ಶಾಸಕ ಸಿದ್ದು ಸವದಿಯಿಂದ ನೂಕಾಟ- ತಳ್ಳಾಟಕ್ಕೆ ಒಳಗಾಗಿದ್ದ ಮಹಿಳಾ ಸದಸ್ಯೆಗೆ ಗರ್ಭಪಾತ..!

ಕೆಲ ದಿನಗಳ ಹಿಂದೆ ಭಾರೀ ವೈರಲ್ ಆಗಿದ್ದ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ವೇಳೆ ಶಾಸಕ ಸಿದ್ದು ಸವದಿ ಅವರಿಂದ ನೂಕಾಟ- ತಳ್ಳಾಟಕ್ಕೆ ಒಳಗಾಗಿದ್ದ ಮಹಿಳಾ ಸದಸ್ಯೆಯೊಬ್ಬರಿಗೆ ಗರ್ಭಪಾತವಾಗಿದೆ.

ಹೌದು… ನ.9 ರಂದು ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಆ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಬಿಜೆಪಿ ಸದಸ್ಯರು ಗೋದಾವರಿ, ಚಾಂದಿನಿ ನಾಯಕ್ ಹಾಗೂ ಸವಿತಾ ಹುರಕಡ್ಲಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದರು. ಕೇಂದ್ರದೊಳಗೆ ಬಿಡದೇ ಸೂಕಾಟ ತಳ್ಳಾಟ ನಡೆಸಿದ್ದರು. ಪೈಕಿ ಗಾಯಗೊಂಡಿದ್ದ ವಾರ್ಡ್ ಸಂ.4ರ ಸದಸ್ಯೆ ಚಾಂದಿನಿ ನಾಯಕ್ ಅವರಿಗೆ ಗರ್ಭಪಾತವಾಗಿದೆ. ಎಳೆದಾಟದಲ್ಲಿ ಹಲ್ಲೆಗೆ ಒಳಗಾಗಿದ್ದ ಚಾಂದಿನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಈಗ ಅವರಿಗೆ ಗರ್ಭಪಾತವಾಗಿರುವುದು ಬೆಳಕಿಗೆ ಬಂದಿದೆ.

ಸ್ವತ: ಶಾಸಕ ಸಿದ್ದು ಸವದಿ ಮಹಿಳಾ ಸದಸ್ಯರನ್ನು ಎಳೆದಾಡಿದ್ದರು. ಮಹಿಳಾ ಸದಸ್ಯರನ್ನು ಎಳೆದಾಡಿದ್ದ ವೀಡಿಯೋ ಭಾರೀ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಎಡೆಮಾಡಿತ್ತು. ಸದ್ಯ ಈ ಎಳೆದಾಟದಿಂದ ಚಾಂದನಿಗೆ ಗರ್ಭಪಾತವಾಗಿದೆ ಎಂದು ತಿಳಿದುಬಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights