಡಿವಾಣ ಹಾಕಲು ಸರ್ಕಾರಗಳು ನಿರ್ಧರಿಸಿದೆ.

ಸದ್ಯಕ್ಕೆ ಆನ್‌ಲೈನ್ ಗೇಮ್ಸ್‌ಗಳಲ್ಲಿ ಪ್ರಮುಖ ಕಡಿವಾಣ ಹಾಕಲು ಮುಂದಾಗಿರುವುದು ಪಕ್ಕದ ರಾಜ್ಯ ತಮಿಳುನಾಡು. ಆನ್‌ಲೈನ್ ಆಟದಲ್ಲಿ ಹಣಕೊಟ್ಟು ಪಡೆಯುವ ಯಾವುದೇ ರೀತಿಯ ಆಡ್‌-ಆನ್ ಸೇವೆಗಳನ್ನು ನಿಷೇಧಿಸಿದೆ ತಮಿಳುನಾಡು ಸರ್ಕಾರ. ಇದೇ ನಿರ್ಧಾರಗಳನ್ನು ಇತರ ರಾಜ್ಯಗಳು ಕೂಡ ಶೀಘ್ರದಲ್ಲೇ ತೆಗೆದುಕೊಳ್ಳುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ಕಳೆದ ಶುಕ್ರವಾರ ತಮಿಳುನಾಡು ಸರ್ಕಾರ ತನ್ನ ರಾಜ್ಯದಲ್ಲಿ ಎಲ್ಲಾ ರೀತಿಯ ಆನ್‌ಲೈನ್ ಬೆಟ್ಟಿಂಗ್ ಹಾಗೂ ಗೇಮಿಂಗ್‌ಗಳನ್ನು ನಿಷೇಧಿಸಿತು. ಹೊಸ ಕಾನೂನಿನ ಪ್ರಕಾರ ತಮಿಳುನಾಡಿನಲ್ಲಿ ಇನ್ನು ಯಾವುದೇ ರೀತಿಯ ಜೂಜು ಅಥವಾ ಆನ್‌ಲೈನ್ ಜೂಜುಗಳನ್ನು ಕಂಪ್ಯೂಟರ್ ಅಥವಾ ಯಾವುದೇ ಸಾಧನಗಳನ್ನು ಬಳಸಿ ಆಡುವಂತಿಲ್ಲ. ಇದೇ ರೀತಿಯ ಕಾನೂನನ್ನು ಕರ್ನಾಟಕ ಸರ್ಕಾರ ಕೂಡ ತರುವುದಾಗಿ ಹೇಳಿಕೊಂಡಿದೆ.

ಪ್ಲೇಯರ್ ಅನ್‌ನೋನ್ ಬ್ಯಾಟಲ್‌ಗ್ರೌಂಡ್, ಡಿಫೆನ್ಸ್ ಆಪ್‌ದಿ ಎನ್ಸಿಯೆಂಟ್, ಕೌಂಟರ್ ಸ್ಟ್ರೈಕ್‌ ತರದ ಆನ್‌ಲೈನ್ ಆಟಗಳು ಬಹುತೇಕ ಉಚಿತವಾಗಿರುತ್ತದೆ. ಆದರೆ ಆಟದಲ್ಲಿನ ರೋಚಕತೆ ಹೆಚ್ಚಿಸಲು ಹೆಚ್ಚುವರಿ ಸಾಮಾಗ್ರಿಗಳನ್ನು ಪಡೆಯಬೇಕಿದ್ದರೆ ಆಟಗಾರರು ಹಣವನ್ನು ಪಾವತಿಸಿ ಬಳಸಿಕೊಳ್ಳಬೇಕಿರುತ್ತದೆ. ಈ ರೀತಿಯ ಆಡ್‌ಆನ್ ಸೇವೆಗಳನ್ನು ಪಡೆಯಲು ಹಣ ಪಾವತಿಸುವುದಕ್ಕೂ ತಮಿಳುನಾಡು ಸರ್ಕಾರ ಹೊರಡಿಸಿದ ಕಾನೂನಿನಲ್ಲಿ ನಿರ್ಬಂಧಗಳನ್ನು ಹೇರಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights