ಫ್ಯಾಕ್ಟ್‌ಚೆಕ್ : ಯೋಗಿ ಆದಿತ್ಯನಾಥ್ ‘ಇಸ್ಲಾಂ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದು ನಿಜವೇ?

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ‘ಇಸ್ಲಾಂ ಜಿಂದಾಬಾದ್’ ಎಂದು ಹೇಳಿರುವ ವಿಡಿಯೊವನ್ನು ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಭಾಷಣದ ವೇಳೆ ‘ಇಸ್ಲಾಂ ಜಿಂದಾಬಾದ್’ ಘೋಷಣೆಯನ್ನು ಕೂಗಿದ್ದಾರೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಭಾಷಣದ ವೇಳೆ ‘ಇಸ್ಲಾಂ ಜಿಂದಾಬಾದ್’ ಘೋಷಣೆಯನ್ನು ಕೂಗಿದ್ದಾರೆ ಎನ್ನುವ ವೈರಲ್ ವಿಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಅಂತರ್ಜಾಲದಲ್ಲಿ ಯೋಗಿ ಆದಿತ್ಯನಾಥ್ ಅವರ  ಭಾಷಣಗಳ ಹಲವು ವಿಡಿಯೋಗಳನ್ನು ಸರ್ಚ್ ಮಾಡಿದಾಗ ಮೂಲ ತುಣುಕನ್ನು ಪತ್ತೆಹಚ್ಚಲು ಸಾಧ್ಯವಾಯಿತು.

ಯೋಗಿ ಆದಿತ್ಯನಾಥ್ ಅವರ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ವೈರಲ್ ವೀಡಿಯೊಗದೊಂದಿಗೆ ಹೋಲಿಕೆಯಾಗುವ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಇದು 08 ಜೂನ್ 2022 ರಂದು ನಡೆದ ‘ಗರೀಬ್ ಕಲ್ಯಾಣ್ ಸಭಾ’ ಕಾರ್ಯಕ್ರಮದ ಲೈವ್ ಸ್ಟ್ರೀಮ್ ಆಗಿದೆ.

ಈ ವಿಡಿಯೊದಲ್ಲಿ ಯೋಗಿ ಆದಿತ್ಯನಾಥ್ ತಮ್ಮ ಭಾಷಣದ ಆಂರಭದಲ್ಲಿ ಭಾರತ್ ಮಾತಾ ಕಿ ಎಂಧು ಘೋಷಣೆ ಕೂಗಿದಾಗ ವೇದಿಕೆಯ ಮುಂದೆ ಇದ್ದ ಜನರು ಜೈ ಎಂದು ಹೇಳುತ್ತಾರೆ. ಹಾಗೆಯೆ ಮುಂದುವರೆದು ಯೋಗಿ ‘ವಂದೇ’ ಎಂದಾಗ ಜನರು ಮಾತರಂ ಎಂದು ಕೂಗುತ್ತಾರೆ. ಭಾರತ ಮತಾ ಕೀ ಜೈ ಮತ್ತು ವಂದೇ ಮಾತರಂ ಘೋಷಣೆ ಇರುವ ಜಾಗದಲ್ಲಿ ಎಡಿಟ್ ಮಾಡಿ ಇಸ್ಲಾಂ ಜಿಂದಾಬಾದ್ ಎನ್ನುವ ಬೇರೆ ಆಡಿಯೋವನ್ನು ಸೇರಿಸಿ ವೈರಲ್ ವಿಡಿಯೊವನ್ನು ರಚಿಸಿರುವುದು ಸ್ಪಷ್ಟವಾಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ‘ಇಸ್ಲಾಂ ಜಿಂದಾಬಾದ್’ ಘೋಷಣೆಗಳನ್ನು ಎಡಿಟ್ ಮಾಡಿದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಂಆಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಸಾವರ್ಕರ್‌ರನ್ನು ಮೊಹಮ್ಮದ್ ಅಲಿ ಜಿನ್ನಾ ಸ್ವಾಗತಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights