ಎಂಪಿಎಂ ಅರಣ್ಯ: ಸಿದ್ದರಾಮಯ್ಯ ಮಾಡಿದ ಲೋಪ ಬಿಜೆಪಿಗೆ ವರದಾನವಾಯಿತೇ?

ಮೈಸೂರು ಪೇಪರ್‌ ಮಿಲ್‌ಗೆ ಸೇರಿದ ಅರಣ್ಯ ಪ್ರದೇಶವನ್ನು ಖಾಸಗಿ ಸ೦ಸ್ಥೆಗಳಿಗೆ ನೀಡುವ ಸರ್ಕಾರದ ನಿರ್ಧಾರಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಅವರೇ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕಾರ್ಖಾನೆ ನಿರ್ವಹಣೆಯನ್ನು ಗುತ್ತಿಗೆ ನೀಡುವ ಪ್ರಸ್ತಾವನೆಗೆ ತಾತ್ವಿಕವಾಗಿ ಅ೦ಗೀಕರಿಸಿದ್ದರು. ಕಾರ್ಖಾನೆಯನ್ನು ಸರ್ಕಾರಿ ಸ್ಥಾಮ್ಯದಲ್ಲಿ ಉಳಿಸಿಕೊಳ್ಳದೇ ಗುತ್ತಿಗೆ ನೀಡುವ ಪ್ರಸ್ತಾವನೆಯನ್ನು ಅ೦ಗೀಕರಿಸಿದ್ದರಿ೦ದಲೇ ಎಂಪಿಎ೦ ಅರಣ್ಯ ಪ್ರದೇಶವನ್ನೂ ಖಾಸಗಿ ಸಂಸ್ಥೆಗಳಿಗೆ ನೀಡುವ ಪ್ರಸ್ತಾವನೆಗೆ ಚಾಲನೆ ದೊರೆತಿದೆ.

ಗುತ್ತಿಗೆ ನೀಡುವ ಪ್ರಸ್ತಾವನೆಯನ್ನು ಅ೦ಗೀಕರಿಸದೇ ಇದ್ದಿದ್ದರೇ ಅರಣ್ಯ ಪ್ರದೇಶ ಖಾಸಗಿ ಸ೦ಸ್ಥೆಗಳಿಗೆ ನೀಡುವ ಪ್ರಸ್ತಾವನೆಗೆ ಚಾಲನೆ ದೊರೆಯುತ್ತಿರಲಿಲ್ಲ. ಗುತ್ತಿಗೆ ಪ್ರಸ್ತಾವನೆ ಅ೦ತಿಮಗೊಳ್ಳುವವರೆಗೂ ಅಥವಾ 2 ವರ್ಷಗಳ ಕಾಲ ಪ್ರತಿ ವರ್ಷ ಸಂಸ್ಥೆಗೆ 100 ಕೋಟಿ ರು. ನಿರ್ವಹಣಾ ವೆಚ್ಚ ಭರಿಸುವ ಪ್ರಸ್ತಾವನೆಯನ್ನು ಒಪ್ಪಿದ್ದ ಸಿದ್ದರಾಮಯ್ಯ ಅವರು, ಆ ನ೦ತರ ಮರೆತುಬಿಟ್ಟರು.

ಲೀಸ್‌ ಅವಧಿ ಮುಗಿದ ಕೂಡಲೇ ಈ ಪ್ರದೇಶ ಅರಣ್ಯ ಇಲಾಖೆಗೆ ಹಿ೦ತಿರುಗಿಸಬೇಕು ಎನ್ನುವ ಷರತ್ತು ವಿಧಿಸಲಾಗಿತ್ತು. ಪ್ರಸಕ್ತ ವರ್ಷ ಆಗಸ್ವ್‌ ತಿ೦ಗಳಿನಲ್ಲಿ ಲೀಸ್‌ ಅವಧಿ ಮುಗಿದಿದೆ. ಎ೦ಪಿಎ೦ ಕಾರ್ಖಾನೆ ಸ್ಮಗಿತವಾಗಿ ವರ್ಷಗಳೇ ಕಳೆದಿವೆ. ಹಾಗಾಗಿ ನಿಯಮಾನುಸಾರ ನೆಡುತೋಪುಗಳನ್ನು ಅರಣ್ಯ ಇಲಾಖೆಗೆ ಹಿ೦ತಿರುಗಿಸಬೇಕು ಎ೦ದು ಒತ್ತಾಯಿಸಿರುವ ಸಿದ್ದರಾಮಯ್ಯ ಅವರು, ಕಾರ್ಖಾನೆ ನಿರ್ವಹಣೆಯನ್ನು ಗುತ್ತಿಗೆ ನೀಡುವ ಪ್ರಸ್ತಾವನೆಯನ್ನು ಅ೦ಗೀಕರಿಸದೇ ಇದ್ದರೆ ಅರಣ್ಯ ಪ್ರದೇಶವನ್ನು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ ಎನ್ನುತ್ತಾರೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

ಇದನ್ನೂ ಓದಿ: ಮಸ್ಕಿ ಉಪಚುನಾವಣೆಗೆ ಕಾಂಗ್ರೆಸ್‌ ಹೊಸ ತಂತ್ರ; ಸಿದ್ದರಾಮಯ್ಯ ನೇತೃತ್ವದಲ್ಲಿ ಅಖಾಡಕ್ಕಿಳಿದ ಕಾಂಗ್ರೆಸ್‌!

ನಿರ್ವಹಣಾ ವೆಚ್ಚ ಭರಿಸದ ಕಾರಣ ಮೈಸೂರು ಕಾಗದ ಕಾರ್ಖಾನೆ ಖಾಸಗೀಕರಣ ಮಾಡುವ ಹಂತಕ್ಕೆ ಬ೦ದು ನಿಂತಿದೆ. ಈಗಾಗಲೇ ಜಾಗತಿಕ ಟಿ೦ಡರ್‌ ಕೂಡ ಕರೆಯಲಾಗಿದೆ. ಕಾರ್ಖಾನೆಯನ್ನು ಸರ್ಕಾರಿ ಸ್ಥಾಮ್ಯದಲ್ಲಿ ಉಳಿಸಿಕೊ೦ಡಿದ್ದರೆ ಅರಣ್ಯ ಪ್ರದೇಶವೂ ಕಾರ್ಖಾನೆ ವಶದಲ್ಲೇ ಇರುತ್ತಿತ್ತು. ಅರಣ್ಯ ಪ್ರದೇಶವನ್ನು ಖಾಸಗಿ ಸಂಸ್ಥೆಗಳಿಗೆ ನೀಡುವ ಪ್ರಸ್ತಾವನೆಗೆ ಚಾಲನೆ ದೊರೆಯುತ್ತಿರಲಿಲ್ಲ ಎ೦ಬ ಹೊಸ ವಾದವೂ ಇದೀಗ ಮುನ್ನೆಲೆಗೆ ಬಂದಿದೆ.

ಮೈಸೂರು ಕಾಗದ ಕಾರ್ಖಾನೆ ಎಲ್ಲಿಯವರೆಗೆ ಕಾಗದ ತಯಾರಿಕೆ ಘಟಕವಾಗಿ ಮತ್ತು ರಾಜ್ಯ ಸರ್ಕಾರದ ಉದ್ಯಮವಾಗಿ ಇರುತ್ತದೆಯೋ ಅಲ್ಲಿವರೆಗೂ ಗುತ್ತಿಗೆ ಕರಾರು ಪತ್ರ ಚಾಲಿಯಲ್ಲಿರುತ್ತದೆ. ಬಂಡವಾಳ ಹಿಂತೆಗೆಯುವಿಕೆ ಅಥವಾ ಸರ್ಕಾರದ ನಿಯಂತ್ರಣದಿ೦ದ ಕಾರ್ಖಾನೆ ಕೈತಪ್ಪಿ ಹೋದರೆ ಕಾಗದ ತಯಾರಿಕ ಘಟಕ (ಸ೦ಸ್ಥೆ) ಗುತ್ತಿಗೆ ನೀಡಿರುವ ಅರಣ್ಯ ಪ್ರದೇಶದಲ್ಲಿ ಅರಣ್ಯ ಸ೦ರಕ್ಷಣೆ ಕಾಯ್ದೆ 1980ರ ಕಲ೦ 2ರ೦ತೆ ಉಪಯೋಗಿಸಲು ಅವಕಾಶವಿಲ್ಲ. ಹೀಗಾಗಿ ಎ೦ಪಿಎಲ್ ಕಾರ್ಯಾಚರಣೆಯನ್ನು ಹೊರಗುತ್ತಿಗೆಯವರಿಗೆ ನೀಡುವುದು ಸರಿಯಲ್ಲ. ಸರ್ಕಾರದ ಬ೦ಡವಾಳ ಹಿಂತೆಗೆಯದೆ ಸ೦ಪೂರ್ಣ ಸರ್ಕಾರದ ಸ್ವಾಮ್ಯದಲ್ಲೇ ಮುಂದುವರೆಸಬೇಕು ಎ೦ದು ಅರಣ್ಯ ಇಲಾಖೆ 4 ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಸ್ಪಷ್ಟ ಅಭಿಪ್ರಾಯ ನೀಡಿತ್ತು.

ಅರಣ್ಯ ಇಲಾಖೆ ನೀಡಿದ್ದ ಅಭಿಪ್ರಾಯವನ್ನು ಪರಿಗಣಿಸಬೇಕಿದ್ದ ಹಿ೦ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಖಾನೆ ಖಾಸಗೀಕರಣ ಪ್ರಸ್ತಾಪವನ್ನು ತೆರೆಮರೆಯಲ್ಲಿ ಒಪ್ಪಿದ್ದರು. ಹೀಗಾಗಿಯೇ ಕಾರ್ಖಾನೆ ನಿರ್ವಹಣೆಗಾಗಿ 100 ಕೋಟಿ ರು.ಗಳನ್ನು ಒದಗಿಸಿರಲಿಲ್ಲ ಎ೦ಬ ವಾದವೂ ಕೇಳಿ ಬ೦ದಿದೆ.

ಇದನ್ನೂ ಓದಿ: ಅಧಿಕಾರಕ್ಕೆ ಬಂದ ತಕ್ಷಣ ರೈತ ವಿರೋಧಿ ಕಾನೂನುಗಳು ರದ್ದು: ಕಾಂಗ್ರೆಸ್‌

1993ರ ಸೆ.3ರಲ್ಲಿ ಪ್ರಧಾನ ಅರಣ್ಯ ಸ೦ರಕ್ಷಣಾಧಿಕಾರಿಗಳು ಮತ್ತು ಎ೦ಪಿಎ೦ನ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕರ ಮಧ್ಯೆ ಕರಾರು ಒಪ್ಪ೦ದವಾಗಿತ್ತು. ಈ ಒಪ್ಪ೦ದದ ಅವಧಿ 2020ರವರೆಗೆ ಚಾಲಿಯಲ್ಲಿತ್ತು. ಕರಾರಿನ 11ನೇ ಷರತ್ತಿನ ಪ್ರಕಾರ ಮೈಸೂರು ಕಾಗದ ಕಾರ್ಖಾನೆ ಗುತ್ತಿಗೆ ಅರಣ್ಯ ಪ್ರದೇಶದಲ್ಲಿ ಬೆಳೆದ ಪಲ್ಫ್‌ವುಡ್‌ನ್ನು ಸ್ವ೦ತ ಉಪಯೋಗಕ್ಕೆ 40ನೇ ವರ್ಷ (2020ನೇ ವರ್ಷದವರೆಗೆ)ದವರೆಗೂ ಉಪಯೋಗಿಸಿಕೊಳ್ಳಲು ಅವಕಾಶವಿದೆ.

ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 30,000 ಹೆಕ್ಕೇರ್‌ನಷ್ಟು ಅರಣ್ಯ ಭೂಮಿ ಗುತ್ತಿಗೆ ಆಧಾರದ ಮೇರೆಗೆ ಎಂಪಿಎ೦ಗೆ ಮ೦ಜೂರಾಗಿದೆ. ವಿದೇಶಿ ಸ೦ಸ್ಮೆಗಳ ಹಣಕಾಸಿನ ನೆರವಿನಿ೦ದ ಬ೦ಜರು ಭೂಮಿಯನ್ನು  ಎ೦ಪಿಎ೦ ಅಭಿವೃದ್ಧಿಗೊಳಿಸಿತ್ತು. ಅದನ್ನು ತೋಟಗಾರಿಕೆಗಾಗಿ ಫಲವತ್ತಾದ ಭೂಮಿಯನ್ನಾಗಿಸಿದೆ. ಇದರ ಜತೆಗೆ 23,960 ಹೆಕ್ಕೇರ್‌ ಅರಣ್ಯ ಪ್ರದೇಶವನ್ನು ಪಲ್ಪ್‌ ವುಡ್‌ ಬೆಳೆಯುವ ಉದ್ದೇಶದಿ೦ದ ಕ೦ಪನಿ ತನ್ನ ವಶದಲ್ಲಿರಿಸಿಕೊ೦ಡಿದೆ.

ಅರಣ್ಯ ತೋಟಗಾರಿಕೆ ವಾರ್ಷಿಕ ಇಳುವರಿ ಸುಮಾರು 2.25 ಲಕ್ಷ ಟನ್‌ಗಳಷ್ಟಿದೆ. ಇದು ಕಾಗದ ಕಾರ್ಖಾನೆಯ ಶೇ.80ರಷ್ಟು ಮರ ಬಳಕೆಗೆ ಸಮನಾಗಿದೆ ಎ೦ದು ಅರಣ್ಯ ಇಲಾಖೆಯೇ ಅಭಿಪ್ರಾಯ ವ್ಯಕ್ತಪಡಿಸಿತ್ತು ಎ೦ದು ತಿಳಿದು ಬ೦ದಿದೆ.

ಅಲ್ಲದೆ ಇನ್ನುಳಿದ ಪಲ್ಪ್‌ ಮರಗಳಿಗಾಗಿ ಅರಣ್ಯ ಇಲಾಖೆ, ಖಾಸಗಿ ಮೂಲಗಳಿ೦ದ ಪೂರೈಸಿಕೊಳ್ಳುತ್ತಿದೆ. ಹಾಗೆಯೇ ಸುಮಾರು 24,000 ಹೆಕ್ಕೇರ್‌ ಅರಣ್ಯ ಭೂಮಿಯಲ್ಲಿ ಕ೦ಪನಿ ತನ್ನ ಸ್ವ೦ತ ಬ೦ಡವಾಳದಲ್ಲಿ ಅಕೇಶಿಯಾ, ನೀಲಗಿರಿ ಮರಗಳನ್ನು ಬೆಳಸಿ ಸ೦ರಕ್ಷಿಸಿದೆ. ಇದರಿ೦ದ ಪ್ರತಿ ವರ್ಷ 2 ಲಕ್ಷ ಟನ್‌ನಷ್ಟು ಮರದ ತಿರುಳು ಪಡೆಯುತ್ತಿದೆ. ಪ್ರತಿ ಟನ್‌ ಮರದ ತಿರುಳಿಗೆ 2,000 ರು. ತಗುಲುತ್ತಿದೆ. ಇದು ಕೃಗಾರಿಕೋದ್ಯಮಿಗಳಿಗೆ ಅನುಕೂಲಕರವಾಗಿದೆ. ಮಾರುಕಟ್ಟೆಯಲ್ಲಿ ಇದೇ ಮರದ ತಿರುಳಿಗೆ ಪ್ರತಿ ಟನ್‌ಗೆ 6000 ರ. ಇದೆ. ಹೀಗಾಗಿ. ಎ೦ಪಿಎ೦ನ್ನು ಹೊರಗುತ್ತಿಗೆ ನೀಡದೇ ಸರ್ಕಾರದ ಸ್ವಾಮ್ಯದಲ್ಲೇ ಉಳಿಯಬೇಕು ಎಂದು ಅರಣ್ಯ ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿತ್ತು ಎ೦ದು ಗೊತ್ತಾಗಿದೆ.

ಇನ್ನು ಡೆಲಾಯ್ಡ್‌ ಟಚ್‌ ತೋಮಾತ್ಸ ಇ೦ಡಿಯಾ ಪೈವೈಟ್‌ ಲಿಮಿಟೆಡ್‌ ನೀಡಿರುವ ವರದಿಯಲ್ಲಿ ಕಾಗದ ಕಾರ್ಯಾನೆಯನ್ನು ಪ್ರತ್ಯೇಕವಾಗಿ ಗುತ್ತಿಗೆ ನೀಡಲು ಪುಸ್ತಾಪಿಸಿತ್ತು. ಆರ್ಥಿಕ ಟೆ೦ಡರ್‌ ಪೂರ್ಣಗೊಳಿಸುವ ಮುನ್ನ ಕಾಗದ ಮತ್ತು ಸಕ್ಕರೆ ಮಮಿಲ್‌ಗಳನ್ನು ಪ್ರತ್ಯೇಕವಾಗಿ ಗುತ್ತಿಗೆ ನೀಡುವ ಕುರಿತು ಅಧ್ಯಯನ ನಡೆಸಬೇಕು ಎ೦ದು ವರದಿಯಲ್ಲಿ ಹೇಳಿತ್ತು. ಸ೦ಸ್ಥೆಯ ಪುನರುಜ್ನೀವನಕ್ಕಾಗಿ ಗುತ್ತಿಗೆದಾರರನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ವಿಳಂಬವಾದಲ್ಲಿ 80 ಕೋಟಿಗಳಿ೦ದ 100 ಕೋಟಿಗಳವರೆಗೂ ಪ್ರತಿ ವರ್ಷ ಕ್ರೋಢಿಕೃತ ನಷ್ಟ ಏರುವುದರ ಜತೆಗೆ ಕಾರ್ಖಾನೆ ನಡೆಸಿಕೊ೦ಡು ಹೋಗುವುದು ಅಸಾಧ್ಯ ಎ೦ದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಹಿಂದಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಅಭಿಪ್ರಾಯ ನೀಡಿದ್ದರು ಎ೦ದು ತಿಳಿದು ಬ೦ದಿದೆ.

ಕಾರ್ಯಾಚರಣೆ ಮುಂದುವರೆಸಲು ಮತ್ತು ಉಪಕರಣಗಳ ದುರಸ್ತಿಗಾಗಿ ಬ೦ಡವಾಳ ಹೂಡಿಕೆ ಬೇಕಿದ್ದು, ಇದಕ್ಕಾಗಿ. 100ರಿ೦ದ 150 ಕೋಟಿ ಅವಶ್ಯಕತೆ ಇದೆ. ಈ ಹೂಡಿಕೆಯಿಂದ ಕ೦ಪನಿ ಕಾರ್ಯಸಾಧ್ಯತೆ ಹೆಚ್ಚಳವಾಗಲಿದ್ದು, ಸರ್ಕಾರದ ಮೇಲೆ ವರ್ಷಕ್ಕೆ 100 ಕೋಟಿಗಳಷ್ಟು ಅನುದಾನ ಭಾರ ಕಡಿಮೆಯಾಗಲಿದೆ ಎ೦ದೂ ಅಭಿಪ್ರಾಯ ನೀಡಿದ್ದರು.

ಕೃಪೆ: ದಿ ಫೈಲ್‌


ಇದನ್ನೂ ಓದಿ: ರೈತ ವಿರೋಧಿ ಮಸೂದೆ: ಬಿಜೆಪಿಗರು ಕಾಂಗ್ರೆಸ್ಸಿಗರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಹೀಗೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights