‘ರಾಜಕೀಯ ಒತ್ತಡಕ್ಕೆ ಮಣಿದು ಸಂತೋಷ್ ತಾವು ಆತ್ಮಹತ್ಯೆಗೆ ಪ್ರಯತ್ನಿಸಿಲ್ಲ ಎಂದಿದ್ದಾರೆ’ – ಡಿಕೆಶಿ

ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆನ್ನಲಾಗುತ್ತಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ತಾವು ಆತ್ಮಹತ್ಯೆ ಮಾಡಿಕೊಂಡಿಲ್ಲವೆಂದು ಸ್ಪಷ್ಟನೆ ಕೊಟ್ಟಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್ ಹೇಳಿಕೆಗೆ ಟಕ್ಕರ್ ಕೊಟ್ಟಿದ್ದಾರೆ. ಇದಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ‘ಸಂತೋಷ್ ಆರ್ಡಿನರಿ ವ್ಯಕ್ತಿ ಅಲ್ಲ, ಸಿಎಂ ರಾಜಕೀಯ ಕಾರ್ಯದರ್ಶಿ. ರಾಜಕೀಯ ಕಾರಣಕ್ಕಾಗಿ ಅವರಿಂದ ಸ್ಟೇಟ್ ಮೆಂಟ್ ಕೊಡಿಸಿದ್ದಾರೆ. ಅವರೇಳಿದಂತೆ ರೆಸ್ಟ್ ತೆಗೆದುಕೊಳ್ಳೋಣ ಬಿಡಿ. ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆಂದು ಸಂತೋಷ್ ಅವರ ಧರ್ಮಪತ್ನಿಯೇ ಹೇಳಿಕೊಂಡಿದ್ದರು. ಅದಕ್ಕೆ ರಾಜಕೀಯ ಒತ್ತಡವೇ ಕಾರಣ ಎಂದು ಸಂತೋಷ್ ಅವರ ಪ್ರತ್ನಿಯೇ ಹೇಳಿಕೊಂಡಿದ್ದರು. ಇದು ತನಿಖೆಯಾಗಬೇಕು ತಾನೆ. ಅದ್ಕೆ ನಾನು ಈ ಮಾತು ಹೇಳಿದೆ. ಈಗಲೂ ರಾಜಕೀಯ ಒತ್ತಡಕ್ಕೆ ಮಣಿದು ಸಂತೋಷ್ ಆತ್ಮಹತ್ಯೆಗೆ ಪ್ರಯತ್ನಿಸಿಲ್ಲ ಎಂದು ಹೇಳುತ್ತಿದ್ದಾರೆ’ ಎಂದರು.

ಮೊನ್ನೆಯಷ್ಟೇ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ನಿದ್ರೆ ಮಾತ್ರೆ ಸೇವಿಸಿ ಮಣಿಪಾಲ್ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚೇತರಿಸಿಕೊಂಡ ಬಳಿಕ ಅವರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಈ ವೇಳೆ ಮಾದ್ಯಮದೊಂದಿಗೆ ಮಾತನಾಡಿದ ಸಂತೋಷ್ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

‘ತಾವು ಯಾವುದೇ ಆತ್ಮಹತ್ಯೆಗೆ ಮುಂದಾಗಿಲ್ಲ. ನಾನು ಕೆಲವು ದಿನಗಳ ಹಿಂದೆ ಸಂಬಂಧಿ ಮದುವೆಗೆ ಹೋಗಿದ್ದೆ. ಅಲ್ಲಿ ತಿಂದ ಆಹಾರದಿಂದಾಘಿ ಫುಡ್ ಪಾಯಿಸನ್ ಆಗಿತ್ತು. ಹೀಗಾಗಿ ನಾನು ಫುಡ್ ಪಾಯಿಸನ್ ಮಾತ್ರೆ ಬದಲಿಗೆ ನಿದ್ರೆ ಮಾತ್ರೆ ತೆಗೆದುಕೊಂಡೆ. ಭಯಗೊಂಡ ನನ್ನ ಪತ್ನಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರಿಂದ ಯಾವ ಉದ್ದೇಶ ಖಿನ್ನತೆ ಇಲ್ಲ’ ಎಂದಿದ್ದಾರೆ.

‘ಖಾಸಗಿ ಕಾರ್ಯಕ್ರಮದಲ್ಲಿ ಊಟ ಮಾಡಿ ಹೊಟ್ಟೆ ಸರಿಯಾಗಿಲ್ಲವಾಗಿತ್ತು. ಹೀಗಾಗಿ ನಾನು ಮಿಸ್ ಆಗಿ ಯಾವುದೋ ಬೇರೆ ಮಾತ್ರೆ ತೆಗೆದುಕೊಂಡೆ. ರಾಜಕೀಯ ಒತ್ತಡ ನನಗಿಲ್ಲ. ಡಿಕೆ ಶಿವಕುಮಾರ ಅವರಿಗೆ ನನ್ನ ಬಗ್ಗೆ ಮಾತನಾಡುವುದು ರೂಢಿಯಾಗಿದೆ. ಅವರಲ್ಲಿ ಮನವಿ ಮಾಡಿಕೊಳ್ಳೂತ್ತೇನೆ, ಅವರು ಮೊದಲಿನಂತೆ ಮಾತನಾಡಬಾರಡು. ಮಾತನಾಡುವಾಗ ಯಾವ ರೀತಿ ಮಾತನಾಡಬೇಕು ಎನ್ನುವುದನ್ನ ಸಿದ್ದರಾಮಯ್ಯ ಅವರನ್ನು ನೋಡಿ ಕಲಿಯಲಿ’ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

‘ಯಡಿಯೂರಪ್ಪ ಬಗ್ಗೆ ಮಾತನಾಡಬೇಕಾದರೆ ಯೋಚನೆ ಮಾಡಿ ಮಾತನಾಡಿ. ನಮ್ಮ ನಾಯಕರ ಬಗ್ಗೆ ಮಾತನಾಡಬೇಕು ಅಂದರೆ ಎಚ್ಚರಿಕೆ ಇರಲಿ. ದಯವಿಟ್ಟು ಅವರಿಗೆ ರಜೆ ಕೊಟ್ಟು ಸುಧಾರಣೆಗೆ ಅವಕಾಶ ಕೊಡಿ. ನಾನು ಖಿನ್ನತೆಗೋಗುವಂತ ವ್ಯಕ್ತಿ ಅಲ್ಲ. ಯಾವುದೇ ಕಾರಣಕ್ಕೂ ಒತ್ತಡ, ಖಿನ್ನತೆ ನನಗೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ವಿಶ್ರಾಂತಿ ಬಳಿಕ ನಾನು ಯಡಿಯೂರಪ್ಪ ಅವರನ್ನು ಭೇಟಿ ಆಗುತ್ತೇನೆ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights