ಭಾರತದಲ್ಲಿ ಅತಿ ಹೆಚ್ಚು ಸಂಬಳ ಸಿಗುವ ಟಾಪ್‌ 10 ಸರ್ಕಾರಿ ಹುದ್ದೆಗಳು!

ಭಾರತದಲ್ಲಿ ಪೋಷಕರಿಗೆ ತಮ್ಮ ಮಕ್ಕಳು ಸರ್ಕಾರಿ ಉದ್ಯೋಗವನ್ನೇ ಪಡೆದುಕೊಳ್ಳಬೇಕು ಎಂಬ ಹೆಬ್ಬಯಕೆ ಇದ್ದೇ ಇರುತ್ತದೆ. ಆತ ಶ್ರೀಮಂತನಾಗಿರಲಿ ಅಥವಾ ಬಡವನಾಗಿರಲಿ ಸರ್ಕಾರಿ ಉದ್ಯೋಗವೇ ಗ್ರೇಟ್‌. ಸರ್ಕಾರಿ ಉದ್ಯೋಗ ಪಡೆದುಕೊಂಡರೆ ತಮ್ಮ ಮಕ್ಕಳ ಲೈಫ್‌ ಸೆಟ್ಲ್‌ ಆಗುತ್ತೆ ಎಂಬುದು ಎಲ್ಲರ ಮನಸ್ಸಿನಲ್ಲಿಯೂ ಮನೆ ಮಾಡಿದೆ. ಈ ಸರ್ಕಾರಿ ಹುದ್ದೆಗಳ ಪೈಕಿ ಅತಿ ಹೆಚ್ಚು ಸಂಬಳ ಸಿಗುವ ಉದ್ಯೋಗಗಳು ಬೆರಳೆಣಿಕೆಯಷ್ಟಿವೆ.

ಭಾರತದಲ್ಲಿ ಅತೀ ಹೆಚ್ಚು ಸಂಬಳ ನೀಡಲಾಗುವ ಸರ್ಕಾರಿ ಹುದ್ದೆಗಳ ಪಟ್ಟಿ ಹೀಗಿದೆ:

​ವಿದೇಶಾಂಗ ಸಚಿವಾಲಯದ ಎಎಸ್‌ಒ ಹುದ್ದೆ

ವಿದೇಶಾಂಕ ಸಚಿವಾಲಯದ ಅಸಿಸ್ಟಂಟ್‌ ಸೆಕ್ಷನ್‌ ಆಫೀಸರ್ (ಎಎಸ್‌ಒ) ಹುದ್ದೆ ಪಡೆಯಬೇಕಾದರೆ ಸಿಬ್ಬಂದಿ ನೇಮಕಾತಿ ಆಯೋಗದ (ಎಸ್ಎಸ್‌ಸಿ) ಪರೀಕ್ಷೆಗಳಿಗೆ ತಯಾರಿ ನಡೆಸಬೇಕು. ವಿದೇಶಾಂಗ ಸಚಿವಾಲಯದ ಎಎಸ್‌ಒ ಹುದ್ದೆಗಳಿಗೆ ರೂ.1,25,000 ದಿಂದ ರೂ.1,80,000 ದವರೆಗೆ ವೇತನ ನೀಡಲಾಗುತ್ತದೆ.

​ಆರ್‌ಬಿಐ ಗ್ರೇಡ್ ಬಿ ಆಫೀಸರ್

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉನ್ನತ ಹುದ್ದೆ ಮತ್ತು ಉತ್ತಮ ಸಂಬಳ ಬಯಸುವ ಅಭ್ಯರ್ಥಿಗಳಿಗೆ ಆರ್‌ಬಿಐ ಗ್ರೇಡ್‌ ಬಿ ಆಫೀಸರ್ ಹುದ್ದೆ ಬೆಸ್ಟ್‌ ಪೋಸ್ಟ್‌ ಎಂದೇಳಬಹುದು. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗ್ರೇಡ್‌ ಬಿ ಆಫೀಸರ್ ಹುದ್ದೆಗೆ ಸಾಮಾನ್ಯವಾಗಿ ಮಾಸಿಕ ರೂ.67,000 ವೇತನ ನೀಡಲಾಗುತ್ತದೆ.

​ರಕ್ಷಣಾ ಸೇವೆ

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಕಂಬೈನ್ಡ್‌ ಡಿಫೆನ್ಸ್‌ ಸರ್ವೀಸ್, ಏರ್‌ಫೋರ್ಸ್‌ ಕಾಮನ್ ಅಡ್ಮಿಷನ್ ಟೆಸ್ಟ್ ಸೇರಿದಂತೆ ಇತರೆ ಹಲವು ಪರೀಕ್ಷೆಗಳನ್ನು ರಕ್ಷಣಾ ಸೇವೆಯ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುತ್ತದೆ. ಪ್ರೌಢಶಿಕ್ಷಣ ಮುಗಿಸಿದ ನಂತರ ಅಥವಾ ಪದವಿ ಶಿಕ್ಷಣ ಮುಗಿಸಿದ ನಂತರ ಯಾವಾಗ ಬೇಕಾದರೂ ಈ ಸೇವೆಗೆ ಸೇರಬಹುದು. ರಕ್ಷಣಾ ಇಲಾಖೆಯ ಹುದ್ದೆಗಳಿಗೆ ಆರಂಭಿಕ ವೇತನ ರೂ. 60,000 ದಿಂದ ಇರುತ್ತದೆ.

ಇಸ್ರೊ ಮತ್ತು ಡಿಆರ್‌ಡಿಒ ವಿಜ್ಞಾನಿ

ಯಾವುದೇ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಅಭ್ಯರ್ಥಿಗಳು ಈ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಡೆವಲಪಿಂಗ್ ಮತ್ತು ಸಂಶೋಧನೆ ಆಸಕ್ತರಿಗೆ ಇಲ್ಲಿ ಉತ್ತಮ ಭವಿಷ್ಯವಿದೆ. ಇಸ್ರೊ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿ ಹುದ್ದೆಗಳಿಗೆ ಆರಂಭಿಕ ವೇತನ ರೂ.60,000 ಇರುತ್ತದೆ.

​ಇಂಡಿಯನ್ ಫಾರಿನ್ ಸರ್ವೀಸ್

ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ನೇಮಕ ಮಾಡುವ ನಾಗರಿಕ ಸೇವಾ ಹುದ್ದೆಗಳಲ್ಲಿ ಇಂಡಿಯನ್‌ ಫಾರಿನ್‌ ಸರ್ವೀಸ್‌(ಐಎಫ್‌ಎಸ್‌) ಕೂಡ ಒಂದು. ಈ ಹುದ್ದೆಗೆ ಆಯ್ಕೆ ಆಗುವ ಅಧಿಕಾರಿಯು ಆರಂಭದಲ್ಲೇ ರೂ.60,000 ಕ್ಕಿಂತ ಹೆಚ್ಚು ಸಂಬಳ ಪಡೆಯುವುದರ ಜತೆಗೆ, ಇತರೆ ಹಲವು ಭತ್ಯೆಗಳು, ಉಪಯೋಗಗಳನ್ನು ಪಡೆಯಬಹುದು.

​ಭಾರತೀಯ ಅರಣ್ಯ ಸೇವೆ

ಪರಿಸರ ಪ್ರೇಮಿಗಳಿಗೆ ಅತಿ ಹೆಚ್ಚು ಹೊಂದಾಣಿಕೆಯಾಗುವ ಮತ್ತು ಇಷ್ಟವಾಗುವ ಉದ್ಯೋಗ ಭಾರತೀಯ ಅರಣ್ಯ ಸೇವೆ. ಆದರೆ, ಇತ್ತೀಚೆಗೆ ಈ ಹುದ್ದೆಗೆ ಸಂಬಳಕ್ಕಾಗಿ ಸೇರುವವರೇ ಹೆಚ್ಚಾಗಿದ್ದಾರೆ.  ಈ ಉದ್ಯೋಗ ಆಯ್ಕೆ ಮಾಡಿಕೊಂಡವರು ವನ್ಯಜೀವಿ ಮತ್ತು ಕಾಡು ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವುದು, ಅವುಗಳ ಸಂರಕ್ಷಣೆ ಮಾಡುವುದೇ ಅವರ ಜವಾಬ್ದಾರಿ ಆಗಿದೆ. ಇವರಿಗೆ ಆರಂಭಿಕ ವೇತನ ರೂ.52.000 ನೀಡಲಾಗುತ್ತದೆ.

​ಐಎಎಸ್ ಮತ್ತು ಐಪಿಎಸ್

ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್‌)ಗೆ ಸೇರಲು ಯುಪಿಎಸ್‌ಸಿ ನಡೆಸುವ ಸಿವಿಲ್ ಪರೀಕ್ಷೆ ತೆಗೆದುಕೊಳ್ಳಬೇಕು. ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ವಿವಿಧ ಸೇವೆಗಳಿಗೆ ಅಭ್ಯರ್ಥಿಗಳನ್ನು ನೀಯೋಜನೆ ಮಾಡಲಾಗುತ್ತದೆ. ಐಎಎಸ್ ಮತ್ತು ಐಪಿಎಸ್‌ ಅಧಿಕಾರಿಗಳಿಗೆ ಮಾಸಿಕ ರೂ.50,000 ದಿಂದ ಆರಂಭವಾಗುತ್ತದೆ. ಜತೆಗೆ ಇತರೆ ಭತ್ಯೆಗಳು ಮತ್ತು ಉಪಯೋಗಗಳು ಲಭ್ಯವಾಗಲಿದೆ.

​ಪಿಎಸ್‌ಯು ಜಾಬ್ಸ್‌ 

ಪಿಎಸ್‌ಯು ಅಥವಾ ಪಬ್ಲಿಕ್ ಸೆಕ್ಟಾರ್ ಅಂಡರ್‌ಟೇಕಿಂಗ್ ಜಾಬ್ಸ್‌ಗಳಿಗೆ ಇಂಜಿನಿಯರ್‌ ಪದವೀಧರರು ಅರ್ಜಿ ಸಲ್ಲಿಸಬಹುದು. ಪಿಎಸ್‌ಯು ಹುದ್ದೆಯ ಅಧಿಕಾರಿಗಳಿಗೆ ರೂ.52,000 ಮಾಸಿಕ ಸಂಭಾವನೆ ನೀಡಲಾಗುತ್ತದೆ.

​ರಾಜ್ಯ ಲೋಕಸೇವಾ ಆಯೋಗಗಳು

ರಾಜ್ಯ ಲೋಕಸೇವಾ ಆಯೋಗಗಳು (ಕರ್ನಾಟಕದಲ್ಲಿ ಕರ್ನಾಟಕ ಲೋಕಸೇವಾ ಆಯೋಗ) ನೇಮಕ ಮಾಡುವ ಗ್ರೂಪ್‌ ‘ಎ’ ಮತ್ತು ಗ್ರೂಪ್‌ ‘ಬಿ’ ಹುದ್ದೆಗಳಿಗೆ ಸಾಮಾನ್ಯವಾಗಿ ರೂ.45,000 ಮಾಸಿಕ ವೇತನದ ಜತೆಗೆ, ಇತರೆ ಭತ್ಯೆಗಳನ್ನು ನೀಡಲಾಗುತ್ತದೆ.

​ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕ ಹುದ್ದೆಗಳು

ಅತೀ ಹೆಚ್ಚು ಸಂಬಳ ನೀಡುವ ಮತ್ತು ಗೌರವಾನ್ವಿತ ಹುದ್ದೆಗಳ ಪೈಕಿ ಉಪನ್ಯಾಸಕ ಹುದ್ದೆಯು ಒಂದು. ಉಪನ್ಯಾಸಕ ಹುದ್ದೆಗಳಿಗೆ ರೂ.40,000 ದಿಂದ 1,00,000 ದವರೆಗೂ ವೇತನ ನೀಡಲಾಗುತ್ತದೆ.

ಮೇಲಿನ ಸರ್ಕಾರಿ ಹುದ್ದೆಗಳಿಗೆ ನೀಡಲಾದ ವೇತನ ಮಾಹಿತಿಯೂ ಆರಂಭಿಕ ವೇತನವಾಗಿದೆ. ಅದೇ ಹುದ್ದೆಗಳಲ್ಲಿ ಮುಂದುವರೆಯುವವರು ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಸಂಬಳ ಪಡೆಯುತ್ತಾ ಮುಂದುವರೆಯುತ್ತಾರೆ. ಅಲ್ಲದೆ, ಆ ಹುದ್ದೆಯಿಂದ ಮತ್ತೊಂದು ಉನ್ನತ ಹುದ್ದೆಗೆ ಭಡ್ತಿ ಸಹ ಪಡೆಯುತ್ತಾರೆ.


ಇದನ್ನೂ ಓದಿ: ಎಂಪಿಎಂ ಅರಣ್ಯ: ಸಿದ್ದರಾಮಯ್ಯ ಮಾಡಿದ ಲೋಪ ಬಿಜೆಪಿಗೆ ವರದಾನವಾಯಿತೇ?

Spread the love

Leave a Reply

Your email address will not be published. Required fields are marked *